ಹೊಸ Huawei P30 Pro ಸ್ಮಾರ್ಟ್ಫೋನ್ ಸೇಲ್ ಇಲ್ಲಿದೆ ಇದರ ಫೀಚರ್ಗಳು, ಬೆಲೆ, ಲಭ್ಯತೆ ಮತ್ತು ಆಫರ್ಗಳು
ಕಳೆದ ವಾರ ಬಿಡುಗಡೆಯಾದ ನಂತರ ಭಾರತದಲ್ಲಿ ಈ Huawei P30 Pro ಸ್ಮಾರ್ಟ್ಫೋನ್ ಮಾರಾಟವಾಗುತ್ತಿದೆ. ಅಮೆಜಾನ್ ಇಂಡಿಯಾ ವೆಬ್ಸೈಟ್ನಿಂದ ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು. ಮತ್ತು ನೆನ್ನೆಯಿಂದ ಆಫ್ಲೈನ್ ಮಾರಾಟ ಪ್ರಾರಂಭವಾಗಿದೆ. ಇದು ಕ್ರೋವಾ ಸ್ಟೋರ್ ಮತ್ತು ಪ್ರತ್ಯೇಕವಾಗಿ ಅಮೆಜಾನ್ ಇಂಡಿಯಾದಲ್ಲಿ ಈಗಾಗಲೇ Huawei P30 Pro ಸ್ಮಾರ್ಟ್ಫೋನ್ ಪ್ರೀ ಆರ್ಡರ್ಗಳನ್ನು ಸ್ವೀಕರಿಸುತ್ತಿತ್ತು. ಆದರೆ ಈಗ 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರ ಕೇವಲ 71,990 ರೂಗಳಲ್ಲಿ ಲಭ್ಯವಿದೆ. ಈಗಾಗಲೇ ವಿಶ್ವವೇ ತಿಳಿದಿರುವಂತೆ ಹುವಾವೇ ಕಂಪನಿಯ ಪ್ರಮುಖ ಫೋನ್ನ ಯಾವುದೇ ಭಿನ್ನತೆಗಳಿಲ್ಲ.
ಇದರ ಬಿಡುಗಡೆಯ ಆಫರ್ಗಳೊಂದಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ EMI ಆಯ್ಕೆಗಳಲ್ಲಿ ಈ Huawei P30 Pro ಸ್ಮಾರ್ಟ್ಫೋನ್ ಲಭ್ಯವಾಗುತ್ತದೆ. ಈ ಫೋನ್ ಖರೀದಿದಾರರು 15ನೇ ಏಪ್ರಿಲ್ 2019 ಯಿಂದ 17ನೇ ಏಪ್ರಿಲ್ 2019 ನಡುವೆ ಅದ್ದೂರಿಯ ಕ್ಯಾಶ್ಬ್ಯಾಕ್ ಆಫರ್ಗಳನ್ನು ಸಹ ಪಡೆಯಬಹುದು. ಇದು ಹುವಾವೇ ಇದರೊಂದಿಗೆ 6 ತಿಂಗಳುಗಳ ಸ್ಕ್ರೀನ್ ವಿಮೆ ಯೋಜನೆಯನ್ನು ನೀಡುತ್ತಿದೆ. ಅಲ್ಲದೆ ರಿಲಯನ್ಸ್ ಜಿಯೋ ಚಂದಾದಾರರು ಸುಮಾರು 2200 ಕ್ಯಾಶ್ಬ್ಯಾಕ್ ಮತ್ತು ಡಬಲ್ ಡೇಟಾ ರಿಚಾರ್ಜ್ ಮತ್ತು 10,000 ರೂ ವರೆಗಿನ ಇತರ ಪ್ರಯೋಜನಗಳನ್ನು ಪಡೆಯುತ್ತಾರೆ.
ಈ Huawei P30 Pro ಸ್ಮಾರ್ಟ್ಫೋನ್ 6.47 ಇಂಚಿನ OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಆದ್ರೆ 2340 x 1080 ಪಿಕ್ಸೆಲ್ಗಳ ರೆಸುಲ್ಯೂಷನ್ ನೀಡುತ್ತದೆ. ಮತ್ತು 19.5: 9 ಆಕಾರ ಅನುಪಾತವನ್ನು ಹೊಂದಿರುತ್ತದೆ. ಇದರ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯಲ್ಲಿ 32MP ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು ಕಿರಿನ್ 980 ಸೋಕ್ ಹೈವರೀಡ್ ಡ್ಯುಯಲ್ ಸಿಮ್ ಕಾನ್ಫಿಗರೇಶನ್ನಲ್ಲಿ ಹುವಾವೇನ ನ್ಯಾನೋ ಮೆಮರಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ಪೈ ಅನ್ನು EMUI 9.1 ಕಸ್ಟಮ್ ಜೊತೆಗೆ ನಡೆಸುತ್ತದೆ. ಇದರ ಹಿಂಭಾದಲ್ಲಿ ಒಟ್ಟಾರೆಯಾಗಿ 40+20+8MP ಮತ್ತು ToF ಕ್ಯಾಮೆರಾಗಳೊಂದಿಗೆ ಬರುತ್ತದೆ.
ಮೊದಲನೇಯದು 40MP ಪ್ರೈಮರಿ ಸೂಪರ್ಸ್ಪೆಕ್ಟ್ರಮ್ ಸೆನ್ಸರ್ ಮತ್ತು f/ 2.2 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ನ 20MP ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುವ ಕ್ವಾಡ್ ಕ್ಯಾಮೆರಾ ಸೆಟಪ್ನೊಂದಿಗೆ Huawei P30 Pro ಬರುತ್ತದೆ. ಮತ್ತು ಟೆಲಿಫೋಟೋ f/ 3.4 ಲೆನ್ಸ್ನೊಂದಿಗೆ 8MP ಸೆನ್ಸರ್ ನೀಡಲಾಗಿದೆ. ನಾಲ್ಕನೇ ಸೆನ್ಸರ್ ಟೈಮ್ ಆಫ್ ಫ್ಲೈಟ್ (ToF) ಸೆನ್ಸರ್ ಆಗಿರುತ್ತದೆ. ಕೊನೇಯದಾಗಿ 32MP ಸೆಲ್ಫ್ ಕ್ಯಾಮೆರಾ ಮತ್ತು ಆನ್ಬೋರ್ಡ್ ಒಳಗೊಂದಿಗೆ. ಇದು 4G ವೋಲ್ಟೆ, ವೈ-ಫೈ 802.11ac, ಬ್ಲೂಟೂತ್ ವಿ 5.0, USB ಟೈಪ್ C (v3.1), NFC, ಮತ್ತು ಡ್ಯುಯಲ್ ಬ್ಯಾಂಡ್ ಜಿಪಿಎಸ್. ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು 4200mAh ಬ್ಯಾಟರಿ ಕೂಡ ಇದೆ. ಡಸ್ಟ್ ಮತ್ತು ವಾಟರ್ ಪ್ರೂಫ್ IP68 ಪ್ರಮಾಣೀಕರಿಸಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile