Infinix Note 40X 5G Smartphone: ನಿಮಗೆ ಹೊಸ ಸ್ಮಾರ್ಟ್ಫೋನ್ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮತ್ತು ಲೇಟೆಸ್ಟ್ ಫೀಚರ್ ಹೊಂದಿರುವ ಸ್ಮಾರ್ಟ್ಫೋನ್ ಬೇಕಿದ್ದರೆ ಈ ಫ್ಲಿಪ್ಕಾರ್ಟ್ ಡೀಲ್ ನಿಮಗಾಗಲಿದೆ. ಯಾಕೆಂದರೆ ನೀವು ಸುಮಾರು 12,000 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಲೇಟೆಸ್ಟ್ 5G Smartphone ಬೆಸ್ಟ್ ಕ್ಯಾಮೆರಾ ಮತ್ತು ಪವರ್ಫುಲ್ ಕಾರ್ಯಕ್ಷಮತೆಯೊಂದಿಗೆ ಫ್ಲಿಪ್ಕಾರ್ಟ್ ಮಾರಾಟ ಮಾಡುತ್ತಿದೆ. ಈ Infinix Note 40X 5G ವಿಶೇಷತೆ ಬಗ್ಗೆ ಮತಾನಾಡುವುದಾದರೆ ಈ ಫೋನ್‌ನಲ್ಲಿ ಹಿಂಭಾಗದಲ್ಲಿ 108MP + 2MP + AI Lens ಪ್ರೈಮರಿ ಕ್ಯಾಮೆರಾ ಮತ್ತು ಬರೋಬ್ಬರಿ 12GB RAM ಸಪೋರ್ಟ್ ಜೊತೆಗೆ ಬರುತ್ತದೆ.
ಈ ಲೇಟೆಸ್ಟ್ Infinix Note 40X 5G ನಿಮಗೆ ಫೋನ್ ಸ್ಲೋ ಮತ್ತು ಸ್ಟೋರೇಜ್ ತಲೆನೋವಿನಿಂದ ದೂರವಿಡುತ್ತದೆ. ಯಾಕೆಂದರೆ ಇದರಲ್ಲಿನ RAM ಫೀಚರ್ ತುಂಬ ಉತ್ತಮ ಮತ್ತು ವಿಶೇಷವಾಗಿದೆ. ಹೇಗೆಂದರೆ ಈ ಫೋನ್‌ನ 12GB ಸ್ಟ್ಯಾಂಡೇರ್ಡ್ ಮತ್ತು 12GB ವರ್ಚುಯಲ್ RAM ಒಟ್ಟಾರೆಯಾಗಿ ನಿಮಗೆ ಈ ಫೋನ್ 24GB ವರೆಗೆ ಸಪೋರ್ಟ್ ಮಾಡುವ ಮೆಮೊರಿಯನ್ನು ನೀಡುತ್ತದೆ. ಈ Infinix Note 40X 5G ಸ್ಮಾರ್ಟ್ಫೋನ್ ಅನ್ನು ನೀವು ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಪಡೆಯಬಹುದು.
Also Read: Vivo Y300 5G ಸ್ಮಾರ್ಟ್ಫೋನ್ ಬಿಡುಗಡೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಅಮೆಜಾನ್ ಈ ಲೇಟೆಸ್ಟ್ Infinix Note 40X 5G ವಿಶೇಷ ಡೀಲ್‌ನಲ್ಲಿ ಬಂಪರ್ ರಿಯಾಯಿತಿಯೊಂದಿಗೆ ಲಭ್ಯವಿದೆ. 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಫ್ಲಿಪ್ಕಾರ್ಟ್ ಅಲ್ಲಿ ಸುಮಾರು ₹13,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಯಾವುದೇ ಬ್ಯಾಂಕ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಈ ಫೋನ್ ಮೇಲೆ ಮತ್ತೆ 1,000 ರೂವರೆಗಿನ ರಿಯಾಯಿತಿ ಪಡೆಯಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್ ಫೋನ್ ನೀಡಿ ಸುಮಾರು 1,500 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಮೂಲಕ ಈ ಲೇಟೆಸ್ಟ್ Infinix Note 40X 5G ಸ್ಮಾರ್ಟ್ಫೋನ್ ಕೇವಲ ₹11,499 ರೂಗಳಿಗೆ ಫ್ಲಿಪ್ಕಾರ್ಟ್ ಮೂಲಕ ಪಡೆಯಬಹುದು.
Infinix Note 40X 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಸಾಧನವು ಪಂಚ್ ಹೋಲ್ ಡಿಸ್ಪ್ಲೇ ಮತ್ತು DTS ಸೌಂಡ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. ಗೌಪ್ಯತೆಗಾಗಿ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯದೊಂದಿಗೆ ಬರುತ್ತದೆ.
Infinix Note 40X 5G ಸ್ಮಾರ್ಟ್ಫೋನ್ 108MP ಮೆಗಾಪಿಕ್ಸೆಲ್ ಟ್ರಿಪಲ್ AI ಕ್ಯಾಮೆರಾ ಸೆಟಪ್ ಅನ್ನು ಕ್ವಾಡ್-ಎಲ್ಇಡಿ ಫ್ಲ್ಯಾಶ್‌ನಿಂದ ಪೂರಕವಾಗಿದೆ. ಇದು AI ಕ್ಯಾಮ್, ಪೋರ್ಟ್ರೇಟ್ ಮೋಡ್, ಏಕಕಾಲದಲ್ಲಿ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ ರೆಕಾರ್ಡಿಂಗ್‌ಗಾಗಿ ಡ್ಯುಯಲ್ ವಿಡಿಯೋ ಮೋಡ್, ಪ್ರೊ ಮೋಡ್ ಮತ್ತು ಸಿನಿಮೀಯ ವಿಡಿಯೋ ಕ್ಯಾಪ್ಚರ್‌ಗಾಗಿ ಫಿಲ್ಮ್ ಮೋಡ್ ಸೇರಿದಂತೆ 15 ಕ್ಕೂ ಹೆಚ್ಚು ಕ್ಯಾಮೆರಾ ಮೋಡ್‌ಗಳನ್ನು ಒಳಗೊಂಡಿದೆ. 8MP ಮೆಗಾಪಿಕ್ಸೆಲ್ ಫ್ರಂಟ್ ಸೆಲ್ಫಿ ಕ್ಯಾಮೆರಾ ಮೀಸಲಾದ LED ಫ್ಲ್ಯಾಷ್‌ನೊಂದಿಗೆ ಬರುತ್ತದೆ.
ಈ ಸ್ಮಾರ್ಟ್ಫೋನ್ UFS 2.2 ಸ್ಟೋರೇಜ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಇದರಲ್ಲಿ MediaTek Dimensity 6300 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗುತ್ತದೆ. ಈ ಸ್ಮಾರ್ಟ್ಫೋನ್ XOS 14 ಬಳಕೆದಾರ ಇಂಟರ್‌ಫೇಸ್‌ನೊಂದಿಗೆ ಆವರಿಸಿದೆ. ಸ್ಮಾರ್ಟ್ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು AI ಚಾರ್ಜ್ ವೈಶಿಷ್ಟ್ಯವನ್ನು ಸಹ ಹೊಂದಿದೆ.