Google Pixel 9 Pro: ಸಕತಾಗಿರೋ ಕ್ಯಾಮೆರಾ, ದೊಡ್ಡ ಡಿಸ್ಪ್ಲೇಯಂತಹ ಫೀಚರ್‌ನೊಂದಿಗೆ ಬೆಲೆ ಮತ್ತು ಮಾರಾಟ ಯಾವಾಗ ತಿಳಿಯಿರಿ!

Google Pixel 9 Pro: ಸಕತಾಗಿರೋ ಕ್ಯಾಮೆರಾ, ದೊಡ್ಡ ಡಿಸ್ಪ್ಲೇಯಂತಹ ಫೀಚರ್‌ನೊಂದಿಗೆ ಬೆಲೆ ಮತ್ತು ಮಾರಾಟ ಯಾವಾಗ ತಿಳಿಯಿರಿ!
HIGHLIGHTS

Google Pixel 9 Pro ಸ್ಮಾರ್ಟ್​ಫೋನ್ 6.3 ಇಂಚಿನ Super Actua ಡಿಸ್ಪ್ಲೇಯನ್ನು 1280 x 2856 LTPO OLED ರೆಸಲ್ಯೂಷನ್ ಜೊತೆಗೆ ಬರುತ್ತದೆ.

ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 42MP ಕ್ಯಾಮೆರಾ Dual PD ಸೆಲ್ಫಿ ಕ್ಯಾಮೆರಾವನ್ನು f/2.2 ಅಪರ್ಚರ್‌ನೊಂದಿಗೆ ಬರುತ್ತದೆ.

16GB RAM ಮತ್ತು 256GB ಸ್ಟೋರೇಜ್ ರೂಪಾಂತರದೊಂದಿಗೆ 94,999 ರೂಗಳಿಗೆ ಬಿಡುಗಡೆಯಾಗಿದೆ.

ಭಾರತದಲ್ಲಿ ಗೂಗಲ್ ಪಿಕ್ಸೆಲ್ (Google Pixel) ತನ್ನ ಲೇಟೆಸ್ಟ್ ಪ್ರಾಡಕ್ಟ್ಗಳನ್ನು ಸ್ಮಾರ್ಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅವೆಂದರೆ ಗೂಗಲ್ ಕಂಪನಿ ತಮ್ಮ Pixel 9, Pixel 9 Pro, Pixel 9 Pro XL ಮತ್ತು Pixel 9 Pro Fold ಸ್ಮಾರ್ಟ್​​ಫೋನ್​ಗಳೊಂದಿಗೆ Pixel Buds Pro 2 ಮತ್ತು Pixel Watch 3 ಅನ್ನು ಸಹ ಬಿಡುಗಡೆಗೊಳಿಸಿದೆ. ಆದರೆ ಈ ಲೇಖನದಲ್ಲಿ ನಾನು ನಿಮಗೆ ಕೇವಲ Google Pixel 9 Pro ಸ್ಮಾರ್ಟ್ಫೋನ್ ಬಗ್ಗೆ ಮಾತ್ರ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ. ಇದರ ಬೆಲೆಯೊಂದಿಗೆ ಬೇರೆ ವಿಶೇಷತೆಗಳನ್ನು ನೋಡುವುದಾದರೆ ಅತ್ಯುತ್ತಮವಾದ ಕ್ಯಾಮೆರಾ ಸೆನ್ಸರ್, ಕೂಲ್ ಡಿಸ್ಪ್ಲೇ, ದೊಡ್ಡ ಬ್ಯಾಟರಿ ಎಲ್ಲಾವನ್ನು ಈ ಮುಂದೆ ವಿವರವಾಗಿ ತಿಳಿಯಬಹುದು.

Google Pixel 9 Pro Display Details

ಈ ಪಟ್ಟಿಯಲ್ಲಿ ಮೊದಲಿಗೆ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ Google Pixel 9 Pro ಸ್ಮಾರ್ಟ್​ಫೋನ್ 6.3 ಇಂಚಿನ Super Actua ಡಿಸ್ಪ್ಲೇಯನ್ನು 1280 x 2856 LTPO OLED ರೆಸಲ್ಯೂಷನ್ ಜೊತೆಗೆ ಬರುತ್ತದೆ. ಸ್ಮಾರ್ಟ್​ಫೋನ್ ಇದರಲ್ಲಿ ಸ್ಮೂತ್ ಅನುಭವ ನೀಡಲು 120Hz ರಿಫ್ರೆಶ್ ರೇಟ್ ಅನ್ನು ನೀಡುವುದರೊಂದಿಗೆ Corning Gorilla Glass Victus 2 ಪ್ರೊಟೆಕ್ಷನ್ ಅನ್ನು ಸಪೋರ್ಟ್ ಮಾಡುತ್ತದೆ. ಡಿಸ್ಪ್ಲೇಯಲ್ಲಿ ಉತಮ್ಮ ಕಲರ್ ಅನುಭವವನ್ನು ನೀಡಲು ಸುಮಾರು 2000 ನಿಟ್ಸ್ HDR ಮತ್ತು ಸುಮಾರು 3000 ನಿಟ್ಸ್ ಬ್ರೈಟ್‌ನೆಸ್ ಅನ್ನು 495 PPI ಪಿಕ್ಸೆಲ್ ಡೆನ್ಸಿಟಿಯೊಂದಿಗೆ ಬರುತ್ತದೆ. ಇದರ ಮೂಲಕ ನೀವು ದಿನದ ಸಮಯದಲ್ಲೂ ಸೂರ್ಯನ ಬೆಳಕಿನಲ್ಲೂ ಯಾವುದೇ ತೊಂದರೆಗಳಿಲ್ಲದೆ ಬಳಸಬಹುದು.

Google Pixel 9 Pro launched in India now top 5 features before buy
Google Pixel 9 Pro launched in India now top 5 features before buy

Google Pixel 9 Pro Camera Details

ಈ Google Pixel 9 Pro ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ 50MP ವೈಡ್ ಕ್ಯಾಮೆರಾ f/1.68 ಅಪರ್ಚರ್‌ನೊಂದಿಗೆ 1/1.31 ಗಾತ್ರದ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಮತ್ತೊಂದು 48MP ಅಲ್ಟ್ರಾವೈಡ್ ಕ್ಯಾಮೆರಾ ಆಟೋ ಫೋಕಸ್ ಜೊತೆಗೆ f/1.7 ಅಪರ್ಚರ್‌ನೊಂದಿಗೆ ಬರುತ್ತದೆ. ಅಲ್ಲದೆ ಇದು 1/2.55 ಗಾತ್ರದ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಕೊನೆಯದಾಗಿ ಇದರ 48MP ಟೆಲಿಫೋಟೋ EIS ಕ್ಯಾಮೆರಾ f/2.8 ಅಪರ್ಚರ್‌ನೊಂದಿಗೆ 1/1.31 ಗಾತ್ರದ ಇಮೇಜ್ ಸೆನ್ಸರ್ ಮತ್ತು 5X ಆಪ್ಟಿಕಲ್ ಜೂಮ್ ಮತ್ತು ಸೂಪರ್ ರೆಸ್ ಜೂಮ್ ಸುಮಾರು 30×12 ವರೆಗೆ ಹೊಂದಿದೆ. ಅಲ್ಲದೆ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 42MP ಕ್ಯಾಮೆರಾ Dual PD ಸೆಲ್ಫಿ ಕ್ಯಾಮೆರಾವನ್ನು f/2.2 ಅಪರ್ಚರ್‌ನೊಂದಿಗೆ ಬರುತ್ತದೆ. ವಿಶೇಷ ಅಂದ್ರೆ ಈ Google Pixel 9 Pro ಸ್ಮಾರ್ಟ್ಫೋನ್ 8K ವಿಡಿಯೋ ರೆಕಾರ್ಡಿಂಗ್ 30 FPS ಮತ್ತು 4K ವಿಡಿಯೋ ರೆಕಾರ್ಡಿಂಗ್ 24/30/60 FPS ವಿಧಾನದಲ್ಲಿ ಶೂಟ್ ಮಾಡಲು ಅನುಮತಿಸುತ್ತದೆ.

Google Pixel 9 Pro Hardware and Price Details

ಈ ಸ್ಮಾರ್ಟ್ಫೋನ್ ಪ್ರಸ್ತುತ ಕೇವಲ ಒಂದೇ ಒಂದು 16GB RAM ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದ್ದು ಗೂಗಲ್ ತನ್ನದೆಯಾದ Google Tensor G4 Titan M2 ಸೆಕ್ಯೂರಿಟಿ ಪ್ರೊಸೆಸರ್ನೊಂದಿಗೆ ಬರುತ್ತದೆ. ಅಲ್ಲದೆ ನಿಮ್ಮ ಡೇಟಾ ಮತ್ತು ಸ್ಮಾರ್ಟ್ಫೋನ್ ಪ್ರೊಟೆಕ್ಟ್ ಮಾಡಲು Anti-malware ಮತ್ತು anti-phishing protection ಜೊತೆಗೆ Spam protection in Messages ಫೀಚರ್ಗಳನ್ನು ಸ್ಮಾರ್ಟ್ಫೋನ್ ಹೊಂದಿದೆ. ಈ ರೂಪಾಂತರವನ್ನು ಕಂಪನಿ ಸುಮಾರು 94,999 ರೂಗಳಿಗೆ ಬಿಡುಗಡೆಗೊಳಿಸಿದೆ.

Google Pixel 9 Pro launched in India now top 5 features before buy
Google Pixel 9 Pro launched in India now top 5 features before buy

Also Read: ಭಾರತದಲ್ಲಿ Pixel Buds Pro 2 ಮತ್ತು Pixel Watch 3 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Google Pixel 9 Pro battery and Sensor Details

ಕೊನೆಯದಾಗಿ ಈ ಸ್ಮಾರ್ಟ್ಫೋನ್ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ Google Pixel 9 Pro ಸ್ಮಾರ್ಟ್ಫೋನ್ 4700mAh ಬ್ಯಾಟರಿಯೊಂದಿಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು Qi ಚಾರ್ಜರ್‌ಗಳ ಮೂಲಕ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಅಲ್ಲದೆ ಈ ಫೋನ್ ಆನ್‌ಬೋರ್ಡ್ ಸೆನ್ಸರ್ ಬಗ್ಗೆ ಮಾತನಾಡುವುದಾದರೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್ ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸೆನ್ಸರ್ ಒಳಗೊಂಡಿವೆ. ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ Wi-Fi 6, ಬ್ಲೂಟೂತ್ 5.3, NFC, Google Cast, GPS, ಡ್ಯುಯಲ್ ಬ್ಯಾಂಡ್ GNSS, BeiDou, GLONASS, Galileo, QZSS, NavIC ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo