Vivo T4x 5G Sale: ನೀವು ವಿಡಿಯೋ ಅಥವಾ ಫೋಟೋಗಾಗಿ ಅತ್ಯುತ್ತಮ ಕ್ಯಾಮೆರಾದೊಂದಿಗೆ ಜಬರ್ದಸ್ತ್ ಫೀಚರ್ಗಳನ್ನು ತುಂಬಿರುವ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಹುಡುಕುತ್ತಿದ್ದರೆ ಈ ಡೀಲ್ ನಿಮ್ಮ ಕೈ ಜಾರಲು ಬಿಡಲೇಬೇಡಿ. ಯಾಕೆಂದರೆ ಚೀನಾದ ಸ್ಮಾರ್ಟ್ಫೋನ್ ಕಂಪನಿ ವಿವೋ ತನ್ನ ಹೊಸ Vivo T4x 5G ಸ್ಮಾರ್ಟ್ಫೋನ್ ಅನ್ನು ಸುಮಾರು 14,000 ರೂಗಳೊಳಗೆ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿತ್ತು.
ಹೊಸ Vivo T4x 5G ಸ್ಮಾರ್ಟ್ಫೋನ್ ಅನ್ನು ಬರೋಬ್ಬರಿ 6GB RAM ಮತ್ತು 6500mAh ಬ್ಯಾಟರಿಯಂತಹ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪ್ರಸ್ತುತ ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿದೆ. Vivo T4x 5G ಸ್ಮಾರ್ಟ್ಫೋನ್ ಭಾರಿ ಬ್ಯಾಂಕ್ ಆಫರ್ ಮತ್ತು ವಿನಿಮಯ ಆಫರ್ಗಳೊಂದಿಗೆ ನಿಜಕ್ಕೂ ನಿಮ್ಮ ಉಹೆಗಿಂತ ಹೆಚ್ಚು ಫೀಚರ್ಗಳನ್ನು ಹೊಂದಿದೆ.
Vivo T4x 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹13,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹14,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು ಯಾವುದೇ ಬ್ಯಾಂಕ್ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಸುಮಾರು 500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯಬಹುದು. Vivo T4x 5G ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಡಿಯಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹16,100 ರೂಗಳ ವರೆಗೆ ಡಿಸ್ಕೌಂಟ್ ಸಹ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Vivo T4x 5G ಸ್ಮಾರ್ಟ್ಫೋನ್ 6.72 ಇಂಚಿನ ಪೂರ್ಣ HD+ LCD ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ, 1050 nits ಗರಿಷ್ಠ ಹೊಳಪು ಹೊಂದಿದೆ ಮತ್ತು ಈ ಡಿಸ್ಪ್ಲೇ TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಲ್ಪಟ್ಟಿದೆ. ಈ ವಿವೋ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಕ್ಯಾಮೆರಾ ಜೊತೆಗೆ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Vivo T4x 5G ಸ್ಮಾರ್ಟ್‌ಫೋನ್ 6500mAh ಬ್ಯಾಟರಿಯೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಈ ವಿವೋ ಫೋನ್‌ನ ಬಾಳಿಕೆಯ ಬಗ್ಗೆ ಹೇಳುವುದಾದರೆ ಇದು MIL-STD-810H ಮಿಲಿಟರಿ ದರ್ಜೆಯ ಬಾಳಿಕೆ ಪ್ರಮಾಣೀಕರಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಸಂಪರ್ಕಕ್ಕಾಗಿ 5G, 4G VoLTE, Wi-Fi 6, ಬ್ಲೂಟೂತ್ 5.4, GPS, GLONASS, Beidou ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತದೆ.