ಜನಪ್ರಿಯ ಹಾನರ್‌ನಿಂದ ಮುಂಬರಲಿರುವ ಹೊಸ 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲು ಸಿದ್ಧವಾಗಿದೆ. ನಾವು ಇಲ್ಲಿ ಹೆಚ್ಚು ನಿರೀಕ್ಷೆಗಳೊಂದಿಗೆ ಕಾಯುತ್ತಿರುವ Honor X50 GT ಸ್ಮಾರ್ಟ್ಫೋನ್ ಬಗ್ಗೆ ಮಾತಾನಾಡುತ್ತೀವೆ. ಈ ಸ್ಮಾರ್ಟ್ಫೋನ್ ಮೊದಲು ತನ್ನ ತಾಯ್ನಾಡಿನಲ್ಲಿ ಅಂದ್ರೆ ಚೀನಾದಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಲಾಗಿದೆ. ಕಂಪನಿಯು ಈಗ ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕ ಮತ್ತು ವಿನ್ಯಾಸದೊಂದಿಗೆ ಒಂದಿಷ್ಟು ಮಾಹಿತಿಯನ್ನು ಪ್ರಕಟಿಸಿದೆ. Honor X50 GT ಮುಖ್ಯವಾಗಿ 108MP ಕ್ಯಾಮೆರಾ ಮತ್ತು Powerful ಪ್ರೊಸೆಸರ್ನೊಂದಿಗೆ ಬರುವ ಭಾರಿ ನಿರೀಕ್ಷೆಗಳಿವೆ.
Also Read: Amazon Prime Video ಬಳಕೆದಾರರಿಗೆ ಹೊಸ ಅಪ್ಡೇಟ್‍ನಲ್ಲಿ ಭಾರಿ ಬದಲಾವಣೆಗೆ ಸಜ್ಜು
ಕಂಪನಿಯು ಮುಂಬರುವ ತನ್ನ ಈ Honor X50 GT ಸ್ಮಾರ್ಟ್‌ಫೋನ್‌ನ ಬಣ್ಣಗಳ ಆಯ್ಕೆಗಳನ್ನು ಸಹ ಲೇವಡಿ ಮಾಡಿದ್ದು ಮಾಡೆಲ್ ಕೆಲವು ಪ್ರಮುಖ ವಿಶೇಷಣಗಳು ಆನ್‌ಲೈನ್‌ನಲ್ಲಿ ಸೋರಿಕೆಗೊಳಿಸಿದೆ. ಅಲ್ಲದೆ ಹಾನರ್ ಕಂಪನಿಯ CMO ಆಗಿರುವ ಹ್ಯಾರಿಸನ್ ಜಾಂಗ್ (Harrison Zhang) ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ Honor X50 GT ಚೀನಾದಲ್ಲಿ ಹೊಸ ವರ್ಷದಲ್ಲಿ 4ನೇ ಜನವರಿ 2024 ರಂದು ಅಲ್ಲಿನ ಸ್ಥಳೀಯ ಸಮಯ ಸಂಜೆ 7:30 ಕ್ಕೆ (ಭಾರತದಲ್ಲಿ 5:00pm IST) ಬಿಡುಗಡೆಯಾಗಲಿದೆ ಎಂದು ಹಾನರ್ ಚೀನಾ ವೆಬ್‌ಸೈಟ್‌ನಲ್ಲಿ ಮತ್ತು Weibo ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.
ಮೊದಲಿಗೆ ಇದರ ಡಿಸೈನಿಂಗ್ ನೋಡುವುದಾದರೆ Honor X50 GT ಸ್ಮಾರ್ಟ್ಫೋನ್ ಪ್ಯಾನಲ್ ಮೇಲ್ಭಾಗದಲ್ಲಿ ಕೇಂದ್ರೀಕೃತ ಪಂಚ್ ಹೋಲ್ ಕರ್ವ್ ಆಕರ್ಷಕ ಡಿಸ್ಪ್ಲೇಯೊಂದಿಗೆ ಬರಲಿದೆ. ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್ಗಳನ್ನು ನೀಡಿದ್ದು ಮ್ಯಾಜಿಕ್ ನೈಟ್ ಬ್ಲ್ಯಾಕ್ ಮತ್ತು ಸಿಲ್ವರ್ ವಿಂಗ್ಸ್ ಅರೆಸ್ ಬಣ್ಣಗಳ ಆಯ್ಕೆಗಳಲ್ಲಿ ಬರುವುದಾಗಿ ದೃಢೀಕರಿಸಲ್ಪಟ್ಟಿದೆ. ಅಲ್ಲದೆ ಇದರ ಸಿಲ್ವರ್ ವೇರಿಯೆಂಟ್ ಪ್ರೀಮಿಯಂ ಆಗಿದ್ದು ಫೋನ್‌ನ ಬ್ಯಾಕ್ ಪ್ಯಾನಲ್‌ನಲ್ಲಿ ಲೈಟ್ ಯಲ್ಲೋ ರೇಸಿಂಗ್ ಸ್ಟ್ರೈಪ್ ಅನ್ನು ಹೊಂದಿದ್ದು ನೋಡುಗರಿಗೆ ಹೆಚ್ಚು ಆಕರ್ಷಿಸುತ್ತದೆ.
ಇದರ ಕ್ಯಾಮೆರಾ ವಿಭಾಗದಲ್ಲಿ ಫೋನ್ 108MP ಪ್ರೈಮರಿ ಕ್ಯಾಮೆರಾ ಸೆಟಪ್ ಹೊಂದಿದ್ದು f/1.75 ಅಪರ್ಚರ್ನೊಂದಿಗೆ ಅತ್ಯುತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ನಿಮಗೆ ಸಹಕರಿಸುತ್ತದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 8MP ಕ್ಯಾಮೆರಾ ಸೆನ್ಸರ್ ನೀಡಿರುವುದಾಗಿ ನಿರೀಕ್ಷಿಸಲಾಗಿದೆ. ಈ 6.78 ಇಂಚಿನ OLED ಪ್ಯಾನೆಲ್‌ನೊಂದಿಗೆ Honor X50 GT ಎಂದು ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ Weibo ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುವ ಸಾಧ್ಯತೆಯಿದೆ.
Honor X50 GT ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ MagicOS 7.2 ನೊಂದಿಗೆ ಫೋನ್ ಬರುತ್ತದೆ ಎಂದು ಹೇಳಲಾಗುತ್ತಿದೆ. ಫೋನ್ Snapdragon 8+ Gen 1 ಪ್ರೊಸೆಸರ್‌ನೊಂದಿಗೆ ಪ್ರಾರಂಭಿಸುವ ನಿರೀಕ್ಷೆಗಳಿವೆ. ಇದು 5800mAh ಬ್ಯಾಟರಿಯನ್ನು 35W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು ಪ್ರಾಯಶಃ 5100mm² VC ಕೂಲಿಂಗ್ ಯೂನಿಟ್ ಅನ್ನು ಹೊಂದಿರುವ ನಿರೀಕ್ಷೆ. ಫೋನ್ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಆನ್‌ಲೈನ್‌ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ