Honor 200 Lite 5G ಸೂಪರ್ ಪಂಚ್ ಹೋಲ್ ಕ್ಯಾಮೆರಾ ಮತ್ತು Dimensity 6080 ಚಿಪ್‌ನೊಂದಿಗೆ ಬಿಡುಗಡೆಯಾಗಿದೆ.

Updated on 19-Sep-2024
HIGHLIGHTS

Honor 200 Lite 5G ಸೂಪರ್ ಪಂಚ್ ಹೋಲ್ ಕ್ಯಾಮೆರಾದೊಂದಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ.

Honor 200 Lite 5G ಸ್ಮಾರ್ಟ್ಫೋನ್ ಇಂದಿನ ಮಾರುಕಟ್ಟೆಯಲ್ಲಿ 15,999 ರೂಗಳಿಗೆ ಖರೀದಿಸಲು ಲಭ್ಯ.

Honor 200 Lite 5G ಸ್ಮಾರ್ಟ್ಫೋನ್ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

ಚೀನಾದ ಜನಪ್ರಿಯ ಹಾನರ್ (Honor) ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ Honor 200 Lite 5G ಸೂಪರ್ ಪಂಚ್ ಹೋಲ್ ಕ್ಯಾಮೆರಾದೊಂದಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. Honor 200 Lite 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಅತಿ ಕಡಿಮೆ ಬೆಲೆಗೆ ಇಂದಿನ ಮಾರುಕಟ್ಟೆಯಲ್ಲಿ 15,999 ರೂಗಳಿಗೆ ಖರೀದಿಸಲು ಲಭ್ಯವಿರುವ 5G ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. Honor 200 Lite 5G ಸ್ಮಾರ್ಟ್ಫೋನ್ ನಿಮಗೆ OLED ಡಿಸ್ಪ್ಲೇಯೊಂದಿಗೆ MediaTek Dimensity 6080 ಚಿಪ್ ಮತ್ತು 108MP ಪ್ರೈಮರಿ ಪಂಚ್ ಹೋಲ್ ಕ್ಯಾಮೆರಾ ಡಿಸೈನಿಂಗ್ ಮತ್ತು ಇದರ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

ಭಾರತದಲ್ಲಿ Honor 200 Lite 5G ಬೆಲೆ ಮತ್ತು ಲಭ್ಯತೆ

Honor 200 Lite 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 26ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಾಗಲಿದ್ದು ಒಂದು ದಿನದ ನಂತರ ಅಂದ್ರೆ 27ನೇ ಸೆಪ್ಟೆಂಬರ್ 2024 ಮಧ್ಯಾಹ್ನ 12:00 ಗಂಟೆಯಿಂದ ಅಮೆಜಾನ್ ಇಂಡಿಯಾ ಮತ್ತು ಎಸ್ಪ್ಲೋರ್ ಹಾನರ್ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ Starry Blue, Cyan Lake ಮತ್ತು Midnight Black ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

Honor 200 Lite 5G launched in India

Honor 200 Lite 5G ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಲಭ್ಯವಾಗಲಿದ್ದು ಆರಂಭಿಕ 8GB RAM + 8GB Virtual RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಕೇವಲ 17,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ SBI ಮತ್ತು ಆಯ್ದ ಬ್ಯಾಂಕ್ಗಳ ಮೇಲೆ 2000 ರೂಗಳ ಡಿಸ್ಕೌಂಟ್ ಸಹ ನೀಡಲಿದ್ದು ಈ Honor 200 Lite 5G ಫೋನ್ ಅನ್ನು ಕೇವಲ 15,999 ರೂಗಳಿಗೆ ಖರೀದಿಸಬಹುದು.

Also Read: Vivo T3 Ultra 5G ಸ್ಮಾಟ್ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಮೊದಲ ಮಾರಾಟ ಇಂದಿನಿಂದ ಶುರು! ಆಫರ್ ಬೆಲೆ ಎಷ್ಟು?

ಭಾರತದಲ್ಲಿ Honor 200 Lite 5G ಫೀಚರ್ ಮತ್ತು

Honor 200 Lite 5G ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ HD+ (2412 x 1,080 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಗರಿಷ್ಠ 2,000ನಿಟ್‌ಗಳ ಪ್ರಕಾಶಮಾನತೆಯೊಂದಿಗೆ ಬರುತ್ತದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 108MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹೊಂದಿದೆ. 5MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. Honor 200 Lite 5G ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

Honor 200 Lite 5G launched in India

Honor 200 Lite 5G ಸ್ಮಾರ್ಟ್‌ಫೋನ್ MediaTek Dimensity 6080 ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ಓಎಸ್ 8.0 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ. ಫೋನ್‌ನ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ Honor 200 Lite 5G ಸ್ಮಾರ್ಟ್‌ಫೋನ್ 35W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. Honor 200 Lite 5G ಸ್ಮಾರ್ಟ್‌ಫೋನ್ಸಂ ಪರ್ಕ ಆಯ್ಕೆಗಳಿಗೆ ಸಂಬಂಧಿಸಿದಂತೆ ಇದು 5G, 4G LTE, Wi-Fi, ಬ್ಲೂಟೂತ್ 5.1, OTG, USB ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಹೆಚ್ಚುವರಿ ಭದ್ರತೆಗಾಗಿ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :