Huawei Nova 4E ಸ್ಮಾರ್ಟ್ಫೋನಲ್ಲಿದೆ ಮೂರು ಬ್ಯಾಕ್ ಕ್ಯಾಮೆರಾ ಮತ್ತು 32MP ಮೇಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ.

Huawei Nova 4E ಸ್ಮಾರ್ಟ್ಫೋನಲ್ಲಿದೆ ಮೂರು ಬ್ಯಾಕ್ ಕ್ಯಾಮೆರಾ ಮತ್ತು 32MP ಮೇಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ.
HIGHLIGHTS

Huawei Nova 4e ಸ್ಮಾರ್ಟ್ಫೋನ್ ಚೀನಾದೊಂದಿಗೆ ಮಲೇಷಿಯಾದಲ್ಲೂ ಏಕಕಾಲದಲ್ಲಿ ಅನಾವರಣಗೊಂಡಿದೆ.

ಹುವಾವೇ ಮತ್ತೋಂದು ಸೊಗಸಾದ ನೋಟವುಳ್ಳ, ಬಲವಾದ ಕ್ಯಾಮರಾವುಳ್ಳ ಮತ್ತು ಕಡಿಮೆ ಬೆಲೆಯೊಂದಿಗೆ ಹೆಚ್ಚು ಶಕ್ತಿಯುತ ಸ್ಮಾರ್ಟ್ಫೋನ್ಗಳನ್ನು ಬಯಸುವ ಯುವ ಗ್ರಾಹಕರನ್ನು ಹುವಾವೇ ನೋವಾ (Nova ) ಸರಣಿಯನ್ನು ಹೆಚ್ಚು ಬೆಳೆಸಲು ಗುರಿಪಡಿಸುತ್ತದೆ. ಇಂದು ಈ ಕುಟುಂಬಕ್ಕೆ ಮತ್ತೋಂದು ಹೊಸ ಸದಸ್ಯರನ್ನು ಸೇರಿಸಲಾಯಿತು. ಇಂದು ಚೀನಾದ ಬೀಜಿಂಗ್ನಲ್ಲಿ Huawei Nova 4e ಸ್ಮಾರ್ಟ್ಫೋನನ್ನು  ಪ್ರಾರಂಭಿಸಲಾಯಿತು. ಇದು ನೋಡಲು ಹೆಚ್ಚು ಆಕರ್ಷಕವಾಗಿದ್ದು ಹೆಚ್ಚಿನ ಗ್ರೇಡಿಯಂಟ್ ಲುಕ್ ನೀಡಿ ಬಳಕೆದಾರರ ಗಮನವನ್ನು ಸೆಳೆದಿದೆ.

ಈ ಸ್ಮಾರ್ಟ್ಫೋನಿನ ಕೆಲ ಹೈ ಲೈಟ್ಗಳೆಂದರೆ ಈ ಫೋನ್ ಕಂಪನಿಯ ಮಧ್ಯ ಶ್ರೇಣಿಯ ಶ್ರೇಣಿಗಳ ಒಂದು ಭಾಗವಾಗಿದ್ದು ಡಬಲ್ ಬಾಗಿದ ಗ್ಲಾಸ್ ಬಾಡಿ  ಮತ್ತು ಹಿಂದಿನ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು 6.15 ಇಂಚಿನ ಸ್ಕ್ರೀನ್ ಫೀಚರ್ಗಳೊಂದಿಗೆ ಬರುತ್ತದೆ. ಈ Huawei Nova 4e ಸ್ಮಾರ್ಟ್ಫೋನ್ ಕೂಡ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಮತ್ತು 32MP ಮೆಗಾಪಿಕ್ಸೆಲ್ ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ 4GB / 6GBRAM ಮತ್ತು 128GB ಯ ಸ್ಟೋರೇಜ್ ಒಳಗೊಂಡಿದ್ದು ಚೀನಾದೊಂದಿಗೆ ಮಲೇಷಿಯಾದಲ್ಲೂ ಏಕಕಾಲದಲ್ಲಿ ಅನಾವರಣಗೊಂಡಿದೆ.

ಈ ಸ್ಮಾರ್ಟ್ಫೋನಿನ ಬೆಲೆ ಬಗ್ಗೆ ಹೇಳಬೇಕೆಂದರೆ ಈ ಸ್ಮಾರ್ಟ್ಫೋನ್ ಸದ್ಯಕ್ಕೆ ಒಂದೇ ಒಂದು ಸ್ಟೋರೇಜ್ ವೇರಿಯಂಟಲ್ಲಿ ಲಭ್ಯವಾಗಲಿದೆ. ಮೊದಲಿಗೆ ಇದರ 4GBRAM ಮತ್ತು 128GB ಯ ಸ್ಟೋರೇಜ್ ಚೀನಾದಲ್ಲಿ CNY 1,999 ಇದು ಭಾರತದಲ್ಲಿ ಸುಮಾರು 21,000 ರೂಗಳು ಮತ್ತು ಇದರ ಮತ್ತೋಂದು 6GBRAM ಮತ್ತು 128GB ಯ ಸ್ಟೋರೇಜ್ ಚೀನಾದಲ್ಲಿ CNY 2,299 ಇದು ಭಾರತದಲ್ಲಿ ಸುಮಾರು 24,000 ರೂಗಳಲ್ಲಿ ಬಿಡುಗಡೆಯಾಗಿದೆ. ಇದು ಚೀನಾದಲ್ಲಿ 21ನೇ ಮಾರ್ಚ್ 2019 ರಿಂದ ಮಾರಾಟಕ್ಕೆ ಹೋಗಲಿದೆ. 

ಈ ಸ್ಮಾರ್ಟ್ಫೋನಿನ ಪೂರ್ಣ ಬಿಡುಗಡೆಯಲ್ಲಿ ಭಾರತಕ್ಕೆ ಯಾವಾಗ ಮತ್ತು ಯಾವ ಬೆಲೆಯಲ್ಲಿ ಬರುತ್ತದೆನ್ನುವ ಯಾವುದೇ ಮಾಹಿತಿಗಳಿಲ್ಲ. ಇದರಲ್ಲಿ 6.15 ಇಂಚಿನ ಫುಲ್  HD+ IPS ಡಿಸ್ಪ್ಲೇಯನ್ನು 415ppi ಡೆನ್ಸಿಟಿಯೊಂದಿಗೆ ಸ್ಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 9 ಪೈ ಆಧರಿಸಿ ಫೋನ್ EMUI 9.0.1 ಅನ್ನು ರನ್ ಮಾಡುತ್ತದೆ. ಇದು ಓಕ್ಟಾ ಕೋರ್ ಹೈ ಸಿಲಿಕನ್ ಕಿರಿನ್ 710 ಪ್ರೊಸೆಸರ್ನಿಂದ ಪವರ್ ಹೊಂದಿದ್ದು ಮೈಕ್ರೊ SD ಕಾರ್ಡ್ ಸ್ಲಾಟ್ ಬಳಸಿ 512GB ವರೆಗೆ ವಿಸ್ತರಿಸುವ ಅವಕಾಶ ನೀಡುತ್ತದೆ. 

ಇದರ ಬ್ಯಾಕಲ್ಲಿ ಟ್ರಿಪಲ್ ಕ್ಯಾಮರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ. ಇದು 24MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರನ್ನು f/ 1.8 ವೈಡ್ ಆಂಗಲ್ ಲೆನ್ಸ್ 8MP ಮೆಗಾಪಿಕ್ಸೆಲ್ ಸೆನ್ಸರನ್ನು ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದ್ದು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ f/ 2.0 ಅಪೆರ್ಚರ್ ಹೊಂದಿದೆ. ಇದರ ಫ್ರಂಟಲ್ಲಿ ಈಗಾಗಲೇ ಹೇಳಿರುವಂತೆ 32MP ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ 3340mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು Wi-Fi 802.11ac ಮತ್ತು 4G VoLTE ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ.

ಇಮೇಜ್ ಕ್ರೆಡಿಟ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo