ಕೇವಲ 5000 ರೂಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಜಬರ್ದಸ್ತ್ POCO C61 ಸ್ಮಾರ್ಟ್ಫೋನ್!

Updated on 08-Nov-2024
HIGHLIGHTS

ಈ ಉತ್ತಮ POCO C61 ಸ್ಮಾರ್ಟ್ಫೋನ್ ಪ್ರಸ್ತುತ ಅತಿ ಕಡಿಮೆ ಬೆಲೆ ₹6,299 ರೂಗಳಿಗೆ ಪಟ್ಟಿಯಾಗಿದೆ

ಅಮೆಜಾನ್ ಮೂಲಕ ಬ್ಯಾಂಕ್ ಆಫರ್ ಬಳಸಿ ಸುಮಾರು 1750 ರೂಗಳವೆರೆಗೆ ಡಿಸ್ಕೌಂಟ್ ಪಡೆಯಬಹುದು.

POCO C61 ಸ್ಮಾರ್ಟ್ಫೋನ್ 6.71 ಇಂಚಿನ ಡಿಸ್‌ಪ್ಲೇಯೊಂದಿಗೆ 90Hz ರಿಫ್ರೆಶ್ ದರವನ್ನು ಹೊಂದಿದೆ.

ಪ್ರಸುತ ಅತಿ ಕಡಿಮೆ ಬೆಲೆಗೆ ಮತರವಾಗುತ್ತಿರುವ ಈ Poco C61 ಬಜೆಟ್ ಸ್ಮಾರ್ಟ್‌ಫೋನ್‌ ಲೇಟೆಸ್ಟ್ ಫೀಚರ್ಗಳೊಂದಿಗೆ ಆಕರ್ಷಿಕ ಡಿಸೈನಿಂಗ್ ಜೊತೆಗೆ ಉತ್ತಮ ಕೊಡುಗೆಗಳನ್ನು ನೀಡುತ್ತದೆ. ಇದನ್ನು ಆಸಕ್ತರು ಅಮೆಜಾನ್ ಮೂಲಕ ಮಾರಾಟದಲ್ಲಿ ಅತಿ ಕಡಿಮೆ ಕಡಿಮೆ ಬೆಲೆ ₹6,299 ರೂಗಳಿಗೆ ಪಟ್ಟಿಯಾಗಿದೆ ಆದ್ರೆ ಬ್ಯಾಂಕ್ ಆಫರ್ ಸುಮಾರು 1750 ರೂಗಳವೆರೆಗೆ ಡಿಸ್ಕೌಂಟ್ ಪಡೆಯಬಹುದು.

ಆದ್ದರಿಂದ Poco C61 ಬಜೆಟ್ ಸ್ಮಾರ್ಟ್‌ಫೋನ್‌ ಇತರ ರಿಯಾಯಿತಿಗಳೊಂದಿಗೆ ಕೆಲವು ಆಸಕ್ತಿದಾಯಕ ಡೀಲ್‌ಗಳನ್ನು ಪಡೆದುಕೊಳ್ಳಲಿದೆ. ಹೀಗಾಗಿ ದಿನನಿತ್ಯದ ಬಳಕೆಯಲ್ಲಿ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಆಯ್ಕೆ ಮಾಡಲು Poco C61 ಸ್ಮಾರ್ಟ್‌ಫೋನ್‌ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

Also Read: 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾವುಳ್ಳ ಹೊಸ Infinix Hot 40i ಕೇವಲ ₹7749 ರೂಗಳಿಗೆ ಮಾರಾಟ!

POCO C61 ಬೆಲೆ ಮತ್ತು ಡೀಲ್‌ಗಳು

ಈ ಬೆಸ್ಟ್ 4G ಬಜೆಟ್ ಸ್ಮಾರ್ಟ್ಫೋನ್ ಆರಂಭಿಕ 4GB RAM + 64GB ಸಂಗ್ರಹಣೆಯೊಂದಿಗೆ ಮೂಲ ಮಾದರಿಗೆ ₹6,299 ರಿಂದ ಪ್ರಾರಂಭವಾಗುತ್ತದೆ. Poco C61 ಬಜೆಟ್ ಸ್ಮಾರ್ಟ್‌ಫೋನ್‌ 6GB RAM + 128GB ಸಂಗ್ರಹಣೆಯೊಂದಿಗೆ ಬರುವ ಹೆಚ್ಚಿನ ರೂಪಾಂತರದ ಬೆಲೆ ₹8,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಮೆಜಾನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನೀವು ಇದನ್ನು ಕಾಣಬಹುದು. ಕಡಿಮೆ ಬೆಲೆ ₹6,299 ರೂಗಳಿಗೆ ಪಟ್ಟಿಯಾಗಿದೆ.

ಆದ್ರೆ HDFC Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು ₹1750 ರೂಗಳವೆರೆಗೆ ಡಿಸ್ಕೌಂಟ್ ಪಡೆದ ನಂತರ ಕೇವಲ ₹4549 ರೂಗಳಿಗೆ ಖರೀದಿಸುವ ಅವಕಾಶವಿದ್ದು ಇದಕ್ಕೆ ಷರತ್ತು ಅನ್ವಯಿಸುತ್ತದೆ. POCO C61 ಸ್ಮಾರ್ಟ್ಫೋನ್ ಅನ್ನು ಸರಳತೆ ಮತ್ತು ಶೈಲಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. Poco C61 ಬಜೆಟ್ ಸ್ಮಾರ್ಟ್‌ಫೋನ್‌ ನಯವಾದ ವಿನ್ಯಾಸವು ದಿನವಿಡೀ ಬಳಸಲು ಸುಲಭಗೊಳಿಸುತ್ತದೆ ಕನಿಷ್ಠ ಸೌಂದರ್ಯವನ್ಮೆಚ್ಚುವ ಬಳಕೆದಾರರಿಗೆ ಸೂಕ್ತವಾಗಿದೆ.

POCO C61 ಫೀಚರ್ಗಳೇನು?

POCO C61 ಸ್ಮಾರ್ಟ್ಫೋನ್ 720 × 1650 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.71 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರವನ್ನು ಹೊಂದಿದೆ. ಬ್ರೌಸಿಂಗ್ ಮತ್ತು ಮಾಧ್ಯಮ ಬಳಕೆ ಸೇರಿದಂತೆ ಸಾಮಾನ್ಯ ಬಳಕೆಗೆ ಡಿಸ್ಪ್ಲೇ ಸುಗಮ ಮತ್ತು ಸ್ಪಂದಿಸುವಂತೆ ಮಾಡುತ್ತದೆ. ವಾಟರ್‌ಡ್ರಾಪ್ ನಾಚ್ ಫೋನ್‌ನ ವಿನ್ಯಾಸಕ್ಕೆ ಆಧುನಿಕ ನೋಟವನ್ನು ನೀಡುತ್ತದೆ.

POCO C61 ಸ್ಮಾರ್ಟ್ಫೋನ್ 8MP ಪ್ರೈಮರಿ ಲೆನ್ಸ್ ಮತ್ತು 0.08 MP ಡೆಪ್ತ್ ಸೆನ್ಸಾರ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 5MP ಕ್ಯಾಮೆರಾ ಇದೆ. POCO C61 ಸ್ಮಾರ್ಟ್ಫೋನ್ ಫ್ಲ್ಯಾಗ್‌ಶಿಪ್ ಕ್ಯಾಮೆರಾಗಳಂತೆ ಸುಧಾರಿತವಾಗಿಲ್ಲದಿದ್ದರೂ ದೈನಂದಿನ ಛಾಯಾಗ್ರಹಣ ಅಗತ್ಯಗಳಿಗೆ ಈ ಸೆಟಪ್ ಸಾಕಾಗುತ್ತದೆ.

Also Read: ಭಾರತದಲ್ಲಿ Redmi A4 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

POCO C61 ಸ್ಮಾರ್ಟ್ಫೋನ್ Helio G36 ಆಕ್ಟಾ-ಕೋರ್ ಪ್ರೊಸೆಸರ್ 2.2 GHz ನಿಂದ ನಡೆಸಲ್ಪಡುತ್ತಿದೆ. Poco C61 ದೈನಂದಿನ ಕಾರ್ಯಗಳಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಬರುತ್ತದೆ. ಇದರ ಗಮನಾರ್ಹವಾದ ವಿಳಂಬವಿಲ್ಲದೆ ಅನೇಕ ಅಪ್ಲಿಕೇಶನ್‌ಗಳು ಏಕಕಾಲದಲ್ಲಿ ರನ್ ಆಗುವುದನ್ನು ಖಚಿತಪಡಿಸುತ್ತದೆ. POCO C61 ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭಾರೀ ಬಳಕೆಯಲ್ಲೂ ಫೋನ್ ದಿನವಿಡೀ ಇರುತ್ತದೆ ಎಂದು ಖಚಿತಪಡಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :