ಹೊಸ Realme GT 7 Pro ಸ್ಮಾರ್ಟ್‌ಫೋನ್ ಕೊನೆಗೂ ತನ್ನ ತಾಯ್ನಾಡು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ ಇದೇ 26ನೇ ನವೆಂಬರ್ 2024 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಲೇಟೆಸ್ಟ್ Qualcomm Snapdragon 8 Elite ಚಿಪ್ ಮತ್ತು ಬರೋಬ್ಬರಿ 16GB RAM ಮತ್ತು ಅತಿದೊಡ್ಡ 6500mAh ಬ್ಯಾಟರಿಯೊಂದಿಗೆ 120W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವುದು ವಿಶೇಷವಾಗಿದೆ. ಚೀನಾದ ಈ ಜನಪ್ರಿಯ ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಪ್ರಸ್ತುತ ಸಿಕ್ಕಾಪಟ್ಟೆ ಆಕರ್ಷಕವಾಗಿದ್ದು ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಈ Realme GT 7 Pro ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲು ನಿರೀಕ್ಷಿಸಬಹುದು.
Realme GT 7 Pro ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಮಾತನಾಡುವುದಾದರೆ ಈ ಫೋನ್ ಚೀನಾದಲ್ಲಿ ಒಟ್ಟು 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ. ಪ್ರಸ್ತುತ Realme GT 7 Pro ಸ್ಮಾರ್ಟ್‌ಫೋನ್ ಚೀನಾದ realme china e-store ಮೂಲಕ ಖರೀದಿಗೆ ಲಭ್ಯವಿದೆ. ಆಸಕ್ತರು ಇದನ್ನು Mars Exploration Edition, Star Trail Titanium ಮತ್ತು Light Domain White ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
Also Read: ಕೋಟ್ಯಾಂತರ SBI Bank ಬಳಕೆದಾರರಿಗೆ ಸರ್ಕಾರದಿಂದ ಖಡಕ್ ವಾರ್ನಿಂಗ್! ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬೇಡಿ!
12GB RAM ಮತ್ತು 256GB ಸ್ಟೋರೇಜ್ CNY 3,699 (ಭಾರತದಲ್ಲಿ 43,800 ರೂಗಳು)
12GB RAM ಮತ್ತು 512GB ಸ್ಟೋರೇಜ್ CNY 3,899 (ಭಾರತದಲ್ಲಿ 46,200 ರೂಗಳು)
16GB RAM ಮತ್ತು 256GB ಸ್ಟೋರೇಜ್ CNY 3,999 (ಭಾರತದಲ್ಲಿ 47,400 ರೂಗಳು)
16GB RAM ಮತ್ತು 512GB ಸ್ಟೋರೇಜ್ CNY 4,299 (ಭಾರತದಲ್ಲಿ 50,900 ರೂಗಳು)
16GB RAM ಮತ್ತು 1024GB ಸ್ಟೋರೇಜ್ CNY 4,799 (ಭಾರತದಲ್ಲಿ 56,900 ರೂಗಳು)
ಚೀನಾದಲ್ಲಿ ಬಿಡುಗಡೆಯಾದ ಈ ಲೇಟೆಸ್ಟ್ Realme GT 7 Pro ಸ್ಮಾರ್ಟ್ಫೋನ್ 6.78 ಇಂಚಿನ 2K Eco2 ಸ್ಕೈ ಸ್ಕ್ರೀನ್ ಅನ್ನು 120Hz ರಿಫ್ರೆಶ್ ದರ, 2,600Hz ತ್ವರಿತ ಸ್ಪರ್ಶ ಮಾದರಿ ದರ ಮತ್ತು 6,000nits ಗರಿಷ್ಠ ಪ್ರಕಾಶಮಾನ ಮಟ್ಟವನ್ನು ಹೊಂದಿದೆ. ಫೋನ್ ಕ್ವಾಲೇಟೆಸ್ಟ್ Qualcomm Snapdragon 8 Elite ಚಿಪ್ ಮತ್ತು ಬರೋಬ್ಬರಿ 16GB RAM ಮತ್ತು ಅತಿದೊಡ್ಡ 6500mAh ಬ್ಯಾಟರಿಯೊಂದಿಗೆ 120W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವುದು ವಿಶೇಷವಾಗಿದೆ. ಇದು Android 15-ಆಧಾರಿತ Realme UI 6.0 ನೊಂದಿಗೆ ರವಾನಿಸುತ್ತದೆ.
Realme GT 7 Pro ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಬರೋಬ್ಬರಿ 1.56 ಇಂಚಿನ 50MP ಮೆಗಾಪಿಕ್ಸೆಲ್ ಸೋನಿ IMX906 ಪ್ರೈಮರೀ ಸೆನ್ಸರ್ ಜೊತೆಗೆ 8MP -ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ ಮತ್ತು 1/1.95 ಇಂಚಿನ 50MP ಮೆಗಾಪಿಕ್ಸೆಲ್ ಸೋನಿ ಸೇರಿದಂತೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. 3x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಬೆಂಬಲದೊಂದಿಗೆ IMX882 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ. ಮುಂಭಾಗದ ಕ್ಯಾಮೆರಾ 16MP ಮೆಗಾಪಿಕ್ಸೆಲ್ ಸಂವೇದಕದೊಂದಿಗೆ ಬರುತ್ತದೆ. ಫೋನ್ ನೀರೊಳಗೆ ಫೋಟೋಗ್ರಾಫಿ, ಲೈವ್ ಫೋಟೋಗಳು ಮತ್ತು AI ಬೆಂಬಲಿತ ಎಡಿಟ್ ಮಾಡುವ ಫೀಚರ್ಗಳನ್ನು ಬೆಂಬಲಿಸುತ್ತದೆ.