Google Pixel 6A vs Nothing Phone 1: ಫೋನ್ಗಳ ಟಾಪ್ 5 ಫೀಚರ್ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

Google Pixel 6A vs Nothing Phone 1: ಫೋನ್ಗಳ ಟಾಪ್ 5 ಫೀಚರ್ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!
HIGHLIGHTS

Google Pixel 6A ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ.

ಒನ್ ಪ್ಲಸ್ ಮೊಬೈಲ್ ಕಂಪೆನಿಯ ಸಹ ಮಾಲೀಕರಾಗಿದ್ದ ಕಾರ್ಲ್ ಪೀ Nothing Phone 1 ಅನ್ನು ಪರಿಚಯಿಸಿದವರು.

ಈ Google Pixel 6A vs Nothing Phone 1 ಎರಡು ಫೋನ್ ಗಳ ಫೀಚರ್ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

Google Pixel 6A vs Nothing Phone 1: ಸ್ಮಾರ್ಟ್ಫೋನ್ ವಲಯದಲ್ಲಿ ಗೂಗಲ್ ,ಮತ್ತು ನಥಿಂಗ್ ಬ್ರಾಂಡ್ಗಳು ಭಾರೀ ಕುತೂಹಲಕ್ಕೆ ಕಾರಣವಾದ ಸ್ಮಾರ್ಟ್ಫೋನ್ಗಳಾಗಿವೆ. ಸರ್ಚ್ ಇಂಜಿನ್ ದೈತ್ಯ ಗೂಗಲ್‌ ಸಂಸ್ಥೆಯು ಬಿಡುಗಡೆ ಮಾಡಿರುವ Google Pixel 6A ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಹಿಂದೆ ಕಂಪನಿಯ ಹೆಸರಿನಿಂದಲೆ ಗಮನ ಸೆಳೆದಿದ್ದ ನಥಿಂಗ್ ಇದೇ ಮೊದಲ ಬಾರಿಗೆ ಫೋನ್ ಒಂದನ್ನು ಪರಿಚಯಿಸಿದೆ. ವಿಶೇಷ ಎಂದರೆ ಈ ಹಿಂದೆ ಒನ್ ಪ್ಲಸ್ ಮೊಬೈಲ್ ಕಂಪನಿಯ ಸಹ ಮಾಲೀಕರಾಗಿದ್ದ ಕಾರ್ಲ್ ಪೀ ತಮ್ಮದೇ ಆದ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಈ ಎರಡೂ ಸ್ಮಾರ್ಟ್ಫೋನ್ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್ಗಳನ್ನು ಒಳಗೊಂಡಿವೆ. ಇಂದು ನಾವು ಇವುಗಳನ್ನು ಹೋಲಿಸುತ್ತಿದ್ದೇವೆ.

Google Pixel 6A vs Nothing Phone 1 ಡಿಸ್ಪ್ಲೇ

Google Pixel 6A ಸ್ಮಾರ್ಟ್ಫೋನ್ 6.1 ಇಂಚಿನ ಫುಲ್ HD+ OLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಇದು 429  PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ 3 ಅನ್ನು ಒಳಗೊಂಡಿದೆ. Nothing Phone 1 6.55 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 2400×1080 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಈ ಫೋನ್ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಜೊತೆಗೆ HDR10+ ಬೆಂಬಲಿಸುತ್ತದೆ. ಅಲ್ಲದೆ ಇದು 402 PPI ಡೆನ್ಸಿಟಿ ಅನ್ನು ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ 5 ಅನ್ನು ಒಳಗೊಂಡಿದೆ.

Google Pixel 6A vs Nothing Phone 1 ಕ್ಯಾಮೆರಾ

Google Pixel 6A ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12.2MP ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 12MP ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. Nothing Phone 1 ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ನ ಹಿಂದಿನ ಪ್ಯಾನಲ್ 50MP Sony IMX 766 ಸೆನ್ಸರ್ ಅನ್ನು ಹೊಂದಿದ್ದು ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಹೋಲ್-ಪಂಚ್ ಡಿಸ್ಪ್ಲೇ ಒಳಗೆ 16MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.

Google Pixel 6A vs Nothing Phone 1 ಪ್ರೊಸೆಸರ್

Google Pixel 6A ಆಕ್ಟಾ-ಕೋರ್ ಗೂಗಲ್ ಟೆನ್ಸರ್ ಪ್ರೊಸೆಸರ್ ಮತ್ತು Titan M2 ಸೆಕ್ಯುರಿಟಿ ಕೊಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಈ ಫೋನ್ ಒಳಗೊಂಡಿದೆ. Nothing Phone 1 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G+ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 8GB ಹಾಗೂ 12GB ವರೆಗೆ LPDDR5 RAM ಅನ್ನು ಈ ಫೋನ್ ಒಳಗೊಂಡಿದೆ.

Google Pixel 6A vs Nothing Phone 1 ಬ್ಯಾಟರಿ

Google Pixel 6A ಸ್ಮಾರ್ಟ್ಫೋನ್ 4,410mAh ಬ್ಯಾಟರಿಯನ್ನು ಹೊಂದಿದೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಸೇರಿವೆ. Nothing Phone 1 4,500mAh ಸಾಮರ್ಥ್ಯದ ದೀರ್ಘ ಬಾಳಿಕೆ ಬ್ಯಾಟರಿ ನೀಡಲಾಗಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ V5.2, NFC, GPS, GLONASS, ಗೆಲಿಲಿಯೋ ಮತ್ತು USB ಟೈಪ್-C ಪೋರ್ಟ್ ಸೇರಿವೆ.

Google Pixel 6A vs Nothing Phone 1 ಬೆಲೆ

Google Pixel 6A ಸ್ಮಾರ್ಟ್ಫೋನ್ ಚಾಕ್, ಚಾರ್ಕೋಲ್ ಮತ್ತು ಸೇಜ್ ಕಲರ್ಗಳ ಆಯ್ಕೆಯಲ್ಲಿ ರೂ 30,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. ಇದರ ಕ್ರಮವಾಗಿ Nothing Phone 1 ಸ್ಮಾರ್ಟ್ಫೋನ್ ಬ್ಲಾಕ್ ಮತ್ತು ವೈಟ್  ಕಲರ್ಗಳ ಆಯ್ಕೆಯಲ್ಲಿ ರೂ 29,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo