ಹುವಾವೇ ಉಪ ಬ್ರಾಂಡ್ ಹಾನರ್ ಹೊ ಮಾದರಿಯ ಸ್ಲೈಡಿಂಗ್ ಫೋನನ್ನು Honor Magic 2 ಈಗಾಗಲೇ ಕಳೆದ ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲಾಯಿತು. ಮತ್ತು ವರ್ಷದ ಅನನ್ಯವಾಗಿ ವಿನ್ಯಾಸಗೊಳಿಸಿದ ಸ್ಮಾರ್ಟ್ಫೋನ್ಗಳಲ್ಲಿ ಇದು ಒಂದಾಗಿದೆ. Honor Magic 2 ಡಿಸ್ಪ್ಲೇ ಗಾತ್ರ ಮತ್ತು ಹೆಚ್ಚಿದ ಬೆಝಲ್ಗಳ ಮೇಲೆ ಕಡಿಮೆಗೊಳಿಸಿ Honor Magic 2 ಮುಂಭಾಗದ ಕ್ಯಾಮರಾ ಸೆಟಪ್ ಅನ್ನು ಸ್ಮಾರ್ಟ್ಫೋನ್ಗೆ ಸಂಯೋಜಿಸಲು ಸ್ಲೈಡಿಂಗ್ ಕಾರ್ಯವಿಧಾನವನ್ನು ಅನುಮತಿಸಿದೆ.
ಈ ಸ್ಮಾರ್ಟ್ಫೋನ್ 6GB ಮತ್ತು 8GB ಯ RAM ಮಾದರಿಗಳ ಆಯ್ಕೆಗಳೊಂದಿಗೆ ತನ್ನದೆಯಾದ ಕಿರಿನ್ ಹಿಸಿಲಿಕಾನ್ 980 SoC ಅನ್ನು ಒಳಗೊಂಡಂತೆ ಲೈನ್ ಸ್ಪೆಕ್ಫಿಕೇಶನ್ಗಳೊಂದಿಗೆ ಬರುತ್ತದೆ. ಪ್ರಸ್ತುತ Honor Magic 2 ಫೋನಿನ ಫ್ರಂಟಲ್ಲಿ ಡುಯಲ್ ಸ್ಲೈಡಿಂಗ್ ಕ್ಯಾಮೆರಾದೊಂದಿಗೆ ಬರುತ್ತದೆ. 16MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಮತ್ತು 2MP ಮೆಗಾಪಿಕ್ಸೆಲ್ ಡೀಪ್ ಸೆನ್ಸರ್ ಕ್ಯಾಮೆರಾಗಳ ಜೊತೆಯಲ್ಲಿ ಕ್ಯಾಮರಾದ ಮುಂಭಾಗದ ಹೊಸ 3D ಡಿವೈಸ್ ಆವೃತ್ತಿಯು 'Structured Light' ಯ 3D ಸ್ಕ್ಯಾನರ್ನೊಂದಿಗೆ ಬರುತ್ತದೆಂದು ಕಂಪನಿ ಹೇಳಿದೆ.
ಈ ಹೊಸ 3D ಸ್ಕ್ಯಾನರ್ನ ಕೆಲಸವು ಬಳಕೆದಾರನ ಮುಖದ 10,000 ಕ್ಕೂ ಹೆಚ್ಚು ಪಾಯಿಂಟ್ಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಮುಖದ ಗುರುತಿಸುವಿಕೆ ಸಾಫ್ಟ್ವೇರ್ ಹೆಚ್ಚು ಸುರಕ್ಷಿತವಾಗಿರಲು ಕತ್ತಲೆಯಲ್ಲು ಸಹ ಹೆಚ್ಚು ಆಕರ್ಷಕವಾಗಿ ಕೆಲಸ ಮಾಡುತ್ತದೆ. ಇದು ಚೀನಾದಲ್ಲಿ ಅಲಿಪೇಯ್ ರೀತಿಯ ಪಾವತಿಯ ಅಪ್ಲಿಕೇಶನ್ಗಳ ಜೊತೆಗೆ ಬಳಸಲು ಸಾಕಷ್ಟು ಸುರಕ್ಷಿತವಾಗಿಸುತ್ತದೆ. ಈ ಹೊಸ Honor Magic 2 ಫೋನ್ 2340x1080px ಪಿಕ್ಸೆಲ್ಗಳ ಫುಲ್ HD+ ರೆಸಲ್ಯೂಶನ್ನೊಂದಿಗೆ 6.4 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ.
ಈ Honor Magic 2 ತುದಿ ಇಲ್ಲದೆ ಎಡ್ಜ್ ಟು ಎಡ್ಜ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರುವ ಕೆಲವು ಫೋನ್ಗಳಲ್ಲಿ ಇದೊಂದಾಗಿದೆ. Honor Magic 2 ಸ್ಮಾರ್ಟ್ಫೋನ್ 128GB ಅಥವಾ 256GB ಸ್ಟೋರೇಜ್ ನೀಡಿದ್ದು SD ಕಾರ್ಡ್ ಸ್ಲಾಟ್ ನೀಡಿಲ್ಲ. ಈ Honor Magic 2 ಫೋನ್ ಟ್ರಿಪಲ್ ರೇವೂರ್ ಕ್ಯಾಮೆರಾದೊಂದಿಗೆ ಬರುತ್ತದೆ. 16MP ಮೆಗಾಪಿಕ್ಸೆಲ್ ವೈಡ್ ಆಂಗಲ್, 24MP ಮೆಗಾಪಿಕ್ಸೆಲ್ ಮೊನೊಕ್ರೋಮ್ ಮತ್ತು 16MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ಗಳೊಂದಿಗೆ ಬರುತ್ತದೆ. ಕೊನೆಯದಾಗಿ 3500mAh ಬತ್ತೇರಿಯನ್ನು ಈ ಫೋನ್ ಹೊಂದಿರುವ ನಿರೀಕ್ಷೆಯಿದೆ.