ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಲಭ್ಯ!

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಲಭ್ಯ!
HIGHLIGHTS

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ರಿಯಾಯಿತಿಗಳು ಮತ್ತು ಕೊಡುಗೆಗಳು ಮೇ 8 ರವರೆಗೆ ಮಾತ್ರ ಇರುತ್ತದೆ.

ಇದರ ಜೊತೆಗೆ 18 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ನೀಡಲಾಗುತ್ತದೆ.

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಈಗ ಹಲವಾರು ರಿಯಾಯಿತಿಗಳು ಮತ್ತು ಕೊಡುಗೆಗಳು ಲಭ್ಯವಿವೆ.

Amazon Summer Sale 2023: ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಈಗ ಹಲವಾರು ರಿಯಾಯಿತಿಗಳು ಮತ್ತು ಕೊಡುಗೆಗಳು ಲಭ್ಯವಿವೆ. ಹೆಚ್ಚಿನದನ್ನು ಪಡೆಯಲು ಇಂದೇ  ಅಮೆಜಾನ್‌ ಸೈಟ್‌ಗೆ ಭೇಟಿ ನೀಡಿ ಏಕೆಂದರೆ ಈ ರಿಯಾಯಿತಿಗಳು ಮತ್ತು ಕೊಡುಗೆಗಳು ಮೇ 8 ರವರೆಗೆ ಮಾತ್ರ ಇರುತ್ತದೆ. ಇದರ ಜೊತೆಗೆ ಪ್ರೈಮ್ ಸದಸ್ಯರು 250 ರೂ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತಾರೆ. ಸ್ಯಾಮ್‌ಸಂಗ್ ಫೋನ್‌ಗಳಲ್ಲಿ A-ಸರಣಿ, M-ಸರಣಿ ಮತ್ತು S-ಸರಣಿ ಮೊಬೈಲ್‌ಗಳ ಮೇಲೆ ಅದ್ಭುತವಾದ ರಿಯಾಯಿತಿಗಳೊಂದಿಗೆ ಸೇಲ್‌ ಮಾಡಲಾಗುತ್ತದೆ.

ಅಮೆಜಾನ್ ಸಮ್ಮರ್ ಸೇಲ್‌ 2023

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಅಲ್ಲದೆ ICICI ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಗ್ರಾಹಕರು ಹೆಚ್ಚುವರಿಯಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ಮತ್ತು EMI ವಹಿವಾಟುಗಳ ಮೇಲೆ 10% ವರೆಗಿನ ರಿಯಾಯಿತಿ ಲಾಭವನ್ನು ಪಡೆಯಬಹುದು. ಇದರ ಜೊತೆಗೆ 18 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ನೀಡಲಾಗುತ್ತದೆ. ಹೆಚ್ಚುವರಿಯಾಗಿ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 10,000 ವರೆಗೆ ವಿನಿಮಯ ಮಾಡಿಕೊಳ್ಳಬಹುದು.

Samsung Galaxy M13 – Buy Now

Samsung Galaxy M13 ಸ್ಮಾರ್ಟ್‌ಫೋನ್‌ ಅನ್ನು  ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಕೇವಲ 9,699 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 14,999 ರೂ ಆಗಿದೆ. ಹೆಚ್ಚುವರಿಯಾಗಿ ನಿರ್ದಿಷ್ಟ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ನೀವು ಉಚಿತ EMI ಪಡೆಯಬಹುದು.
Samsung Galaxy M13 4GB ಮತ್ತು 6GB ಎರಡು RAM ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಈ ಫೋನ್‌ ಪ್ರಬಲವಾದ ಆಕ್ಟಾ-ಕೋರ್ Samsung Exynos 850 ಪ್ರೊಸೆಸರ್ ನಿಂದ ಚಾಲಿತವಾಗಿದೆ. Android 12 ಮೂಲಕ ಕಾರ್ಯ ನಿರ್ವಹಿಸುವ ಈ ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ.

Samsung Galaxy M04 – Buy Now

Samsung Galaxy M04 ಸ್ಮಾರ್ಟ್‌ಫೋನ್‌ MediaTek P35 Octa-Core ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್ ಕೈಗೆಟುಕುವ ಬೆಲೆಯಲ್ಲಿದ್ದು ಡ್ಯುಯಲ್ VoLTE ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ ಈ ಫೋನ್‌ನಲ್ಲಿ HDR ಮೋಡ್‌ ಸೇರಿದಂತೆ ಉತ್ತಮವಾದ ವೀಡಿಯೊಗ್ರಫಿ ಅನುಭವವನ್ನು ಪಡೆಯಬಹುದು. ಈ ಪೋನ್‌ನ ಬೆಲೆ 11,999 ರೂ ಆಗಿದೆ. ಆದರೆ ಈ ಅಮೆಜಾನ್ ಸಮ್ಮರ್ ಸೇಲ್‌ನ ಮೂಲಕ ಈ ಫೋನ್‌ ಅನ್ನು ನೀವು ಕೇವಲ 6,999 ರೂಪಾಯಿಗೆ ಖರೀದಿಸಬಹುದು.

Samsung Galaxy M33 5G – Buy Now

ನೀವು ಬಜೆಟ್‌ನಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ Galaxy M33 5G ಅತ್ಯುತ್ತಮ ಆಯ್ಕೆಯಾಗಿದೆ. ನೀವು ಈ ಅಮೆಜಾನ್ ಸಮ್ಮರ್ ಸೇಲ್‌ನ ಮೂಲಕ ಈ ಫೋನ್‌ ಅನ್ನು ಕೇವಲ 15,999 ರೂಪಾಯಿಗೆ ಪಡೆಯಬಹುದು. ಈ ಸ್ಮಾರ್ಟ್‌ಫೋನ್‌ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.6-ಇಂಚಿನ ಫುಲ್ HD ಡಿಸ್ಪ್ಲೇಯನ್ನು ಹೊಂದಿದೆ. Exynos 1280 Octa ಕೋರ್ ಪ್ರೊಸೆಸರ್ ನಿಂದ ಇದು ಚಾಲಿತವಾಗಿದ್ದು  6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು 1TB ಗೆ ವಿಸ್ತರಿಸಬಹುದು. ಮುಖ್ಯವಾಗಿ ಈ ಫೋನ್‌ನಲ್ಲಿ 6000 mAh ಬ್ಯಾಟರಿ ಮತ್ತು ಕ್ವಾಡ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡಲಾಗಿದೆ.

Samsung Galaxy M53 5G – Buy Now

Samsung Galaxy M53 5G ಸ್ಮಾರ್ಟ್‌ಫೋನ್‌ MTK D900 ಆಕ್ಟಾ ಕೋರ್ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಈ ಫೋನ್‌ 8GB RAM ಮತ್ತು 8GB ವರೆಗೆ ಬೆಂಬಲಿಸುವ RAM ಪ್ಲಸ್ ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ ನೀವು 128GB ಇಂಟರ್ನಲ್ RAM ಅನ್ನು 1TB ಗೆ ವಿಸ್ತರಿಸಬಹುದು. ಈ ಅಮೆಜಾನ್ ಸಮ್ಮರ್ ಸೇಲ್‌ನ ಮೂಲಕ ಈ ಫೋನ್‌ ಅನ್ನು ನೀವು ಕೇವಲ 23,999 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 34,999 ರೂ ಆಗಿದೆ.

Samsung Galaxy S20 FE 5G – Buy Now

Samsung Galaxy S20 FE 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 865 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರುವ ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ ಆಗಿದೆ. ಇದರ IP68 ರೇಟಿಂಗ್‌ನಿಂದ ಈ ಫೋನ್‌ ಧೂಳು ಮತ್ತು ನೀರು-ನಿರೋಧಕವಾಗಿದೆ. ಇದರಲ್ಲಿ ನೈಟ್ ಮೋಡ್, 30X ಸ್ಪೇಸ್ ಜೂಮ್, ಮತ್ತು ಸಿಂಗಲ್ ಟೇಕ್‌ನಂತಹ ಫೀಚರ್‌ಗಳು ಲಭ್ಯವಿದೆ. ಇದರ ಪ್ರೊ-ಗ್ರೇಡ್ ಕ್ಯಾಮೆರಾದಲ್ಲಿ ಉತ್ತಮವಾದ ಫೋಟೋಗಳನ್ನು  ತೆಗೆದುಕೊಳ್ಳಬಹುದು. ಈ ಅಮೆಜಾನ್ ಸಮ್ಮರ್ ಸೇಲ್‌ನ ಮೂಲಕ ಈ ಫೋನ್‌ ಅನ್ನು ನೀವು ಕೇವಲ 26,990 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 74,999 ರೂ ಆಗಿದೆ.

Samsung Galaxy A23 – Buy Now

Samsung Galaxy A23 ಸ್ಮಾರ್ಟ್‌ಫೋನ್ ಪ್ರಸ್ತುತ ಕೇವಲ 22,999 ರೂಪಾಯಿಗೆ ಲಭ್ಯವಿದೆ. ಇದರ ಮೂಲ ಬೆಲೆ 28,990 ರೂ ಆಗಿದೆ. ಅಲ್ಲದೆ ಹೆಚ್ಚುವರಿಯಾಗಿ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಮೂಲಕ 2,000 ರೂಪಾಯಿಗಳನ್ನು ಉಳಿಸಬಹುದು. ಇದರ ಜೊತೆಗೆ ನಿಮ್ಮ ನಿಮ್ಮ ಹಳೆಯ ಫೋನ್ ಅನ್ನು Galaxy A23 ಗೆ ವಿನಿಮಯ ಮಾಡಿಕೊಳ್ಳುವ ಮೂಲಕ 20,000 ರೂಪಾಯಿಗಿಂತಲೂ ಹೆಚ್ಚು ಉಳಿಸಬಹುದು. ಈ ಫೋನ್ 6.6 ಇಂಚಿನ LCD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಅಲ್ಲದೆ ಈ ಫೋನ್‌ನ 5000mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo