Xiaomi Mi CC9 ಸ್ಮಾರ್ಟ್ಫೋನಿನ ಮೊದಲ ಅಧಿಕೃತವಾದ ಲುಕ್ ಸೋರಿಕೆಯಾಗಿದೆ

Updated on 26-Jun-2019
HIGHLIGHTS

ಚೀನಿ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ Xiaomi ಬರುವ ಜುಲೈ 2 ರಂದು  Mi CC ಸರಣಿಯಡಿ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಕಳೆದ ವಾರ ಪ್ರಕಟಿಸಿದೆ. ಇದರ ಬಿಡುಗಡೆಗು ಮುಂಧಿತವಾಗಿಯೇ Xiaomi ಪ್ರಾಡಕ್ಟ್ ವ್ಯವಸ್ಥಾಪಕರಾದ ಲಾವೊ ವೀ ಅವರು Xiaomi Mi CC9 ಸ್ಮಾರ್ಟ್ಫೋನಿನ ಹಿಂಭಾಗದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊದಲ್ಲಿ ಪೋಸ್ಟ್ ಮಾಡಲಾಗಿದೆ. ಮೊದಲು ಸದ್ಯಕ್ಕೆ Mi CC9 ಚೀನಾದಲ್ಲಿ ಅಧಿಕೃತವಾಗಲಿದೆ. ಅಲ್ಲಿ ಬಿಡುಗಡೆಯಾದ ನಂತರ ಅಥವಾ ಅದರೊಂದಿಗೆ ಈ ಸ್ಮಾರ್ಟ್‌ಫೋನ್ ಯಾವುದೇ ಸಮಯದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡಬವುದು. ಆದರೆ ಸದ್ಯಕ್ಕೆ ಇದರ ಯಾವುದೇ ಮಾಹಿತಿಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಈ ಚಿತ್ರದಲ್ಲಿ ಸ್ಮಾರ್ಟ್ಫೋನ್ ಬಿಳಿ ಹೊಳೆಯುವ ಬಣ್ಣದಲ್ಲಿ ಗೋಚರಿಸುತ್ತದೆ. ಮತ್ತು ಹಿಂಭಾಗದ ಪ್ಯಾನಲಲ್ಲಿ ವಿನ್ಯಾಸವನ್ನು ತೋರಿಸುತ್ತದೆ. ಸಂಪೂರ್ಣ ಹಿಂಭಾಗದ ಪ್ಯಾನಲನ್ನು ಚಿತ್ರ ಖಚಿತಪಡಿಸುತ್ತದೆ. Mi CC9 ಸ್ಮಾರ್ಟ್ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ನೊಂದಿಗೆ ಲಂಬ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಇದರ ಕ್ಯಾಮೆರಾವನ್ನು LED ಫ್ಲ್ಯಾಷ್ನೊಂದಿಗೆ ಜೋಡಿಯಾಗಿದೆ. ಇದರ ಕುತೂಹಲಕಾರಿಯಾಗಿ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸೆನ್ಸರ್ ಗೋಚರಿಸುವುದಿಲ್ಲ. Mi CC9 ಫೋನ್‌ನ ಸ್ಕ್ರೀನ್ ಕೆಳಗೆ ಫಿಂಗರ್‌ಪ್ರಿಂಟ್ ಸೆನ್ಸರ್  ಒಳಗೊಂಡಿರುವುದನ್ನು ನಿರೀಕ್ಷಿಸಬವುದು. Mi CC9 ಎಡ ಮೂಲೆಯಲ್ಲಿ "Xiaomi" ಬ್ರಾಂಡ್ ಲೋಗೊವನ್ನು ಒಳಗೊಂಡಿರುವುದು ಚಿತ್ರದಲ್ಲಿ ನೋಡಬವುದು.

ಕೆಲ ಚೀನಾದ ವದಂತಿ ಮತ್ತು ಸೋರಿಕೆಗಳಂತೆ ಈಗಾಗಲೇ ಸಂಪೂರ್ಣ Mi CC9 ಮತ್ತು ಬೆಲೆ ಸೇರಿದಂತೆ ಎಲ್ಲವನ್ನೂ ಬಹಿರಂಗಪಡಿಸಿದೆ. ಸೋರಿಕೆಗಳ ಪ್ರಕಾರ ಈ ಸ್ಮಾರ್ಟ್ಫೋನ್ 6.39 ಇಂಚಿನ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರಲಿದೆ. ಇದರ ಮುಂಭಾಗ ಮತ್ತು ಮೇಲ್ಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. Mi CC9 ಅತ್ಯಂತ ಕಡಿಮೆ ಬೆಜೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಹಾರ್ಡ್‌ವೇರ್ ಮುಂಭಾಗದಲ್ಲಿ ಮಿ ಸಿಸಿ 9 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ.  ಮತ್ತು ಇದು ರೆಡ್‌ಮಿ ಕೆ 20 ಗೆ ಶಕ್ತಿ ನೀಡುತ್ತದೆ. 

Mi CC9 ಎರಡು RAM ರೂಪಾಂತರಗಳೊಂದಿಗೆ ಬರಲಿದೆ ಎಂದು ವದಂತಿಗಳು ಸೂಚಿಸುತ್ತವೆ. ಅವೆಂದರೆ 6GB ಮತ್ತು 8GB ಅದೇ ರೀತಿಯಲ್ಲಿ ಈ ಫೋನ್ ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಬರಲಿದೆ ಎಂದು ವದಂತಿಗಳು ಸೂಚಿಸುತ್ತವೆ. ಅವೆಂದರೆ 128GB ಮತ್ತು 256GB ಸ್ಟೋರೇಜ್. Redmi Note 7 ಸರಣಿಯ ಫೋನ್‌ಗಳಂತೆಯೇ Mi CC9 ಸಹ 4000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇದರ  ಸಾಫ್ಟ್‌ವೇರ್ ಮುಂಭಾಗದಲ್ಲಿ ಆಂಡ್ರಾಯ್ಡ್ 9 ಪೈ ಮೇಲೆ ಫೋನ್ MIUI 10 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇವೇಲ್ಲ ಫೀಚರ್ಗಳು ಮೇಲೆ ಹೇಳಿರುವಂತೆ ವದಂತಿ ಮತ್ತು ಸೋರಿಕೆಯ ಮಾಹಿತಿಯಾಗಿವೆ.ಈ ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಯಾದ ನಂತರವಷ್ಟೇ ಇದರ ಎಲ್ಲ ಮಾಹಿತಿಗಳನ್ನು ಖಚಿತವಾಗಿ ಪಡೆಯಬವುದು.  
 
ಇಮೇಜ್ ಸೋರ್ಸ್

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :