ಹಾನರ್ ತನ್ನ ಜನಪ್ರಿಯ V ಸರಣಿಗಳಲ್ಲಿ ಇನ್ನೊಂದು ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿದೆ. Honor V20 (View 20) ಎಂದು ಕರೆಯಲಾಗುವ ಇತ್ತೀಚಿನ ಫೋನ್ ಇಂದು ಚೀನಾದಲ್ಲಿ ಪ್ರಕಟವಾಗಿದೆ. ಈ ಫೋನ್ ಹೊಂಚ್ ಹೋಲ್ ಫ್ರಂಟ್ ಕ್ಯಾಮೆರಾ ವಿನ್ಯಾಸಕ್ಕಾಗಿ ಹೆಸರಾಗಿದೆ.ಇದರ ಮೂಲಕ ಹೊಸ ವಿನ್ಯಾಸವನ್ನು ತರುತ್ತದೆ. ಈ ಸ್ಮಾರ್ಟ್ಫೋನನ್ನು ಜನವರಿ 22, 2019 ರಂದು ಪ್ಯಾರಿಸ್ನಲ್ಲಿ ಪ್ರಾರಂಭಿಸಲಾಗುವುದು. ಆದರೆ ಭಾರತದಲ್ಲಿ ಯಾವಾಗ ಬರುತ್ತೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.
ಈ ಸ್ಮಾರ್ಟ್ಫೋನಿನ ವಿನ್ಯಾಸ ಹೆಚ್ಚಿನ ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಶಕ್ತಗೊಳಿಸುತ್ತದೆ. ಮತ್ತು ಗಾತ್ರದ 4.5mm ಇರುವ ಫೋನ್ನ ಮೇಲಿನ ಎಡ ತುದಿಯಲ್ಲಿ ಕೇವಲ ಒಂದು ರಂಧ್ರಕ್ಕಾಗಿ ಮೀಸಲಿಡಲಾಗಿದ್ದು ಅದು ಸೆಲ್ಫಿಯೇ ಕ್ಯಾಮೆರಾವಾಗಿದೆ. ಇದರ ಬ್ಯಾಕ್ ಪ್ಯಾನಲ್ ಡ್ಯುಯಲ್ ಹಿಂಭಾಗದ ಕ್ಯಾಮರಾಗಳನ್ನು ಹೊಂದಿದ್ದು ಪ್ಯಾನಲ್ನ ಮಧ್ಯದಲ್ಲಿ ಫಿಂಗರ್ಪ್ರಿಂಟ್ ಸೆನ್ಸರನ್ನು ನೀಡಿದೆ. ಇದು ಗ್ರೇಡಿಯಂಟ್ ಫಿನಿಶ್ನೊಂದಿಗೆ ಹೊಳಪಿನ ಹಿಂಭಾಗದ ಪ್ಯಾನಲನ್ನು ಹೊಂದಿದ್ದು ಪ್ರೀಮಿಯಂ ಲುಕ್ ನೀಡುತ್ತದೆ.
Honor V20 ನಿಮಗೆ ಫುಲ್ HD+ 1080 × 2310 ಪಿಕ್ಸೆಲ್ ರೆಸೊಲ್ಯೂಶನ್ ಅನ್ನು 19.5: 9 ಆಕಾರ ಅನುಪಾತ ಮತ್ತು 91.82% ಪ್ರತಿಶತ ಸ್ಕ್ರೀನ್-ಟು ಬಾಡಿ ಅನುಪಾತದೊಂದಿಗೆ 6.4 ಇಂಚಿನ TFT ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಹೈ ಸಿಲಿಕಾನ್ ಕಿರಿನ್ 980 ಚಿಪ್ಸೆಟ್ ಇದು 7nm ತಯಾರಿಕಾ ಪ್ರಕ್ರಿಯೆಯನ್ನು ಆಧರಿಸಿದೆ. ಫೋನ್ 6GB / 8GB ಯ RAM ಮತ್ತು 128GB / 256GB ಯ ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ. ಆದರೆ ಈ ಫೋನ್ಗೆ ಮೈಕ್ರೊ SD ಕಾರ್ಡ್ ಸ್ಲಾಟ್ ನೀಡಿಲ್ಲ.
Honor V20 ಇದರ ಮೊದಲ f1.8 ಅಪೆರ್ಚರೊಂದಿಗೆ ಆಟೋಫೋಕಸ್, AI HDR ಮತ್ತು LED ಫ್ಲ್ಯಾಷ್ಗಳ ಬೆಂಬಲದೊಂದಿಗೆ ಬ್ಯಾಕ್ 48MP ಡ್ಯುಯಲ್ ಕ್ಯಾಮರಾ ಸೆಟಪ್ ಹೊಂದಿದೆ. ಅಲ್ಲದೆ 3D ಸಮಯದ ಫ್ಲೈಟ್ (ToF) ಸೆನ್ಸರ್ ಸಹ ಆಳವಾದ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಇಮೇಜ್ಗಳಲ್ಲಿನ ಸ್ಲಿಮ್ಮಿಂಗ್ ಆಬ್ಜೆಕ್ಟ್ಗಳಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಲು ಮತ್ತು 3D ವರ್ಚುವಲ್ಗಳನ್ನು ರಚಿಸುವುದಕ್ಕಾಗಿ ನೀಡಿದೆ.
Honor V20 f2.0 ಅಪೆರ್ಚರೊಂದಿಗೆ ಫಿಕ್ಸೆಡ್ ಫೋಕಸ್, ಟೈಮ್ ಲ್ಯಾಪ್ಸ್ ಫೋಟೋಗ್ರಾಫಿ, ನೈಟ್ ಸೀನ್ AI ಫೋಟೋ, ಪೋಟ್ರೇಟ್, ಫನ್ AR ಮತ್ತು ಸ್ಲೋ ಮೋಶನ್ ಬೆಂಬಲವನ್ನು ಹೊಂದಿರುವ ಮುಂಭಾಗದಲ್ಲಿ ಸೆಲ್ಫಿಗಾಗಿ 25MP ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿದೆ. ಇದು 4.5V / 5A ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 4000mAh ಬ್ಯಾಟರಿಯನ್ನು ಹೊಂದಿದ್ದು ಆಟೋಮೇಟೆಡ್ ಮೊಬೈಲ್ ಡೇಟಾ & Wi-Fi ನಡುವೆ ಬದಲಾಯಿಸಲು ಲಿಂಕ್ ಟರ್ಬೊ ತಂತ್ರಜ್ಞಾನವನ್ನು ಹೊಂದಿದೆ.