ಭಾರತದಲ್ಲಿ ಗೂಗಲ್ ತನ್ನ ಲೇಟೆಸ್ಟ್ Google Pixel 9a ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಈ ಹೊಸ Google Pixel 9a ಸ್ಮಾರ್ಟ್ಫೋನ್ 5100mAh ಬ್ಯಾಟರಿ ಮತ್ತು Tensor G4 ಚಿಪ್‌ನೊಂದಿಗೆ ಬರುತ್ತದೆ. ಈ ಫೋನ್ ಬಗ್ಗೆ ಜನ ತುಂಬ ದಿನಗಳಿಂದ ಅಭಿಮಾನಿಗಳು ಈ ಫೋನ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಈ ಫೋನ್ ಹೊಸ ವಿನ್ಯಾಸ, ಸುಧಾರಿತ ಕ್ಯಾಮರಾ ಮತ್ತು AI (Artificial Intelligence) ಫೀಚರ್ಗಳಿಂದ ತುಂಬಿದೆ. ಈ Google Pixel 9a ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ 49,999 ರೂಗಳಿಗೆ ಬಿಡುಗಡೆಗೊಳಿಸಿದೆ.
Google Pixel 9a ಸ್ಮಾರ್ಟ್ಫೋನ್ ಐರಿಸ್, ಪಿಂಗಾಣಿ ಮತ್ತು ಅಬ್ಸಿಡಿಯನ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. Google Pixel 9a ಆರಂಭಿಕ ಬೆಲೆ 8GB RAM ಮತ್ತು 128GB ಸ್ಟೋರೇಜ್ ಮಾದರಿಯನ್ನು 49,999 ರೂಗಳಿಗೆ ಮತ್ತು ಇದರ 8GB RAM ಮತ್ತು 256GB ಸ್ಟೋರೇಜ್ ಮಾದರಿಯನ್ನು 56,999 ರೂಗಳಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಗೂಗಲ್ ಹೆಚ್ಚುವರಿಯಾಗಿ 3 ತಿಂಗಳ ಉಚಿತ ಗೂಗಲ್ ಒನ್ ಮತ್ತು ಯೂಟ್ಯೂಬ್ ಪ್ರೀಮಿಯಂ ನೀಡುತ್ತಿದ್ದು ಆರು ತಿಂಗಳ ಫಿಟ್ಬಿಟ್ ಪ್ರೀಮಿಯಂ ಅನ್ನು ಸಹ ಆಫರ್ ಅಡಿಯನ್ನು ನೀಡುತ್ತಿದೆ.
ಈ Google Pixel 9a ಸ್ಮಾರ್ಟ್ಫೋನ್ 6.3ಇಂಚಿನ Actua ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ ಮತ್ತು 2,700 nits ಗರಿಷ್ಠ ಹೊಳಪಿನೊಂದಿಗೆ ಬರುತ್ತದೆ. 48MP ಮುಖ್ಯ ಕ್ಯಾಮರಾ ಮತ್ತು 13MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾದೊಂದಿಗೆ ಫೋನ್ ಬರುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಫೋನ್ 13MP ಕ್ಯಾಮೆರಾದೊಂದಿಗೆ ಬರುತ್ತದೆ. ಇದು ಮ್ಯಾಜಿಕ್ ಎರೇಸರ್ ಮತ್ತು ನೈಟ್ ಸೈಟ್ ಇತ್ಯಾದಿಗಳಂತಹ ಅನೇಕ AI ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
Also Read: ಇದಕ್ಕಿಂತ ಕಡಿಮೆ ಬೆಲೆಗೆ 40 ಇಂಚಿನ Smart TV ಸಿಗೋಲ್ಲ! ಜಬರ್ದಸ್ತ್ ಡೀಲ್‌ನೊಂದಿಗೆ ಖರೀದಿಸುವ ಅವಕಾಶ!
ಫೋನ್ Tensor G4 ಪ್ರೊಸೆಸರ್ನೊಂದಿಗೆ ಆರಂಭಿಕ 8GB RAM ಮತ್ತು 128GB ವರೆಗಿನ ಸ್ಟೋರೇಜ್ ಹೊಂದಿದೆ. ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್ಗಾಗಿ IP68 ರೇಟಿಂಗ್ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ 7 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಮತ್ತು ಸೆಕ್ಯೂರಿಟಿ ಅಪ್ಡೇಟ್ ನೀಡುತ್ತದೆ.
ಅಲ್ಲದೆ ಫೋನ್ 5G ಸಂಪರ್ಕ, Wi-Fi 6E, ಬ್ಲೂಟೂತ್ 5.3 ಮತ್ತು NFC ಅನ್ನು ಸಹ ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಅನ್ನು ಸಹ ಹೊಂದಿದೆ. ಕೊನೆಯದಾಗಿ ಫೋನ್ 5100mAh ಬ್ಯಾಟರಿಯನ್ನು 23W ವೈರ್ಡ್ ಮತ್ತು 7.5W ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ ಬರುತ್ತದೆ.