Google Pixel Fold: ಜನಪ್ರಿಯ ಬ್ರಾಂಡ್ ಗೂಗಲ್ ಈಗ ತನ್ನ ಮುಂಬರಲಿರುವ ಹೊಸ ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದೆ. ಅಂದ್ರೆ ದಿನಗಳ ವದಂತಿಗಳು ಮತ್ತು ಊಹಾಪೋಹಗಳ ನಂತರ ಅದು ಅಂತಿಮವಾಗಿ ಗೂಗಲ್ ತನ್ನ ಪಿಕ್ಸೆಲ್ ಫೋಲ್ಡ್ ಫೋನ್ ಅನ್ನು ಅಧಿಕೃತವಾಗಿ ಘೋಷಿಸಿದೆ. ಮತ್ತು ಮೇ 10 ರಂದು ಮುಂಬರುವ Google I/O 2023 ಈವೆಂಟ್‌ನಲ್ಲಿ ಇದನ್ನು ಅನಾವರಣಗೊಳಿಸಲಾಗುವುದು. ಆದರೆ ಈ ಇಂಟರ್ನೆಟ್ ಸರ್ಚ್ ಇಂಜಿನ್ ಬ್ರಾಂಡ್ ಗೂಗಲ್ ತನ್ನ ಫೋಲ್ಡ್ ಫೋನ್ ಕುರಿತು ಸದ್ಯಕ್ಕೆ ಯಾವುದೇ ಫೀಚರ್ ವಿವರಗಳನ್ನು ಬಹಿರಂಗಪಡಿಸದಿದ್ದರೂ ಅದು ಚಿಕ್ಕ ಟೀಸರ್ ಅನ್ನು ಹಂಚಿಕೊಂಡಿದೆ.
ಇದರ ಸಣ್ಣ ಟೀಸರ್ ವೀಡಿಯೊದಲ್ಲಿ ಫುಲ್ ಸೈಜ್ ಡಿಸ್ಪ್ಲೇಯನ್ನು ನೋಡಬಹುದು. ಅದು Samsung ಮತ್ತು Oppo ನಿಂದ ಇತರ ಮಡಿಸಬಹುದಾದ ಫೋನ್ಗಳಂತೆ ತೆರೆಯುತ್ತದೆ. ಕುತೂಹಲಕಾರಿಯಾಗಿ ಹಿಂಭಾಗದ ಪ್ಯಾನೆಲ್‌ನಲ್ಲಿರುವ ಕ್ಯಾಮೆರಾ ದ್ವೀಪವು ಇತರ ಪಿಕ್ಸೆಲ್ ಫೋಲ್ಡ್ ಫೋನ್ ಒಳಗೆ ಗುರುತಿಸಲ್ಪಟ್ಟಿರುವಂತೆ ಹೋಲಿಕೆಯನ್ನು ಹೊಂದಿದೆ. ಕೇವಲ ಇದು ಹಳೆಯ ಕ್ಯಾಮೆರಾ ಮಾಡ್ಯೂಲ್‌ಗಳಷ್ಟು ಚಾಚಿಕೊಂಡಿರುವುದಿಲ್ಲ.
https://twitter.com/madebygoogle/status/1654170933417086978?ref_src=twsrc%5Etfw
ಈಗಾಗಲೇ ಈ ಹಿಂದೆ ಈವರೆಗಿನ ವರದಿಗಳನ್ನು ನೋಡುವುದಾದರೆ ಗೂಗಲ್ ಪಿಕ್ಸೆಲ್ ಫೋಲ್ಡ್ 5.8 ಇಂಚಿನ ಡಿಸ್ಪ್ಲೇ ಹೊಂದಿದ್ದು ಇದನ್ನು ತೆರೆದಾಗ ಅದು 7.6 ಇಂಚಿನ ಟ್ಯಾಬ್ಲೆಟ್‌ಗೆ ಹೊರಕ್ಕೆ ಮಡಚಿಕೊಳ್ಳುತ್ತದೆ. ಈ ಫೋನ್ Google Tensor G2 ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ ಎಂದು ಊಹಿಸಲಾಗಿದೆ. ಫೋಲ್ಡ್ಎಬಲ್ ಫೋನ್‌ನಲ್ಲಿ ಫೋಲ್ಡ್ ಫೋನ್ ಅತ್ಯಂತ ಬಾಳಿಕೆ ಬರುವ ಹಿಂಜ್ ಅನ್ನು ಹೊಂದಿರುತ್ತದೆ ಎಂದು ಕೆಲವು ವರದಿಗಳು ಹೇಳಿವೆ. ಬಾಕಿ ನೀವು ಸಹ ಸದ್ಯಕ್ಕೆ ಬಿಡುಗಡೆಯಾಗಿರುವ ಟೀಸರ್ ವೀಡಿಯೊದಲ್ಲಿ ನೋಡಬಹುದು.
ಕೊನೆಯದಾಗಿ ಈ ಸ್ಮಾರ್ಟ್ಫೋನ್ ವೇರಿಯಂಟ್ ಮತ್ತು ಇದರ ಬೆಲೆಯೊಂದಿಗೆ ಲಭ್ಯತೆಯನ್ನು ನೋಡುವುದಾದರೆ ಸದ್ಯಕ್ಕೆ ಇದರ ಬೆಲೆ ಸುಮಾರು $ 1,700 (ಸುಮಾರು ರೂ 1,38,845) ಎಂದು ವದಂತಿಗಳಿವೆ. ವಿನ್ಯಾಸಕ್ಕೆ ಬಂದಾಗ ಪಿಕ್ಸೆಲ್ ಫೋಲ್ಡ್ ಫೋಲ್ಡ್ ಫೋನ್ಗಳ ಪಿಕ್ಸೆಲ್ ಸಾಲಿನಂತೆಯೇ ದಾರಿಯನ್ನು ಇದು ಸಹ ಅನುಸರಿಸುತ್ತದೆ. ಇಲ್ಲಿಯವರೆಗೆ ಯಾವುದೇ ಆಂತರಿಕ ಕ್ಯಾಮರಾದ ಬಗ್ಗೆ ಯಾವುದೇ ಮಾತುಗಳಿಲ್ಲ ಇದರರ್ಥ Google ಕ್ಯಾಮರಾವನ್ನು ಬಿಟ್ಟುಬಿಡಬಹುದು ಅಥವಾ ಅಂಡರ್-ಡಿಸ್ಪ್ಲೇ ಕ್ಯಾಮರಾವನ್ನು ಪರಿಚಯಿಸಬಹುದು. ಇದರ ಮತ್ತಷ್ಟು ವಿಶೇಷತೆಗಳಿಗಾಗಲಿ ಡಿಜಿಟ್ ಕನ್ನಡವನ್ನು ಫಾಲೋ ಮಾಡುತ್ತಿರಿ.