32MP ಸೆಲ್ಫಿ ಕ್ಯಾಮೆರಾದ HMD Skyline Nokia Lumia 920 ಡಿಸೈನ್ ಮತ್ತೇ ಬಿಡುಗಡೆಯಾಗುವ ನಿರೀಕ್ಷೆ!

Updated on 10-Jun-2024
HIGHLIGHTS

HMD ಗ್ಲೋಬಲ್ ತಮ್ಮ ಬಳಕೆದಾರರಿಗೆ ಅತ್ಯುತ್ತಮವಾದ ಫೀಚರ್ಗಳ ಆಧಾರಿತ ಮೊಬೈಲ್ ಫೋನ್‌ಗಳು ತಯಾರಿಸುವುದರಲ್ಲಿ ಜನಪ್ರಿಯರಾಗಿದ್ದಾರೆ.

ನೋಕಿಯಾ ಲುಮಿಯಾದ (Nokia Lumia 920) ಐಕಾನಿಕ್ ಫ್ಯಾಬುಲಾ ವಿನ್ಯಾಸವನ್ನು ಮತ್ತೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಡುವ ನಿರೀಕ್ಷಿಸಲಾಗಿದೆ.

HMD Skyline ಎಂಬ ಹೊಸ ಮಧ್ಯ-ಶ್ರೇಣಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ತರುವ ನಿರೀಕ್ಷೆಗಳಿವೆ.

HMD Skyline Nokia Lumia 920: ಜನಪ್ರಿಯ ಮತ್ತು ಹಳೆಯ ಸ್ಮಾರ್ಟ್ಫೋನ್ ನೋಕಿಯಾ ಕಂಪನಿಯ ಮಾಲೀಕರಾದ HMD ಗ್ಲೋಬಲ್ ತಮ್ಮ ಬಳಕೆದಾರರಿಗೆ ಅತ್ಯುತ್ತಮವಾದ ಫೀಚರ್ಗಳ ಆಧಾರಿತ ಮೊಬೈಲ್ ಫೋನ್‌ಗಳು ತಯಾರಿಸುವುದರಲ್ಲಿ ಜನಪ್ರಿಯರಾಗಿದ್ದಾರೆ. ಅಲ್ಲದೆ ಈ ಮೊಬೈಲ್ ಫೋನ್‌ಗಳು ಜನ ಸಾಮಾನ್ಯರ ಬಜೆಟ್ ಒಳಗೆ ಲಭ್ಯವಿರುತ್ತದೆ. ಈ ಹಿಂದೆ ಬಿಡುಗಡೆಯಾದ ನೋಕಿಯಾ ಲುಮಿಯಾದ (Nokia Lumia 920) ಐಕಾನಿಕ್ ಫ್ಯಾಬುಲಾ ವಿನ್ಯಾಸವನ್ನು (Iconic Fabula Design) ಮತ್ತೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಡುವ ನಿರೀಕ್ಷಿಸಲಾಗಿದೆ. ಇದನ್ನು ಕಂಪನಿ ಎಚ್ಎಂಡಿ ಸ್ಕೈಲೈನ್ (HMD Skyline) ಎಂಬ ಹೊಸ ಮಧ್ಯ-ಶ್ರೇಣಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ತರುವ ನಿರೀಕ್ಷೆಗಳಿವೆ.

Also Read: Airtel Offer: ಏರ್ಟೆಲ್ ಬಳಕೆದಾರರಿಗೆ ಈ ಯೋಜನೆಯಲ್ಲಿ ಉಚಿತ 2 ವಾರಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ

HMD Skyline Nokia Lumia 920 ಡಿಸೈನಿಂಗ್:

Nokiamob.net ವರದಿಗಳ ಪ್ರಕಾರ ನೋಕಿಯಾ ಕಂಪನಿ ಮಾಲೀಕತ್ವವನ್ನು ಹೊಂದಿರುವ HMD ಗ್ಲೋಬಲ್ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ HMD Skyline Nokia Lumia 920 ಡಿಸೈನಿಂಗ್ ಮೂಲಕ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದರ ಕೋಡ್ ಹೆಸರನ್ನು ಪ್ರಸ್ತುತ ಟಾಮ್‌ಕ್ಯಾಟ್, ಕ್ಲಾಸಿಕ್ ನೋಕಿಯಾ ಲುಮಿಯಾ 920 ಎಂಬಂತಹ ವಿನ್ಯಾಸವನ್ನು ಅನುಕರಿಸುವ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಇದಾಗಲಿದೆ. ಈ ಸ್ಮಾರ್ಟ್ಫೋನ್ ಅನ್ನು ಎರಡು ವರ್ಷಗಳ ಮುಂಚೆ ಅಂದ್ರೆ 2012 ರಲ್ಲಿ ಘೋಷಿಸಲಾಯಿತು ಇದು ವರ್ಣರಂಜಿತ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿದ್ದು ಅದು ಎಲ್ಲಾ 4 ಕಡೆಗಳಲ್ಲಿ ಕರ್ವ್ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಗಳಿವೆ. ಇದರ ಬಿಡುಗಡೆ ಮತ್ತು ಬೆಲೆಯ ಬಗ್ಗೆ ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿ ನೀಡಿಲ್ಲ.

HMD Skyline Nokia Lumia 920 design may come back soon 2024

HMD Skyline ನೋಕಿಯಾ Lumia 920 ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು:

Nokiamob.net ವರದಿಗಳ ಪ್ರಕಾರ ಸೋರಿಕೆಯಾಗಿರುವ ಫೀಚರ್ ಬಗ್ಗೆ ಮಾತನಾಡುವುದಾದರೆ ಫೋನ್ 6.4 ಇಂಚಿನ AMOLED FHD+ ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಹೊಂದುವ ನಿರೀಕ್ಷೆಗಳಿವೆ. ಇದು ಹೆಚ್ಚು ತೆಳುವಾದ ಬೆಜೆಲ್‌ಗಳನ್ನು ಒಳಗೊಂಡಿರುವ ದೊಡ್ಡ ಡಿಸ್‌ಪ್ಲೇಯೊಂದಿಗೆ ನೋಕಿಯಾದ ಫ್ಯಾಬುಲಾ ವಿನ್ಯಾಸದ ಆಧುನಿಕ ಟೇಕ್‌ನಂತೆ HMD ಸ್ಕೈಲೈನ್ ಕಾಣುತ್ತದೆ. ಸ್ಮಾರ್ಟ್‌ಫೋನ್ 12GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ Snapdragon 7s Gen 2 ಪ್ರೊಸೆಸರ್‌ನಿಂದ ಚಾಲಿತವಾಗಲಿದ್ದು ಎಂದು ಊಹಿಸಲಾಗಿದೆ. ವಿಶೇಷಣಗಳ ಪ್ರಕಾರ ಇದು ಮಧ್ಯ-ಶ್ರೇಣಿಯ ಸ್ಮಾರ್ಟ್‌ಫೋನ್‌ನಂತೆ ಕಾಣುತ್ತದೆ ಮತ್ತು ಇತರ HMD ನಿರ್ಮಿತ Nokia ಸ್ಮಾರ್ಟ್‌ಫೋನ್‌ಗಳಂತೆ ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನ್ನು ಅವಲಂಭಿಸಿದ್ದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುವವುದಾಗಿ ನಿರೀಕ್ಷಿಸಲಾಗಿದೆ.

ಈ ಮುಂಬರಲಿರುವ HMD Skyline Nokia Lumia 920 ಡಿಸೈನ್ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ IP67 ವಾಟರ್ ಮತ್ತು ಡಸ್ಟ್ ಪ್ರೊಫ್ ಆಗಿದ್ದು ಇದರಲ್ಲಿ ನಿಮಗೆ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಫೋನ್ ಡಿಸ್ಪ್ಲೇಯಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿರಬಹುದು. ಇದರ ಕ್ಯಾಮೆರಾಗಳ ಬಗ್ಗೆ ಮಾತಾನಾಡುವುದಾದರೆ 8MP MP ಅಲ್ಟ್ರಾ-ವೈಡ್ ಮತ್ತು 2MP ಡೆಪ್ತ್/ಮ್ಯಾಕ್ರೋ ಲೆನ್ಸ್ ಜೊತೆಗೆ ಇದರ ಪ್ರೈಮರಿ ಕ್ಯಾಮೆರಾ 108MP ಸೆನ್ಸರ್ ಅನ್ನು ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಇದರ ವರದಿಯಾಗಿದ್ದು ಪ್ರಸ್ತುತ ಹೊಂದಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಫೋನ್ 32MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವುದಾಗಿ ಹೆಚ್ಚಿನ ಮಾಹಿತಿಗಳು ಇಂಟೆರ್ನೆಟ್ನಲ್ಲಿ ಹರಿದಾಡುತ್ತಿವೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :