CMF Phone 1 Price Cut: ಕೇವಲ ₹14,343 ರೂಗಳಿಗೆ ಸಿಎಂಎಫ್ ಫೋನ್ ಖರೀದಿಸುವ ಸುವರ್ಣವಕಾಶ! ಇದು ಲಿಮಿಟೆಡ್ ಟೈಮ್ ಆಫರ್!
![CMF Phone 1 Price Cut: ಕೇವಲ ₹14,343 ರೂಗಳಿಗೆ ಸಿಎಂಎಫ್ ಫೋನ್ ಖರೀದಿಸುವ ಸುವರ್ಣವಕಾಶ! ಇದು ಲಿಮಿಟೆಡ್ ಟೈಮ್ ಆಫರ್! CMF Phone 1 Price Cut: ಕೇವಲ ₹14,343 ರೂಗಳಿಗೆ ಸಿಎಂಎಫ್ ಫೋನ್ ಖರೀದಿಸುವ ಸುವರ್ಣವಕಾಶ! ಇದು ಲಿಮಿಟೆಡ್ ಟೈಮ್ ಆಫರ್!](https://static.digit.in/CMF-Phone-1-Price-Cut-In-India.png)
CMF Phone 1 ಮೇಲೆ ಅಮೆಜಾನ್ ಮೂಲಕ ಭಾರಿ ಬೆಲೆ ಕಡಿತವಾಗಿದೆ
CMF Phone 1 ಫೋನ್ 8GB RAM ಮತ್ತು 128GB ಸ್ಟೋರೇಜ್ ಕೇವಲ ₹14,343 ರೂಗಳಿಗೆ ಖರೀದಿಸಬಹುದು.
CMF Phone 1 ಫೋನ್ 6.67ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದಿದೆ.
CMF Phone 1 Price Cut In India: ನಥಿಂಗ್ ಕಂಪನಿಯ ಲೇಟೆಸ್ಟ್ ಸಿಎಂಎಫ್ ಫೋನ್ ಪ್ರಸಿದ್ಧ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಅತಿ ಕಡಿಮೆ ಬೆಲೆಗೆ ಪಟ್ಟಿಯಾಗಿದೆ. ಕಳೆದ ವರ್ಷದ ಅತ್ಯಂತ ರೋಮಾಂಚಕಾರಿ ಡೀಲ್ ಇತ್ತೀಚೆಗೆ ಬಿಡುಗಡೆಯಾದ CMF Phone 1 ಇದನ್ನು ಸುಮಾರು 17,999 ರೂಗಳ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು ಆದರೆ ಪ್ರಸ್ತುತ ಈ ಬೆಲೆಯನ್ನ ಫೋನ್ ಕಳೆದುಕೊಂಡಿದ್ದು ಬ್ಯಾಂಕ್ ಆಫರ್ ಸೇರಿಸಿ ಇದರ 8GB RAM ಮತ್ತು 128GB ಸ್ಟೋರೇಜ್ ಕೇವಲ ₹14,343 ರೂಗಳಿಗೆ ಖರೀದಿಸುವ ಸುವರ್ಣವಕಾಶವನ್ನು ಗ್ರಾಹಕರಿಗೆ ಅಮೆಜಾನ್ ನೀಡುತ್ತಿದೆ.
CMF Phone 1 Price Cut In India ಆಫರ್ ಬೆಲೆ:
CMF Phone 1 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹14,170 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹16,093 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು HDFC Bank Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಸುಮಾರು 1750 ರೂಗಳವರೆಗಿನ ಹೆಚ್ಚುವರಿ ಡಿಸ್ಕೌಂಟ್ ಪಡೆಯುವ ಮೂಲಕ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 14,343 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ CMF Phone 1 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 15,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 43 ಇಂಚಿನ Special Edition Smart TV ಅತಿ ಕಡಿಮೆ ಬೆಲೆಗೆ ಲಭ್ಯ! ಯಾರಿಗುಂಟು ಈ ಜಬರ್ದಸ್ತ್ ಆಫರ್!
CMF Phone 1 ಫೀಚರ್ ಮತ್ತು ವಿಶೇಷಣಗಳೇನು?
CMF Phone 1 ಸ್ಮಾರ್ಟ್ಫೋನ್ ತನ್ನ 6.67ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ರೋಮಾಂಚಕ ಬಣ್ಣಗಳು ಮತ್ತು ವಿವರವಾದ ಸ್ಥಿರವಾದ ಶಾಟ್‌ಗಳನ್ನು ಸೆರೆಹಿಡಿಯುವ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಪ್ರಭಾವಿತವಾಗಿದೆ. ಇದರ 5000mAh ಬ್ಯಾಟರಿಯು ಎಲ್ಲಾ ದಿನ ಬಳಕೆಯನ್ನು ನೀಡಿತು ಆದರೆ ಸಾಧಾರಣ 33W ನಲ್ಲಿ ಚಾರ್ಜ್ ಆಗುತ್ತದೆ. CMF Phone 1 ಸ್ಮಾರ್ಟ್ಫೋನ್ Android 14 ಆಧಾರಿತ ಕ್ಲೀನ್ NothingOS ನಲ್ಲಿ ರನ್ ಆಗುತ್ತಿದೆ ಇದು ಬಜೆಟ್ ವಿಭಾಗದಲ್ಲಿ ಸರಳ ಮತ್ತು ಪ್ರೀಮಿಯಂ ಅನುಭವವನ್ನು ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile