48MP + 16MP + 2MP + 2MP ಬ್ಯಾಕ್ ಕ್ಯಾಮೆರಾದ Honor 20 ಇಂದು ಮಧ್ಯಾಹ್ನ 12ಕ್ಕೆ ಫ್ಲಿಪ್ಕಾರ್ಟ್ಕ್ ಮೂಲಕ ಲಭ್ಯ

Updated on 25-Jun-2019
HIGHLIGHTS

ಈ ತಿಂಗಳ ಆರಂಭದಲ್ಲಿ ಹುವಾವೇ ಸಬ್ ಬ್ರಾಂಡ್ ಹಾನರ್ ಭಾರತದಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಇವುಗಳಲ್ಲಿ Honor 20, Honor 20i ಮತ್ತು Honor 20 Pro ಸ್ಮಾರ್ಟ್ಫೋನ್ಗಳು ಸೇರಿವೆ. Honor 20 ಭಾರತದಲ್ಲಿ ಇಂದು ಮೊಟ್ಟ ಮೊದಲ ಮಾರಾಟಕ್ಕೆ ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್‌ನ ಮುಖ್ಯಾಂಶಗಳೆಂದರೆ ಇದರ ಹಿಂಭಾಗದಲ್ಲಿರುವ ಕ್ವಾಡ್ ಅಂದ್ರೆ ನಾಲ್ಕು ಕ್ಯಾಮೆರಾ ಸೆಟಪ್, ಪಂಚ್ ಹೋಲ್ ಸೆಲ್ಫಿ ಕ್ಯಾಮೆರಾ ಡಿಸ್ಪ್ಲೇ ಮತ್ತು ಸ್ಟೈಲಿಶ್ ಲುಕ್ ಸೇರಿದಂತೆ ಹೆಚ್ಚಿನವುಗಳನ್ನು ಒಳಗೊಂಡಿವೆ. ಇಲ್ಲಿ ನಾವು ನಿಮಗೆ ಈ Honor 20 ಸ್ಮಾರ್ಟ್ಫೋನಿನ ಬೆಲೆ, ವಿಶೇಷಣ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಸುತ್ತೇವೆ. 

Honor 20 ಬೆಲೆ ಮತ್ತು ಆಫರ್ಗಳು:

ಭಾರತದಲ್ಲಿ ಈ ಸ್ಮಾರ್ಟ್ಫೋನ್ 32,999 ರೂಗಳಿಗೆ ಲಭ್ಯವಿದೆ. ನೀವು ಅದನ್ನು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು. ಮತ್ತು ಮಾರಾಟವು ಇಂದು ಅಂದ್ರೆ ಜೂನ್ 25 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುತ್ತದೆ. ಈ ಸ್ಮಾರ್ಟ್ಫೋನ್ Midnight Black ಮತ್ತು Sapphire Blue ಬಣ್ಣಗಳ ನಡುವೆ ಆಯ್ಕೆ ಮಾಡಬಹುದು. ಇದನ್ನು ಇನ್ನಷ್ಟು ಆಕರ್ಷಕವಾಗಿಸಲು ಹಾನರ್ ಬಳಕೆದಾರರಿಗೆ 90% ಪ್ರತಿಶತದಷ್ಟು ಮರುಖರೀದಿ ಗ್ಯಾರಂಟಿ ನೀಡುತ್ತದೆ. ನಿಮಗೆ ಈ ಸ್ಮಾರ್ಟ್‌ಫೋನ್ ಇಷ್ಟವಾಗದಿದ್ದರೆ ನೀವು ಅದನ್ನು ಹಿಂದಿರುಗಿಸಬಹುದು. ಮತ್ತು 90% ಪ್ರತಿಶತದಷ್ಟು ಮರುಖರೀದಿ ಮೌಲ್ಯವನ್ನು ಪಡೆಯಬಹುದು. ಆದರೆ ಇದನ್ನು ನೀವು ಖರೀದಿಸಿದ ದಿನದಿಂದ 90 ದಿನಗಳ ಒಳಗೆ ಮಾಡಬೇಕಾಗುತ್ತದೆ.

Honor 20 Midnight Black 6GB/128GB = 32,999

Honor 20 Sapphire Blue  6GB/128GB = 32,999

ಫ್ಲಿಪ್ಕಾರ್ಟ್ ಮೂಲಕ ಈ ಸ್ಮಾರ್ಟ್ಫೋನನ್ನು ತಿಂಗಳಿಗೆ ಕೇವಲ 5,500 ರೂಗಳಿಂದ ಪ್ರಾರಂಭವಾಗುವ ನೋ ಕಾಸ್ಟ್ EMI ಆಯ್ಕೆಯನ್ನು ಸಹ ನೀಡುತ್ತಿದೆ. ಅಲ್ಲದೆ ಹಾನರ್ ರಿಲಯನ್ಸ್ ಜಿಯೋ ಸಹಭಾಗಿತ್ವದಲ್ಲಿ ಹಾನರ್ 20 ಬಳಕೆದಾರರಿಗೆ ಸುಮಾರು 2200 ರೂಗಳ ಕ್ಯಾಶ್ ಬ್ಯಾಕ್ ಪಡೆಯಲು ಜಿಯೋವಿನ 198 ಮತ್ತು 299 ರೂಗಳ ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ಅನ್ವಯವಾಗುವ ಬಳಕೆದಾರರು ಮೈಜಿಯೊ ಅಪ್ಲಿಕೇಶನ್‌ನಲ್ಲಿ 125GB ಹೆಚ್ಚುವರಿ 4G ಡೇಟಾವನ್ನು ಸಹ ಪಡೆಯುತ್ತಾರೆ.

Honor 20 ವಿಶೇಷಣ ಮತ್ತು ವೈಶಿಷ್ಟ್ಯಗಳು:

ಈ ಸ್ಮಾರ್ಟ್ಫೋನ್ 6.26 ಇಂಚಿನ FHD+ ಎಲ್‌ಸಿಡಿ ಐಪಿಎಸ್ ಡಿಸ್ಪ್ಲೇಯ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು ಹುವಾವೆಯ ಕಿರಿನ್ 980 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಹುಡ್ ಅಡಿಯಲ್ಲಿ 3750mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಬ್ಯಾಟರಿ 22.5W ಸೂಪರ್‌ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ 6GB ಯ RAM ಮತ್ತು 128GB ಯ ಸ್ಟೋರೇಜ್ ಹೊಂದಿದೆ. ಹೆಚ್ಚಿನ ವಿಸ್ತರಣೆಗಾಗಿ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಸಹ ನೀಡಲಾಗಿದೆ. ಬ್ಯಾಕ್ ಕ್ವಾಡ್ ಕ್ಯಾಮೆರಾ ಸೆಟಪ್ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ 16MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ 32MP ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ.

ಇದರಲ್ಲಿ ಕನೆಕ್ಟಿವಿಟಿಯ ವೈಶಿಷ್ಟ್ಯಗಳಲ್ಲಿ USB ಟೈಪ್-ಸಿ ಪೋರ್ಟ್, ಬ್ಲೂಟೂತ್, ಜಿಪಿಎಸ್ ಮತ್ತು ವೈ-ಫೈ ಸೇರಿವೆ. ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಗಳು, 4G LTE ಮತ್ತು ವೋಲ್ಟಿಇ ಕನೆಕ್ಟಿವಿಟಿ ಆಯ್ಕೆಯನ್ನು ಸಹ ಬೆಂಬಲಿಸುತ್ತದೆ. ಸಾಫ್ಟ್‌ವೇರ್ ಮುಂಭಾಗದಲ್ಲಿ ಆಂಡ್ರಾಯ್ಡ್ ಪೈ ಆಧಾರಿತ ಮ್ಯಾಜಿಕ್ UI 2.1 ಅನ್ನು ಚಾಲನೆ ಮಾಡುತ್ತದೆ. ಹಾನರ್ 20 ಬೆಲೆ ಹಂತದಲ್ಲಿ ಇದು Asus 6Z ಮತ್ತು OnePlus 7 ಸ್ಮಾರ್ಟ್ಫೋನ್ಗಳಿಗೆ ನೇರ ಮತ್ತು ನಿಕಟವಾಗಿ ಸ್ಪರ್ಧಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :