ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಒಂದು ರೀತಿಯ ಹುಚ್ಚಾಟ ಎಷ್ಟಿದೆ ಎನ್ನುವುದಕ್ಕೆ ಇಂದಿನ ಕೆಲವು ಬ್ರ್ಯಾಂಡ್ಗಳು ಕಾರಣವಾಗಿವೆ. ಭಾರತದಲ್ಲಿ ಅಲ್ಲ ಕಡೆಗಳಲ್ಲಿ ಇನ್ನು ಸರಿಯಾಗಿ 3G ಮತ್ತು 4G ನೆಟ್ವರ್ಕ್ ಸಿಗದೇ ಜನರು ರೊಸೆತ್ತು ಹೋಗಿದ್ದಾರೆ. ಇದರ ಮಧ್ಯೆಯಲ್ಲಿ ಕೆಲ ಕಂಪನಿಗಳು ಭಾರತದಲ್ಲಿ 5G ನೆಟ್ವರ್ಕ್ ಇಲ್ಲದಿದ್ದರೂ ಸಹ 5G ಫೋನ್ಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಹೌದು Realme ಭಾರತದಲ್ಲಿ 5G ತಂತ್ರಜ್ಞಾನವನ್ನು ಪ್ರವರ್ತಿಸಲು ಪ್ರಯತ್ನಿಸುತ್ತಿದೆ. ಮಾರ್ಚ್ 24 ರಂದು ಹೊಸ Realme X50 Pro 5G ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಸೋಮವಾರ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದೆ.
ಇದನ್ನು ರಿಯಲ್ಮೆ ಕಂಪನಿಯ CEO ಆಗಿರುವ ಮಾಧವ್ ಸೇಠ್ ಅವರ ಟ್ವೀಟ್ realme ಭಾರತ ತನ್ನ ಮೊದಲ 5G ಫೋನ್ ಅನ್ನು ಮಾರ್ಚ್ 24 ರಂದು ಮಧ್ಯಾಹ್ನ 2:30 ಕ್ಕೆ ಪಡೆಯಲಿದೆ ಎಂದು ಕಂಪನಿ ಪ್ರಕಟಿಸಿದೆ. ಈ 5G ನೆಟ್‌ವರ್ಕ್ ಲಭ್ಯತೆಯು ಭಾರತದಲ್ಲಿ ಇನ್ನೂ ಒಂದು ಪುರಾಣವಾಗಿದೆ ಆದರೆ ಕಂಪನಿಯು Realme X50 Pro ಅನ್ನು ಭವಿಷ್ಯದಲ್ಲಿ ಎಲ್ಲಾ ಹಾರ್ಡ್‌ವೇರ್‌ಗಳೊಂದಿಗೆ ಸಿದ್ಧವಾಗುವಂತೆ ಪ್ರಚಾರ ಮಾಡುತ್ತಿದೆ. ಇದಕ್ಕೆ ಸರಿಯಾಗಿ ಸ್ಪರ್ಧಿಸಲು ವಿವೊವಿನ ಮತ್ತೊಂದು ಇಂಡಿಪೆಂಡೆಂಟ್ ಬ್ರಾಂಡ್ IQOO 3 5G ಸ್ಮಾರ್ಟ್ಫೋನ್ ಸಹ ದೇಶದ ಮೊದಲ 5G ಸ್ಮಾರ್ಟ್ಫೋನ್ ಆಗಲು ಎದುರು ನೋಡುತ್ತಿದ್ದು ಈ ಫೋನ್ 25ನೇ ಫೆಬ್ರವರಿ 2020 ರಂದು ಬಿಡುಗಡೆಯಾಗಲಿದೆ.
ಹೊಸ ರಿಯಲ್ಮೆ ಸಾಧನವನ್ನು ಪ್ರಮುಖ ಸ್ಮಾರ್ಟ್‌ಫೋನ್‌ನಂತೆ ಇರಿಸಲಾಗುವುದು. ಕಂಪನಿಯು ಈಗಾಗಲೇ Realme X50 Pro 5G ಯ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ Snapdragon 865 ಪ್ರೊಸೆಸರ್ ಜೊತೆಯಲ್ಲಿ ನಿಯಂತ್ರಿಸಲಾಗುವುದು. ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ 90Hz ಅಮೋಲೆಡ್ ಪ್ಯಾನಲ್ ಹೊಂದಿದ್ದು ಸ್ಮಾರ್ಟ್‌ಫೋನ್ 65W ಚಾರ್ಜಿಂಗ್ ಸಾಮರ್ಥ್ಯವನ್ನು ಸಹ ಪಡೆಯಲಿದೆ.
ಕಂಪನಿಯ ಈ ಟ್ವೀಟ್ ಜನ ಸಾಮಾನ್ಯರಿಗೆ ಈ ಹೊಸ Realme X50 Pro 5G ಸ್ಮಾರ್ಟ್ಫೋನ್ ಹೇಗೆ ಕಾಣಿಸುತ್ತೆ ಅನ್ನುವುದನ್ನ ಫಸ್ಟ್ ಲುಕ್ ನೀಡಿದೆ. ಮತ್ತು ಇದು ಪಂಚ್-ಹೋಲ್ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ತೋರುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳೇನು ನಿಮ್ಮ ಪ್ರಕಾರ ಯಾವ ಬ್ರಾಂಡ್ ಕಂಪನಿಯ ಯಾವ ಫೋನ್ ಮೊದಲು ಭಾರತದ ಮೊದಲ 5G ಸ್ಮಾರ್ಟ್ಫೋನ್ ಎನ್ನುವ ಹೆಸರಿಗೆ ಪಾತ್ರವಾಗುತ್ತೆ ಕಾಮೆಂಟ್ ಮಾಡಿ ತಿಳಿಸಿ.