ಹಾನರ್ ಬ್ರ್ಯಾಂಡ್ ಮೌನವಾಗಿ ರಷ್ಯಾದಲ್ಲಿ ಹೊಸ Honor 10i ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಈ ಹೊಸ ಮಿಡ್ ಶ್ರೇಣಿಯ ಫೋನ್ ಅನ್ನು ಹುವಾವೇ ರಷ್ಯನ್ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾಗಿದೆ. ಇದರ ಬೆಲೆ ಮತ್ತು ಲಭ್ಯತೆ ವಿವರಗಳನ್ನು ಈ ಸಮಯದಲ್ಲಿ ಬಹಿರಂಗಪಡಿಸಲಾಗಿಲ್ಲ. Honor 10i ಮಿಡ್ನೈಟ್ ಬ್ಲ್ಯಾಕ್, ಗ್ರೇಡಿಯಂಟ್ ಬ್ಲೂ ಮತ್ತು ಗ್ರೇಡಿಯಂಟ್ ಕೆಂಪು ಬಣ್ಣಗಳಲ್ಲಿ ಬರುತ್ತದೆ.
ಈ ಸ್ಮಾರ್ಟ್ಫೋನ್ 6.21 ಇಂಚಿನ ಪೂರ್ಣ HD+ (2340×1080 ಪಿಕ್ಸೆಲ್ಗಳು) IPS ಡಿಸ್ಪ್ಲೇಯನ್ನು 19: 5: 9 ಜೋತೆಗೆ 2.5ಡಿ ಕರ್ವ್ ಗ್ಲಾಸ್ ಪ್ರದರ್ಶನದೊಂದಿಗೆ ಹೊಂದಿದೆ. ಇದು ARM ಮಾಲಿ G51 MP4 GPU ನೊಂದಿಗೆ ಆಕ್ಟಾ ಕೋರ್ ಕಿರಿನ್ 710 12nm (4 x 2.2GHz ಕಾರ್ಟೆಕ್ಸ್- A73 +4 x 1.7GHz ಕಾರ್ಟೆಕ್ಸ್- A53) ಪವರ್ ಅನ್ನು ಹೊಂದಿದೆ. ಈ ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮತ್ತು 512GB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಮೈಕ್ರೊ SD ಹೊಂದಿದೆ.
Honor 10i ರಲ್ಲಿ ಹಿಂಭಾಗದ ಫಿಂಗರ್ಪ್ರಿಂಟ್ ಸ್ಕ್ಯಾನರ್ ನೀಡಿದ್ದು AI ಫೇಸ್ ಅನ್ಲಾಕ್ಗೆ ಸಹ ಇದು ಬೆಂಬಲವನ್ನು ನೀಡುತ್ತದೆ. ಇದರ ಕ್ಯಾಮೆರಾ 24MP f / 1.8 ಪ್ರೈಮರಿ ಕ್ಯಾಮರಾ ಮತ್ತು 8MP f / 2.4 ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಸೆನ್ಸರ್ ಮತ್ತು 2MP f / 2.4 ಡೆಪ್ತ್ ಸೆನ್ಸರ್ ಸಂಯೋಜನೆಯೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ ಸ್ಮಾರ್ಟ್ಫೋನ್ ಬರುತ್ತದೆ. ಮುಂಭಾಗಕ್ಕೆ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಫೋನ್ ಒಳಗೊಂಡಿದೆ.
ಈ Honor 10i ಆಂಡ್ರಾಯ್ಡ್ 9 ಪೈ ಆಧಾರಿತ EMUI 9.0.1 ಅನ್ನು ರನ್ ಮಾಡುತ್ತದೆ. ಮತ್ತು 3400mAh ಬ್ಯಾಟರಿಯಿಂದ ಬ್ಯಾಕ್ಅಪ್ ಮಾಡಲಾಗಿದೆ. ಡ್ಯುಯಲ್ 4 ಜಿ ವೋಲ್ಟೆ, ವೈ-ಫೈ 802.11 ಎಸಿ (2.4GHz + 5GHz), ಬ್ಲೂಟೂತ್ 4.2 ಲೆ, ಜಿಪಿಎಸ್ + ಗ್ಲೋನಾಸ್, ಎನ್ಎಫ್ಸಿ ಮತ್ತು ಮೈಕ್ರೋ USB, ಹ್ಯಾಂಡ್ಸೆಟ್ 154.8 x 73.64 x 7.95 ಮಿಮೀ ಅಳತೆ ಮತ್ತು 164 ಗ್ರಾಂ ತೂಗುತ್ತದೆ.