ಇಂದು ಹಾನರ್ ಕಂಪನಿ HONOR X9c ಎಂಬ ಲೇಟೆಸ್ಟ್ 5 G ಸ್ಮಾರ್ಟ್ಫೋನ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದ್ದು ಹೊಸ ಮಧ್ಯಮ-ಶ್ರೇಣಿಯನ್ನು ಪರಿಚಾಯಿಸಿದೆ. ಈ ಫೋನ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಅನ್ನು ಇತರ ಮಿಡ್-ರೇಂಜರ್‌ಗಳಿಗಿಂತ ಭಿನ್ನವಾಗಿರಿಸುವುದು ಇದರ ಶಕ್ತಿಯಾಗಿದೆ. ಈ ಹೊಸ ಫೋನ್ ಹಿಂದಿನದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಈ HONOR X9c ಮಾದರಿಯ ವಿಶೇಷತೆ ನೋಡುವುದಾದರೆ ಇದರ 6600mAh ಬ್ಯಾಟರಿ ಮತ್ತು 108MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಆಗಿದ್ದು ಇದರೊಂದಿಗೆ ಫೋನ್ 2m ಡ್ರಾಪ್ ರೆಸಿಸ್ಟೆನ್ಸ್ ಜೊತೆಗೆ 360-ಡಿಗ್ರಿ ನೀರಿನ ಪ್ರತಿರೋಧವನ್ನು ಹೊಂದಿದೆ.
HONOR X9c ಸ್ಮಾರ್ಟ್ಫೋನ್ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ MYR 1,499 (ಅಂದಾಜು ರೂ. 28,700) ನಿಂದ ಪ್ರಾರಂಭವಾಗುತ್ತದೆ. 12GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ MYR 1,699 (ಅಂದಾಜು ರೂ 32,500). ಇದು ಜಾಗತಿಕ ವೆಬ್‌ಸೈಟ್‌ನಲ್ಲಿ 8GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ.
ಈ ಫೋನ್ ಅನ್ನು ಒಟ್ಟು ಮೂರು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದ್ದು ಜೇಡ್ ಸಯಾನ್, ಟೈಟಾನಿಯಂ ಬ್ಲಾಕ್ ಮತ್ತು ಟೈಟಾನಿಯಂ ಪರ್ಪಲ್ ಎಂಬ ಬಣ್ಣಗಾಳಲ್ಲಿ ಪಟ್ಟಿಮಾಡಲಾಗಿದೆ. ಆದರೆ HONOR X9c ಸ್ಮಾರ್ಟ್ಫೋನ್ ಅಧಿಕೃತ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಲಾಗಿಲ್ಲ. ಫೋನ್ ಪ್ರಸ್ತುತ ಸಿಂಗಪುರದಲ್ಲಿ ಆನ್‌ಲೈನ್ ಚಿಲ್ಲರೆ ಅಂಗಡಿಯ ಮೂಲಕ ಮುಂಗಡ-ಕೋರಿಕೆಗೆ ಇದು ಲಭ್ಯವಿದೆ.
Also Read: 600GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುವ ಈ BSNL Recharge ಯೋಜನೆಯ ಆಫರ್ ಪಡೆಯಲು ನಾಳೆ ಕೊನೆ ದಿನ!
ಈ ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು 2700×1224 ರೆಸೊಲ್ಯೂಷನ್ ಜೊತೆಗೆ ಪ್ಯಾಕ್ ಮಾಡುತ್ತದೆ. HONOR X9c ಸ್ಮಾರ್ಟ್ಫೋನ್ ಕೊಂಚ ಹಳೆಯ Qualcomm Snapdragon 6 Gen 1 ಚಿಪ್‌ಸೆಟ್ ಜೊತೆಗೆ ಅಡ್ರೆನೊ A710 GPU ಜೊತೆಗೆ ಬರುತ್ತದೆ. ಈ ಫೋನ್ 12GB ವರೆಗೆ RAM ಮತ್ತು 512GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆ. ಇದು ಆಂಡ್ರಾಯ್ಡ್ 14 ಆಧಾರಿತ MagicOS 8.0 ಜೊತೆಗೆ 5MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 108MP ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸರ್ ಅನ್ನು ಹೊಂದಿದೆ.
ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಅಲ್ಲದೆ HONOR X9c ಸ್ಮಾರ್ಟ್ಫೋನ್ 2 ಮೀಟರ್‌ನಿಂದ ಕೆಳಗೆ ಬಿದ್ದರೂ ಹ್ಯಾಂಡ್‌ಸೆಟ್ ಮುರಿಯುವುದಿಲ್ಲ. ಇದು ಧೂಳಿನ IP65M ರೇಟಿಂಗ್ ಅನ್ನು ಹೊಂದಿದೆ ಮತ್ತು 360-ಡಿಗ್ರಿ ನೀರಿನ ಪ್ರತಿರೋಧವನ್ನು ಹೊಂದಿದೆ HONOR X9c ಸ್ಮಾರ್ಟ್ಫೋನ್ 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 6600mAh ಬ್ಯಾಟರಿಯನ್ನು ಸಪೋರ್ಟ್ ಮಾಡುತ್ತದೆ. ಕೊನೆಯದಾಗಿ HONOR X9c ಸ್ಮಾರ್ಟ್ ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ 5G, 4G LTE, Wi-Fi, ಬ್ಲೂಟೂತ್ 5.1, OTG, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ.