ಈಗ Huawei ಕಂಪನಿ ತನ್ನ ಹೊಸ ಸ್ಮಾರ್ಟ್ಫೋನ್ಗಳ ಮೂಲಕ ಮುಖ್ಯವಾಗಿ ಕ್ಯಾಮೆರಾ ವಿಭಾಗದ ಮೂಲಕ ಫೋಟೋಗ್ರಫಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಡಿಜಿಟ್ ನಲ್ಲಿರುವ ನನ್ನೊಬ್ಬ ಸ್ನೇಹಿತ ಈ ಹೊಸ Huawei P30 Pro ಸ್ಮಾರ್ಟ್ಫೋನೊಂದಿಗೆ ಪ್ಯಾರಿಸ್ ನಲ್ಲಿ ಕೆಲ ಶಾಟ್ಗಳನ್ನು ತೆಗೆದಿದ್ದಾನೆ ಅದನ್ನು ನಾನು ನಿಮ್ಮ ಮುಂದೆ ಇಟ್ಟಿದ್ದೇನೆ. Huawei P30 Pro ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. ಇನ್ನು ಸ್ಪಷ್ಟವಾಗಿ ಹೇಳೆಬೇಕೆಂದರೆ TOF ಸೇರಿ ಒಟ್ಟು ನಾಲ್ಕು ಕ್ಯಾಮೆರಾಗಳು.
ಇದರ ಈ ಟ್ರಿಪಲ್ ಕ್ಯಾಮೆರಾದಲ್ಲಿ ಪ್ರತಿಯೊಂದು 40MP + 20MP + 8MP + ToF ಸೆನ್ಸರ್ ತನ್ನದೇಯಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೊದಲಿಗೆ ಪ್ರೈಮರಿ ಕ್ಯಾಮೆರಾವಾಗಿರುವ 40MP ಸೆನ್ಸರಲ್ಲಿ RGBG ಬದಲಿಗೆ RYYB ಪ್ಯಾಟರ್ನ್ ಸೆನ್ಸರ್ ನೀಡಲಾಗಿದೆ. ಕಂಪನಿಯ ಪ್ರಕಾರ ಇದು ಬೀಳುವ ಲೈಟ್ ವಿರುದ್ಧವಾಗಿ ಹೆಚ್ಚು ಸೂಕ್ಷಮತೆಯನ್ನು f/1.6 ಅಪೆರ್ಚರೊಂದಿಗೆ ನೀಡಲು ಸಹಕರಿಸುತ್ತದೆ. ಈ ಹೊಸ Huawei P30 Pro ಸ್ಮಾರ್ಟ್ಫೋನಿನ ಕ್ಯಾಮೆರಾದ ಮತ್ತೋಂದು ಪ್ರಮುಖ ವಿಶೇಷತೆಯೆಂದರೆ ಪೆರಿಸ್ಕೋಪ್ ಡಿಸೈನ್ಗಾಗಿ 5x (5 ಪಟ್ಟು ಹೆಚ್ಚು) ಆಪ್ಟಿಕಲ್ ಜೂಮ್ ಲೆನ್ಸ್ಗಳನ್ನು ಹೊಂದಿರುವುದು.
ಇದು 10x ಹೈಬ್ರಿಡ್ ಜೂಮ್ ಮತ್ತು 5x ಭಾರಿ ಮಾತ್ರದ ಡಿಜಿಟಲ್ ಜೂಮ್ ನೀಡುತ್ತದೆ. ಈ Huawei P30 Pro ಸ್ಮಾರ್ಟ್ಫೋನ್ ಜೊತೆಗಿನ ನನ್ನ ಒಂದು ದಿನದ ಬಳಕೆ ಹೆಚ್ಚು ಆಕರ್ಷಕ ಮತ್ತು ಉತ್ತಮ ಅನುಭವದೊಂದಿಗೆ ನನ್ನನ್ನು ಮೌನ ಸ್ತಬ್ದವಾಗಿಸಿತ್ತು. ಇದರಲ್ಲಿನ 5x (5 ಪಟ್ಟು ಹೆಚ್ಚು) ಆಪ್ಟಿಕಲ್ ಜೂಮ್ ಈವರೆಗೆ ಯಾವುದೇ ಫೋನ್ಗಳಲ್ಲಿ ನೋಡಿರದ ಅದ್ಬುತ ಅನುಭವ ನೀಡುತ್ತದೆ. ಇಷ್ಟು ಜೂಮ್ ಮಾಡಿದರೇ ಕೈ ಅಥವಾ ತೆಗೆಯುವ ಡಿವೈಸ್ ಅಲ್ಲಾಡುವುದು ಖಂಡಿತ. ಆದರೆ Huawei P30 Pro ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟಬಿಲೈಝಷನ್ (OIS) ಸಹ ಒಳಗೊಂಡಿದೆ.
ಇದರಲ್ಲಿನ ಟೆಲಿಫೋಟೋ ಲೆನ್ಸ್ f/3.4 ಅಪೆರ್ಚರ್ ನೀಡಲಾಗಿದ್ದು ಇದರ ನೇರವಾಗಿ ತೆಗೆದ ಶಾಟ್ಗಳಲ್ಲಿ ಉತ್ತಮವಾದ ಜೂಮ್ ಉತ್ತಮವಾದ ಇಮೇಜ್ ಡಿಸೆಂಟ್ ಕ್ವಾಲಿಟಿಯೊಂದಿಗೆ ನೀಡುತ್ತದೆ. ಇದರಲ್ಲಿ ಕೆಲ ಶಾಟ್ಗಳನ್ನು ಫೋನಲ್ಲಿ ನೀಡಿರುವ ಎಲ್ಲ ಫೋಕಲ್ ಲೆಂಥ್ಗಳನ್ನು ಬಳಸಿ ತೆಗೆದಿದ್ದೇವೆ. ಸಿಕ್ಕಿದ್ದೇನು ನಮ್ಮಿಂದ ನಾವೇ ನಂಬಲಾಗದ ಸುಂದರ ಕ್ವಾಲಿಟಿಯೊಂದಿಗಿನ ಇಮೇಜ್ಗಳು. ಇದರೊಂದಿಗೆ ನಾವು ನಿಮ್ಮೊಂದಿಗೆ ಇದರಲ್ಲಿ ತೆಗೆದ ಕೆಲ ಸ್ಯಾಂಪಲ್ಗಳನ್ನು ಹಂಚಿಕೊಂಡಿದ್ದೇವೆ ನೀವೇ ನೋಡಿ. ಈ ಇಮೇಜ್ಗಳು 0.6x ಲೆನ್ಸ್ 16mm ಜೊತೆಗೆ ಇದು ಪೂರ್ತಿ 60x ಡಿಜಿಟಲ್ ಜೂಮ್ ವರೆಗೆ ನಿಮ್ಮನ್ನು ಕರೆದೊಯ್ಯುತ್ತದೆ. ಇದರ ಫಲಿತಾಂಶ ನಿಮ್ಮ ಮುಂದಿದೆ.
ಇಲ್ಲಿ ನಿಮಗೆ ಮತ್ತೋಂದು ಇಮೇಜ್ ನೋಡಬವುದು ಅಲ್ಟ್ರಾವೈಡ್ ಜೊತೆಗೆ ಈ Huawei P30 Pro ನೀಡಿರುವ ಎಲ್ಲ ಫೋಕಲ್ ಲೆಂಥ್ಗಳನ್ನು ಬಳಸಿ ತೆಗೆದಿದ್ದೇವೆ. ಬೆಳಗಿನ ಸಮಯದಲ್ಲಿ ಹೆಚ್ಚು ಹಿಮಕವಿದ ವಾತಾವರಣದ ಕಾರಣ ಉತ್ತಮವಾದ ಇಮೇಜ್ಗಳನ್ನು ತೆಗೆಯಲಾಗಲಿಲ್ಲ. ಆದರೆ ಒಂದು ಇಮೇಜನ್ನು ಬಹುಸಮಯದ ನಂತರ ತೆಗೆದಿದ್ದೇವೆ. ಇದರಲ್ಲಿ ಒಂದು ಹೋಟೆಲ್ ರೋಮಿನ ಕಿಟಕಿ ತೆರೆದು ಬೆಳಕು ಹೊರಬಂದಿರುವುದು ಸೆರೆಹಿಡಿದಿದ್ದೇವೆ. ಏಕೆಂದರೆ Huawei ಕಂಪನಿಯ ಪ್ರಕಾರ ಇದು ನಕ್ಷತ್ರಿಕ ಬೆಳಕು (ಸ್ಟೆಲ್ಲರ್ ಲೋ ಲೈಟ್) ಅಲ್ಲೂ ಸಹ ಉತ್ತಮ ಫೋಟೋಗಳನ್ನು ನೀಡುತ್ತದೆ. ಮುಂದಿನ ಕೆಲ ದಿನಗಳಲ್ಲಿ ನಾವು ಇನ್ನು ಹೆಚ್ಚು ಮಾಹಿತಿಯನ್ನು ನಿಮ್ಮ ಮುಂದೆ ತರುತ್ತೇವೆ.
ಇದರ ಫ್ರಂಟಲ್ಲಿ ನಾಚ್ ಡಿಸ್ಪ್ಲೇಯಲ್ಲಿ ಅಡಗಿರುವ ಈ 32MP ಸೆಲ್ಫಿ ಕ್ಯಾಮೆರಾ f/2.0 ಅಪೆರ್ಚರೊಂದಿಗೆ ಬರುತ್ತದೆ. ಇದು ಅತ್ಯುತ್ತಮವಾದ ಇಮೇಜ್ಗಳನ್ನು ನೀಡುತ್ತದೆ. ಇದರ ಸ್ಯಾಂಪಲ್ಗಳನ್ನು ನೀವೇ ನೋಡಬವುದು. ಇದು ಖಂಡಿತವಾಗಿಯು ಕಳೆದ Huawei P20 Pro ಸ್ಮಾರ್ಟ್ಫೋನಿನ ಅದ್ದೂರಿಯ ಅಪ್ಗ್ರೇಡ್ ಆಗಿದೆ. Huawei ಕಂಪನಿಯ ಪ್ರಕಾರ Huawei P30 Pro ಹಲವಾರು ಅತ್ಯುತ್ತಮವಾದ ಫೀಚರ್ಗಳನ್ನು ಒಳಗೊಂಡಿದೆಯಂತೆ ಆದರೆ ನಾವು Huawei P30 Pro ಫೋನ್ ಹೇಗಿದೆ ಅಂಥ ತಿಳಿಯಲು ಅದರ ಪ್ರತಿಯೊಂದನ್ನು ಸಂಕ್ಷಿಪ್ತವಾಗಿ ಟೆಸ್ಟ್ ಮಾಡಿ ನೋಡಬೇಕಿದೆ. ನೀವು ಸಹ ಸ್ನೇಹಿತರೇ ಇದರ ಸಂಪೂರ್ಣವಾದ ವಿಮರ್ಶಗಾಗಿ ಡಿಜಿಟ್ ಕನ್ನಡದೊಂದಿಗೆ ಜೊತೆಗಿರಿ.