Poco X3 ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಉತ್ತಮ ಅವಕಾಶ ಆಕರ್ಷಕ ಕೊಡುಗೆಗಳು ನೀಡುತ್ತಿದೆ

Updated on 21-Nov-2020
HIGHLIGHTS

POCO X3 ಸ್ಮಾರ್ಟ್‌ಫೋನ್ 6000 mAh ಬ್ಯಾಟರಿಯನ್ನು ಹೊಂದಿದ್ದು ಇದು 33w MMT ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Poco X3 ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆಕ್ಸಿಸ್ ಬ್ಯಾಂಕ್‌ನಿಂದ 5% ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುವುದು.

ಈ ಫೋನ್ ಅನ್ನು ಶ್ಯಾಡೋ ಗ್ರೇ ಮತ್ತು ಕೋಬಾಲ್ಟ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.

ನಿಮಗಾಗಿ ಹೊಸ ಸ್ಮಾರ್ಟ್ಫೋನ್ ಖರೀದಿಸಲು ನೀವು ಯೋಚಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ 20000 ರೂಗಳಾಗಿದ್ದರೆ ಈ POCO X3 ನಿಮ್ಮ ಮೊದಲ ಆಯ್ಕೆಯಾಗಬಹುದು. ಈ ಸ್ಮಾರ್ಟ್ಫೋನ್ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಉತ್ತಮ ಕೊಡುಗೆಗಳು ಮತ್ತು ಡೀಲ್ಗಳೊಂದಿಗೆ ಲಭ್ಯವಿದೆ. ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ POCO X3 ಸ್ಮಾರ್ಟ್‌ಫೋನ್ 6,000 mAh ಬ್ಯಾಟರಿಯನ್ನು ಹೊಂದಿದ್ದು ಇದು ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಇದರೊಂದಿಗೆ ಫೋನ್‌ಗೆ ಒಟ್ಟು ಐದು ಕ್ಯಾಮೆರಾ ಬೆಂಬಲ ಸಿಕ್ಕಿದೆ.

POCO X3 ಬೆಲೆ ಮತ್ತು ಕೊಡುಗೆ

ಪೊಕೊ ಎಕ್ಸ್ 3 ಸ್ಮಾರ್ಟ್‌ಫೋನ್‌ನ 6GB RAM + 64GB ಸ್ಟೋರೇಜ್ ಇದರೊಂದಿಗೆ 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ರೂಪಾಂತರಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 16,999, 18,499 ಮತ್ತು 19,999 ರೂಗಳಾಗಿವೆ. ಈ ಫೋನ್ ಅನ್ನು ಶ್ಯಾಡೋ ಗ್ರೇ ಮತ್ತು ಕೋಬಾಲ್ಟ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಆಫರ್ ಬಗ್ಗೆ ಮಾತನಾಡುವುದಾದರೆ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆಕ್ಸಿಸ್ ಬ್ಯಾಂಕ್‌ನಿಂದ 5% ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುವುದು. ಅಲ್ಲದೆ ಕ್ರೆಡಿಟ್ ಕಾರ್ಡ್ ಹೊಂದಿರುವವರು ಆಕ್ಸಿಸ್ ಬ್ಯಾಂಕ್ ಬುಜ್ 5% ಪ್ರತಿಶತ ರಿಯಾಯಿತಿ ಪಡೆಯುತ್ತಾರೆ. ಇದಲ್ಲದೆ ಈ ಹ್ಯಾಂಡ್‌ಸೆಟ್ ಅನ್ನು ತಿಂಗಳಿಗೆ 2,056 ರೂಗಳ ಯಾವುದೇ ವೆಚ್ಚವಿಲ್ಲದ ಇಎಂಐನಲ್ಲಿ ಖರೀದಿಸಬಹುದು.

POCO X3 ಫೀಚರ್

ಪೊಕೊ ಎಕ್ಸ್ 3 ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಗೇಮಿಂಗ್ಗಾಗಿ ಸ್ನಾಪ್ಡ್ರಾಗನ್ 732G ಪ್ರೊಸೆಸರ್ ಹೊಂದಿದೆ. ಇದಲ್ಲದೆ ಈ ಸಾಧನವು ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ನ ಬೆಂಬಲವನ್ನು ಪಡೆದುಕೊಂಡಿದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಕಂಪನಿಯು POCO X3 ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಿದ್ದು ಇದು 64MP ಸೋನಿ IMX 682 ಸೆನ್ಸರ್, 13MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2MP ಟೆಲಿಮಿಕ್ರೊ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಹೊಂದಿದೆ. ಅಲ್ಲದೆ ಫೋನ್ ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 

POCO X3 ಸ್ಮಾರ್ಟ್‌ಫೋನ್ 6000 mAh ಬ್ಯಾಟರಿಯನ್ನು ಹೊಂದಿದ್ದು ಇದು 33w MMT ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಅಲ್ಲಿ  ಸಂಪರ್ಕಕ್ಕಾಗಿ ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :