ಭಾರತದಲ್ಲಿ HMD Crest ಮತ್ತು HMD Crest Max ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

ಭಾರತದಲ್ಲಿ HMD Crest ಮತ್ತು HMD Crest Max ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
HIGHLIGHTS

ಭಾರತದಲ್ಲಿ HMD Crest ಮತ್ತು HMD Crest Max ಎಂಬ ಎರಡು ಹೊಸ ಸ್ಮಾರ್ಟ್ಫೋನ್ ಬಿಡುಗಡೆ

ಈ ಎರಡೂ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ FHD+ OLED ಡಿಸ್‌ಪ್ಲೇಯನ್ನು ಹೊಂದಿವೆ.

ಈ ಎರಡೂ ಫೋನ್‌ಗಳು 5000mAh ಬ್ಯಾಟರಿಯೊಂದಿಗೆ 33W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿವೆ.

ಫಿನ್‌ಲ್ಯಾಂಡ್‌ನ ಮೊಬೈಲ್ ಉತ್ಪಾದನಾ ಕಂಪನಿ HMD ಗ್ಲೋಬಲ್ ಇಲ್ಲಿಯವರೆಗೆ ನೋಕಿಯಾದಿಂದ (Nokia) ಹೆಸರುವಾಸಿಯಾಗಿದ್ದ ಬ್ರಾಂಡ್ ಈಗ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ HMD ಎರಡು ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ತಮ್ಮದೇಯಾದ ಬ್ರ್ಯಾಂಡಿಂಗ್‌ನೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಿದ್ದಾರೆ. ಕಂಪನಿ ಇಂದು ಭಾರತದಲ್ಲಿ HMD Crest ಮತ್ತು HMD Crest Max ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ತಂದಿದ್ದು ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲದಾಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ FHD+ OLED ಡಿಸ್‌ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ 33W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಭಾರತದಲ್ಲಿ HMD Crest ಬಗ್ಗೆ ವಿವರಗಳು

ಮೊದಲಿಗೆ HMD Crest ಬಗ್ಗೆ ಮಾತನಾಡುವುದಾದರೆ ಫೋನ್ 6.67 ಇಂಚಿನ FHD+ OLED ಡಿಸ್ಪ್ಲೇ ಹೊಂದಿದೆ. ಇದು Unisoc T760 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತ ಆಂಡ್ರಾಯ್ಡ್ 14 ನಿಂದ ಚಾಲಿತವಾಗಿದೆ. ಈ ಫೋನ್‌ನೊಂದಿಗೆ ನೀವು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಪಡೆಯುತ್ತೀರಿ. ಕ್ಯಾಮೆರಾಗಳಿಗಾಗಿ ಇದು 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಂಭಾಗದಲ್ಲಿಯೂ ಸಹ ಇದು 50MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಇದಲ್ಲದೆ ನೀವು 33W ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡೆಯುತ್ತೀರಿ.

Also Read: ಎಚ್ಚರ! ಅಪ್ಪಿತಪ್ಪಿ SIM Card ಸಂಬಧಿಸಿದ ಈ ನಿಯಮ ಉಲ್ಲಂಘಿಸಿದರೆ 2 ಲಕ್ಷ ದಂಡ ಮತ್ತು ಜೈಲು ಸೇರಬೇಕಾಗಬಹುದು!

HMD Crest and Crest Max smartphones in India
HMD Crest and Crest Max smartphones in India

ಭಾರತದಲ್ಲಿ HMD Crest Max ಬಗ್ಗೆ ವಿವರಗಳು

ಮತ್ತೊಂದೆಡೆಯಲ್ಲಿ HMD Crest Max ಬಗ್ಗೆ ಮಾತನಾಡುವುದಾದರೆ ಇದು 6.67 ಇಂಚಿನ FHD+ OLED ಡಿಸ್ಪ್ಲೇ ಹೊಂದಿದೆ. ಇದು Unisoc T760 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 14 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ನೀವು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಸಹ ಪಡೆಯುತ್ತೀರಿ. ಕ್ಯಾಮೆರಾ ಮುಂಭಾಗದಲ್ಲಿ ಇದು 64MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕವನ್ನು ಹೊಂದಿದೆ. ಇದು 50MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಸಹ ಹೊಂದಿದೆ. ಕೊನೆಯದಾಗಿ ಇದು 33-ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

HMD Crest and Crest Max smartphones in India
HMD Crest and Crest Max smartphones in India

ಎಚ್ಎಂಡಿ Crest ಮತ್ತು ಎಚ್ಎಂಡಿ Crest Max ಬೆಲೆ ಮತ್ತು ಲಭ್ಯತೆ

ಕಂಪನಿ ಇಂದು ಭಾರತದಲ್ಲಿ HMD Crest ಮತ್ತು HMD Crest Max ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಮೊದಲಿಗೆ HMD Crest ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 14,499 ರೂಗಳಿಗೆ ಬಿಡುಗಡೆಗೊಳಿಸಿದ್ದು ಇದರ HMD Crest Max ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 16,499 ರೂಗಳಿಗೆ ಬಿಡುಗಡೆಗೊಳಿಸಿದೆ. ಇದರೊಂದಿಗೆ HMD ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನಲ್ಲಿ ಮುಂಬರಲಿರುವ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಅಮೆಜಾನ್‌ನಲ್ಲಿ ಆಸಕ್ತರ ಖರೀದಿಗೆ ಲಭ್ಯವಿರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo