32MP ಸೆಲ್ಫಿ ಕ್ಯಾಮೆರಾದ Infinix GT 20 Pro ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

32MP ಸೆಲ್ಫಿ ಕ್ಯಾಮೆರಾದ Infinix GT 20 Pro ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಇನ್ಫಿನಿಕ್ಸ್ ಮುಂದಿನ ತನ್ನ ಈವೆಂಟ್‌ನಲ್ಲಿ ಕಂಪನಿಯು Infinix GT 20 Pro ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.

Infinix GT 20 Pro ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ 21ನೇ ಮೇ 2024 ರಂದು ಬಿಡುಗಡೆ ಕಂಫಾರ್ಮ್ ಮಾಡಿದೆ.

Infinix GT 20 Pro ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲದೊಂದಿಗೆ ಪ್ರೈಮರಿ 108MP ಸೆನ್ಸರ್ನೊಂದಿಗೆ ಬರುವ ನಿರೀಕ್ಷೆ.

Infinix GT 20 Pro confirmed to launch in India: ಜನಪ್ರಿಯ ಹಾಂಗ್ ಕಾಂಗ್ ಕಂಪನಿಯಾಗಿರುವ (Infinix) ಇನ್ಫಿನಿಕ್ಸ್ ಮುಂಬರಲಿರುವ Infinix GT 20 Pro ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ 21ನೇ ಮೇ 2024 ರಂದು ಬಿಡುಗಡೆ ಕಂಫಾರ್ಮ್ ಮಾಡಿದೆ. ಮುಂದಿನ ತನ್ನ ಈವೆಂಟ್‌ನಲ್ಲಿ ಕಂಪನಿಯು Infinix GT 20 Pro 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಇದಕ್ಕೆ ಈಗಾಗಲೇ ಕಂಪನಿ ಹಲವಾರು ಟೀಸರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ದೃಢಪಡಿಸಿವೆ. ಸ್ಮಾರ್ಟ್ಫೋನ್ ಬಗ್ಗೆ ಪ್ರಸ್ತುತ ಅದರ 32MP ಸೆಲ್ಫಿ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿ ಮತ್ತು ಡಿಸ್ಪ್ಲೇ ಮಾಹಿತಿಗಳು ಹೊರ ಬಂದಿವೆ.

Infinix GT 20 Pro ನಿರೀಕ್ಷಿತ ವಿಶೇಷಣಗಳು

ಟೆಕ್ ಯೂಟ್ಯೂಬರ್ ಸೋನು ಪ್ರಜಾಪತಿ ಅವರ ಸೋರಿಕೆಯ ಪ್ರಕಾರ Infinix GT 20 Pro 5G ಸ್ಮಾರ್ಟ್ಫೋನ್ 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಪವರ್ ಮಾಡುವುದು ಡೈಮೆನ್ಸಿಟಿ 8200 ಅಲ್ಟಿಮೇಟ್ ಚಿಪ್‌ಸೆಟ್ ಆಗಿರುತ್ತದೆ ಎಂದು ವರದಿಯಾಗಿದೆ. ಸ್ಮಾರ್ಟ್‌ಫೋನ್ LPDDR5X RAM ಮತ್ತು UFS 3.1 ಸ್ಟೋರೇಜ್ನೊಂದಿಗೆ ಬಿಡುಗಡೆಯಾಗಲಿದೆ. Infinix GT 20 Pro ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ 2 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 3 ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿತ್ತಿದೆ.

Infinix GT 20 Pro confirmed to launch in India on 21st May 2024
Infinix GT 20 Pro confirmed to launch in India on 21st May 2024

ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲದೊಂದಿಗೆ ಪ್ರೈಮರಿ 108MP ಮೆಗಾಪಿಕ್ಸೆಲ್ ಲೆನ್ಸ್ ಅನ್ನು HM6 ಸೆನ್ಸರ್ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಸ್ಮಾರ್ಟ್‌ಫೋನ್ ನಿರೀಕ್ಷಿಸಲಾಗಿದೆ. ಮತ್ತೊಂದು ಕ್ಯಾಮೆರಾ 2MP ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ. ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಇನ್ನೊಂದು ಅಲ್ಟ್ರಾವೈಡ್ ಆಗಿರುತ್ತದೆ. ಸೆಲ್ಫಿಗಳಿಗಾಗಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ ಎಂದು ನಂಬಲಾಗಿದೆ. ಸ್ಮಾರ್ಟ್‌ಫೋನ್‌ಗೆ ಇಂಧನ ತುಂಬುವಿಕೆಯು ದೊಡ್ಡ 5,000mAh ಬ್ಯಾಟರಿಯಾಗಿರುತ್ತದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. Infinix GT 20 Pro 5G ಆಡಿಯೋ ಔಟ್‌ಪುಟ್‌ಗಾಗಿ ಡ್ಯುಯಲ್ JBL ಸ್ಪೀಕರ್‌ಗಳನ್ನು ಹೊಂದಿದೆ ಎಂದು ವದಂತಿಗಳಿವೆ.

Also Read: Google Map Tips: ಗೂಗಲ್ ಮ್ಯಾಪ್‌ನಲ್ಲಿ ನಿಮಗೆ ತಿಳಿಯದ ಈ 5 ಫೀಚರ್ಗಳನೊಮ್ಮೆ ತಿಳ್ಕೊಳ್ಳಿ! ಮುಂದೆ ಸಿಕಪ್ಪಟೆ ಅನುಕುಲವಾಗುತ್ತೆ!

ಭಾರತದಲ್ಲಿ ಇನ್ಫಿನಿಕ್ಸ್ GT 20 Pro ನಿರೀಕ್ಷಿತ ಬೆಲೆ!

ಈ ಮುಂಬರಲಿರುವ Infinix GT 20 Pro ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಕಂಪನಿ ಪ್ರಸ್ತುತ ಯಾವುದೇ ಅಧಿಕೃತ ಬೆಲೆಯನ್ನು ನೀಡಿಲ್ಲವಾದರೂ ಸ್ಮಾರ್ಟ್‌ಫೋನ್‌ನ ಫೀಚರ್ ಆಧಾರದ ಮೇರೆಗೆ ಈ Infinix GT 20 Pro ಸ್ಮಾರ್ಟ್ಫೋನ್ ಬೆಲೆಯನ್ನು ಸುಮಾರು 25,000 ರೂಗಿಂತ ಕಡಿಮೆಯಾಗುವದಾಗಿ ನಿರೀಕ್ಷಿಸಬಹುದು. ಕಳೆದ ವರ್ಷ ಬಿಡುಗಡೆಯಾದ Infinix GT 10 Pro ಅನ್ನು ಭಾರತದಲ್ಲಿಯೂ ಸಹ ಅದೇ ಬೆಲೆಯನ್ನು ಪರಿಗಣಿಸಿ ಅದು ಸರಿಯಾಗಿದೆ. ಈ ಸ್ಮಾರ್ಟ್ಫೋನ್ 8GB RAM ರೂಪಾಂತರವನ್ನು 24,999 ರೂಗಳಿಗೆ ಮಾರಾಟವಾಗುವ ನಿರೀಕ್ಷೆಗಳಿವೆ. ಈ ಮುಂಬರಲಿರುವ Infinix GT 20 Pro ನಿರೀಕ್ಷಿತ ಬೆಲೆ ಮತ್ತು ಫೀಚರ್ ನಿಜವಾದರೆ ಈ ಸ್ಮಾರ್ಟ್ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿರುವ Nothing Phone 2a, Redmi Note 13 Pro ಮತ್ತು Realme 12 Pro ವಿಭಾಗದಲ್ಲಿನ ಕೆಲವು ಪ್ರಮುಖ ಸ್ಮಾರ್ಟ್ಫೋನ್ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo