ಹಾನರ್ ಕಂಪನಿ ತನ್ನ ಹೊಚ್ಚ ಹೊಸ 5G ಸ್ಮಾರ್ಟ್ಫೋನ್ ಅನ್ನು ಚೀನಾದಲ್ಲಿ ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ Honor Play 8T ಎಂದು ಹೆಸರಿಸಿದ್ದು ಈ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ 12GB RAM ಮತ್ತು 256GB ವರೆಗೆ ಸ್ಟೋರೇಜ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ 50MP ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದ್ದು 35W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಒಂದಿಷ್ಟು ಹೈಲೈಟ್ ವಿಶೇಷಣ ಮತ್ತು ಫೀಚರ್ಗಳ ಬಗ್ಗೆ ಮುಂದೆ ತಿಳಿಯಿರಿ.
ಫೋನ್ ಮುಂಭಾಗದಿಂದ ಪ್ರಾರಂಭಿಸುವುದಾದರೆ Honor Play 8T ಫೋನ್ 6.8 ಇಂಚಿನ FHD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಪ್ಯಾನೆಲ್ ಅನ್ನು ಒಳಗೊಂಡಿದೆ. ಹಿಂಭಾಗದ ಡಿಸೈನಿಂಗ್ ವಿಭಿನ್ನವಾದ ರಚನೆಯ ಮೇಲ್ಮೈಯನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ ಕ್ಯಾಮೆರಾ 50MP ಶೂಟರ್ ಆಗಿದ್ದು ಮತ್ತೊಂದು 2MP ಡೆಪ್ತ್ ಸೆನ್ಸರ್ ಹೊಂದಿದೆ. ಫೋನ್ ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: Amazon Extra Happiness Days: ಇವು ಅತಿ ಹೆಚ್ಚು ಮಾರಾಟವಾಗುತ್ತಿರೋ ಪ್ರೀಮಿಯಂ TWS ಇಯರ್‌ಫೋನ್‌ಗಳು
ಅಲ್ಲದೆ MediaTek Dimensity 6080 ಚಿಪ್‌ಸೆಟ್ ಜೊತೆಗೆ 8GB ಮತ್ತು 12GB ವರೆಗಿನ LPDDR4x ವರ್ಚುವಲ್ RAM ಜೊತೆಗೆ 256GB ಸ್ಟೋರೇಜ್ ಅನ್ನು ಹೊಂದಿದೆ. ಇದು ಮ್ಯಾಜಿಕ್ OS 7.2 ಆಧಾರಿತ ಆಂಡ್ರಾಯ್ಡ್ 13 ಜೊತೆಗೆ ಪೂರ್ವ ಲೋಡ್ ಆಗಿದೆ. ಇದರಲ್ಲಿ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಅದು 3 ವರ್ಷಗಳ ಬಾಳಿಕೆ ಮತ್ತು ವಿಸ್ತೃತ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಫೋನ್ 35W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸೆಕ್ಯುರಿಟಿಗಾಗಿ ಸ್ಮಾರ್ಟ್ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತದೆ.
ಈ ಹೊಸ ಹಾನರ್ ಸ್ಮಾರ್ಟ್ಫೋನ್ 2 ಮೆಮೊರಿ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಇದರ ಕ್ರಮವಾಗಿ ಬೆಲೆ ನೋಡುವುದಾದರೆ 8GB RAM ಮತ್ತು 256GB ಸ್ಟೋರೇಜ್ ಬೆಲೆ 1,099 ಯುವಾನ್ (12,612 ರೂಗಳು) ಇದರ ಹೈಎಂಡ್ ಸ್ಮಾರ್ಟ್ಫೋನ್ 12GB RAM ಮತ್ತು 256GB ಸ್ಟೋರೇಜ್ ಬೆಲೆ 1,299 ಯುವಾನ್ (14,786 ರೂಗಳು) ಇದು ಕಪ್ಪು, ಸಿಲ್ವರ್ ಮತ್ತು ಹಸಿರು ಮುಂತಾದ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಈಗ ಚೀನಾದಲ್ಲಿ ಮುಂಗಡ ಆರ್ಡರ್‌ಗಳಿಗೆ ಸಿದ್ಧವಾಗಿದ್ದು 23ನೇ ಅಕ್ಟೋಬರ್ 2023 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿ ನೀಡಿಲ್ಲ.