Infinix Hot 30i: ನಂಬಿದ್ರೆ ನಂಬಿ ₹8999ಕ್ಕೆ ರೂಗಳಿಗೆ 8GB/128GB ಪಕ್ಕಾ ಯಾರು ಕೊಡಲ್ಲ!
ಇನ್ಫಿನಿಕ್ಸ್ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ ಹಾಟ್ ಸರಣಿಯಲ್ಲಿ Infinix Hot 30i ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
Infinix Hot 30i ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಆಕರ್ಷಕ ಕ್ಯಾಮೆರಾ, ಡಿಸ್ಪ್ಲೇ ನೀಡಲಾಗಿದೆ.
Infinix Hot 30i ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ.
ಇನ್ಫಿನಿಕ್ಸ್ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ ಹಾಟ್ ಸರಣಿಯಲ್ಲಿ Infinix Hot 30i ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯ ಹಾಟ್ ಸರಣಿಯ ಅಡಿಯಲ್ಲಿ ಇದನ್ನು ಪರಿಚಯಿಸಲಾಗಿದೆ. ಇದು MediaTek G37 ಪ್ರೊಸೆಸರ್ ಮತ್ತು 8 GB RAM ಅನ್ನು ನೀಡಲಾಗಿದೆ. ಅಲ್ಲದೆ 5000 mAh ಬ್ಯಾಟರಿಯನ್ನು ನೀಡಲಾಗಿದೆ. ಅಲ್ಲದೆ 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು. ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಆಕರ್ಷಕ ಕ್ಯಾಮೆರಾ, ಡಿಸ್ಪ್ಲೇ ನೀಡಲಾಗಿದೆ.
Infinix HOT 30i ಬೆಲೆ ಮತ್ತು ಲಭ್ಯತೆ:
ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 30i ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮುಂದಿನ ತಿಂಗಳು ಎಪ್ರಿಲ್ 3 ರಂದು ಮಧ್ಯಾಹ್ನ 12 ಗಂಟೆಯಿಂದ ಸೇಲ್ ಕಾಣಲಿದೆ. ಈ ಫೋನನ್ನು ನೀವು ಡೈಮಂಡ್ ವೈಡ್, ಗ್ಲಾಸಿಯರ್ ಬ್ಲೂ ಮತ್ತು ಮಿರರ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು.
And it's here!
The #SmartphonesKaBAAP, yaane ki Infinix ka naya #HOT30i is here at a special launch day price of just Rs. 8,999!
Sales start 3rd April, 12 noon, only on @flipkart pic.twitter.com/87jd3JtZ9D
— Infinix India (@InfinixIndia) March 27, 2023
Infinix Hot 30i ನ ವೈಶಿಷ್ಟ್ಯಗಳು:
ಈ ಫೋನ್ Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.6 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಫೋನ್ 90 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಪಾಂಡ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ. ಈ ಫೋನ್ ಆಕ್ಟಾ-ಕೋರ್ 6nm MediaTek Helio G37 ಪ್ರೊಸೆಸರ್ ಅನ್ನು ಹೊಂದಿದೆ. ಇದಕ್ಕೆ 8GB RAM ನೀಡಲಾಗಿದೆ. ಇದನ್ನು 16GB ವರೆಗೆ ವಿಸ್ತರಿಸಬಹುದು.
ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಇದು 50 ಮೆಗಾಪಿಕ್ಸೆಲ್‌ಗಳ ಮೊದಲ ಸಂವೇದಕ ಮತ್ತು ಎರಡನೇ AI ಲೆನ್ಸ್ ಅನ್ನು ಹೊಂದಿದೆ. ಫೋನ್ 5 ಮೆಗಾಪಿಕ್ಸೆಲ್‌ಗಳ ಮುಂಭಾಗದ ಸಂವೇದಕವನ್ನು ಹೊಂದಿದೆ. ಫೋನ್ 128GB ಸ್ಟೋರೇಜ್ ಅನ್ನು ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಇದನ್ನು 1TB ವರೆಗೆ ಹೆಚ್ಚಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile