ಹೂವಾವೇಯ ಸಬ್ ಬ್ರಾಂಡ್ ಆಗಿರುವ ಹಾನರ್ ತನ್ನ ಹೊಸ ಫೋನನ್ನು ಇಂದು ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಇದನ್ನು Honor 8C ಎಂದು ಹೆಸರಿಸಿದೆ. ಇದು ಇದರ Honor 7C ಫೋನಿನ ಯಶಸ್ಸಿನ ಫಲವಾಗಿ ಹೊರ ಹೊಮ್ಮಿದೆ. Honor 8C ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಚಿಪ್ಸೆಟ್ ಹೊಂದಿರುವ ಮೊಟ್ಟ ಮೊದಲ ಫೋನಾಗಿದೆ. ಇದು ಅರೋರೋ ಬ್ಲೂ, ಪ್ಲಾಟಿನಂ ಗೋಲ್ಡ್, ನೆಬುಲಾ ಪರ್ಪಲ್ ಮತ್ತು ಮಿಡ್ ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಈ ಹೊಸ Honor 8C ಎರಡು ವೇರಿಯೆಂಟ್ಗಳಲ್ಲಿ ಲಭ್ಯವಾಗಲಿದೆ. ಅವೆಂದರೆ 4GB ಯ RAM ಮತ್ತು 32GB ಯ ಸ್ಟೋರೇಜ್ 1099 Yuan ಗಳಲ್ಲಿ ಅಂದ್ರೆ ಭಾರತದಲ್ಲಿ ಸುಮಾರು 11,790 ರೂಗಳಲ್ಲಿ ಮತ್ತು ಇದರ 4GB ಯ RAM ಮತ್ತು 64GB ಯ ಸ್ಟೋರೇಜ್ 1399 Yuan ಗಳಲ್ಲಿ ಅಂದ್ರೆ ಭಾರತದಲ್ಲಿ ಸುಮಾರು 15,000 ರೂಗಳಲ್ಲಿ ಲಭ್ಯವಾಗುತ್ತಿವೆ. ಇವು ಈಗಾಗಲೇ ಚೀನಾದಲ್ಲಿ ಆರ್ಡರ್ ಮಾಡಲು ಲಭ್ಯವಿವೆ. ಆದರೆ ಇದರ ಸೇಲ್ ಚೀನಾದಲ್ಲಿ 16ನೇ ಅಕ್ಟೋಬರ್ 2018 ರಿಂದ ಲಭ್ಯವಾಗಲಿವೆ.
ಈ ಹೊಸ ಸ್ಮಾರ್ಟ್ಫೋನಲ್ಲಿರುವ ಸ್ಪೆಸಿಫಿಕೇಷನ್ ಬಗ್ಗೆ ಹೇಳಬೇಕಾದ್ರೆ ಇದರಲ್ಲಿ ನಿಮಗೆ 6.26 ಇಂಚಿನ HD+ ನೋಚ್ ಡಿಸ್ಪ್ಲೇಯೊಂದಿಗೆ 1520×720 ಪಿಕ್ಸೆಲ್ ರೆಸೊಲ್ಯೂಷನ್ ನೀಡುತ್ತದೆ. ಇದರಲ್ಲಿ ನಿಮಗೆ 80.4% ಸ್ಕ್ರೀನ್ ಟು ಬಾಡಿ ಮತ್ತು 19:9 ಆಸ್ಪೆಕ್ಟ್ ರೇಷುವನ್ನು ನೀಡುತ್ತದೆ. ಈಗಾಗಲೇ ಹೇಳಿರುವಂತೆ ಇದು ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಚಿಪ್ಸೆಟ್ನೊಂದಿಗೆ 4GB ಯ RAM 32/64GB ಸ್ಟೋರೇಜನ್ನು ಒಳಗೊಂಡಿದೆ.
ಇದರಲ್ಲಿ ನಿಮಗೆ ಡುಯಲ್ ರೇರ್ ಕ್ಯಾಮೆರಾ ಸೆಟಪ್ ಸಹ ನೀಡಲಾಗಿದೆ. ಅಂದ್ರೆ 13MP ಸೆನ್ಸರ್ f/1.8 ಅಪೆರ್ಚರೊಂದಿಗೆ ಮತ್ತು 2MP ಸೆನ್ಸರ್ f/2.4 ಅಪೆರ್ಚರೊಂದಿಗೆ LED ಫ್ಲಾಶ್ ಸಹ ನೀಡಲಾಗಿದೆ. ಇದರ ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಸೆನ್ಸರ್ f/2.0 ಅಪೆರ್ಚರೊಂದಿಗೆ LED ಫ್ಲಾಶನ್ನು ಒಳಗೊಂಡಿದೆ. ಇದರಲ್ಲಿನ ಫ್ರಂಟ್ ಕ್ಯಾಮೆರಾ AI ಅನ್ನು ಸಪೋರ್ಟ್ ಮಾಡುತ್ತದೆ ಇದರ ಮೂಲಕ ನೀವು ಫೇಸ್ ಅನ್ಲಾಕ್ ಫೀಚರ್ ಬಳಸಬವುದು. ಕೊನೆಯದಾಗಿ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 8.1 ಒರೆಯೊ ಆಪರೇಟಿಂಗ್ ಸಿಸ್ಟಮ್ EMUI 8.2 ಒಳಗೊಂಡಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 4000mAh ಬ್ಯಾಟರಿಯನ್ನು ಹೊಂದಿದೆ.