Infinix Note 40 5G Smartphone
5G Smartphone: ನಿಮಗೊಂದು ಹೊಸ ಸ್ಮಾರ್ಟ್ಫೋನ್ ಸುಮಾರು 15,000 ಕ್ಕಿಂತ ಕಡಿಮೆ ಬೆಲೆಗೆ ಅತ್ಯುತ್ತಮ ಬ್ಯಾಕ್ ಮತ್ತು ಸೆಲ್ಪಿ ಕ್ಯಾಮೆರಾ ಹೊಂದಿರುವ ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ Infinix Note 40 5G ಅತ್ಯುತ್ತಮ ಆಯ್ಕೆಯಾಗಿದೆ. 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಬೆಲೆ ಪ್ಲಿಪ್‌ಕಾರ್ಟ್‌ನಲ್ಲಿ 15,999 ರೂ. ಈ ಡೀಲ್‌ನಲ್ಲಿ ನೀವು ಅದನ್ನು 1000 ಸಾವಿರ ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದು. ಪ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ ಪಾವತಿಸುವ ಬಳಕೆದಾರರಿಗೆ ಶೇಕಡಾ 5% ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ.
Also Read: ChatGPT ಚಂದಾದಾರಿಕೆಯ ಅಗತ್ಯವಿಲ್ಲ! ಉಚಿತವಾಗಿ Grok ಚಾಟ್‍ಬೊಟ್ ಬಳಸಿ Ghibli ಇಮೇಜ್ ಪಡೆಯಬಹುದು!
ಈ Infinix Note 40 5G ಸ್ಮಾರ್ಟ್ಫೋನ್ ಅತ್ಯುತ್ತಮ ವಿನಿಮಯ ಕೊಡುಗೆಯಲ್ಲಿ 9,900 ರೂ.ಗಳವರೆಗೆ ಕಡಿಮೆಯಾಗಬಹುದು. ವಿನಿಮಯ ಕೊಡುಗೆಯಲ್ಲಿ ಲಭ್ಯವಿರುವ ಹೆಚ್ಚುವರಿ ರಿಯಾಯಿತಿಯು ನಿಮ್ಮ ಹಳೆಯ ಫೋನಿನ ಸ್ಥಿತಿ ಅದರ ಬ್ಯಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
Infinix Note 40 5G ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ HD+ AMOLED ಡಿಸ್ಟ್ರೇಯನ್ನು ಒದಗಿಸುತ್ತಿದೆ. ಈ ಡಿಸ್ಸೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರ ಗರಿಷ್ಠ ಹೊಳಪಿನ ಮಟ್ಟ 1300 ನಿಟ್ಸ್ ಆಗಿದೆ. ಈ ಫೋನ್ 8GB LPDDR4x RAM ಮತ್ತು 256GB UFS 3.1 ಸ್ಟೋರೇಜ್ ಬರುತ್ತದೆ. ಇದರಲ್ಲಿ ಡೈಮೆನ್ಸಿಟಿ 7020 ಪ್ರೊಸೆಸರ್ ಅನ್ನು ನೋಡುತ್ತೀರಿ.
ಈ ಫೋನ್‌ನಲ್ಲಿ LED ಫ್ಲ್ಯಾಷ್‌ನೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಒದಗಿಸುತ್ತಿದೆ. ಈ ಕ್ಯಾಮೆರಾ OIS ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದಲ್ಲದೆ ಫೋನ್ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ.ಸೆಲ್ಪಿಗಾಗಿ ಕಂಪನಿಯು ಈ ಫೋನ್‌ನಲ್ಲಿ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುತ್ತಿದೆ.
ಫೋನ್‌ನಲ್ಲಿ ನೀಡಲಾದ ಬ್ಯಾಟರಿ 5000mAh ಆಗಿದೆ. ಈ ಬ್ಯಾಟರಿ 33 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 15w ವ್ಯಾಟ್ ವೈರ್‌ಲೆನ್ ಮ್ಯಾಗ್‌ಚಾರ್ಜ್ ಬೆಂಬಲವನ್ನು ಸಹ ಹೊಂದಿದೆ. ಬಯೋಮೆಟ್ರಿಕ್ ಭದ್ರತೆಗಾಗಿ ಕಂಪನಿಯು ಈ ಫೋನ್‌ನಲ್ಲಿ ಇನ್-ಡಿನ್ನೆ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒದಗಿಸುತ್ತಿದೆ. ಫೋನ್‌ನಲ್ಲಿ Android 14 ಆಧಾರಿತ XOS 14 ಅನ್ನು ನೋಡುತ್ತೀರಿ. ಇದೆಲ್ಲದರ ಜೊತೆಗೆ ಈ ಫೋನ್‌ನಲ್ಲಿ ನೀವು IR ಸೆನ್ಸರ್ ಸಹ ಪಡೆಯುತ್ತೀರಿ.