108MP ಕ್ಯಾಮೆರಾವುಳ್ಳ POCO M6 Plus 5G ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್‌ಗಳನ್ನು ತಿಳಿಯಿರಿ!

Updated on 01-Aug-2024
HIGHLIGHTS

POCO M6 Plus 5G ಬಜೆಟ್ ಸ್ನೇಹಿಯಾಗಿ ಲೇಟೆಸ್ಟ್ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

POCO M6 Plus 5G ಸ್ಮಾರ್ಟ್ಫೋನ್ 108MP ಪ್ರೈಮರಿ ಕ್ಯಾಮೆರಾ ಮತ್ತು 5300mAh ಬ್ಯಾಟರಿಯನ್ನು ಹೊಂದಿದೆ.

POCO M6 Plus 5G ಸ್ಮಾರ್ಟ್ಫೋನ್ Qualcomm Snapdragon 4 Gen 2 AE ಚಿಪ್‌ಸೆಟ್‌ನಿಂದ 4nm ಟೆಕ್ನಾಲಜಿಯೊಂದಿಗೆ ಚಾಲಿತವಾಗಿದೆ.

ಭಾರತದಲ್ಲಿ ಪೊಕೋ ಕಂಪನಿ ತನ್ನ ಹೊಸ 5G ಸ್ಮಾರ್ಟ್ಫೋನ್ ಅನ್ನು ಬಜೆಟ್ ಸ್ನೇಹಿಯಾಗಿ ಲೇಟೆಸ್ಟ್ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಇದರ ಬಗ್ಗೆ ಬಿಡುಗಡೆಗೂ ಮುಂಚೆಯೇ Times Network ಮತ್ತು Digit ಜೊತೆಗೆ ಮಾತನಾಡಿದ POCO ಕಂಪನಿಯ ಕಂಟ್ರಿ ಹೆಡ್ ಹಿಮಾಂಶು ಟಂಡನ್ (Himanshu Tandon – POCO India) ಇದು ಬರೋಬ್ಬರಿ 108MP ಪ್ರೈಮರಿ ಕ್ಯಾಮೆರಾ ಮತ್ತು 5300mAh ಬ್ಯಾಟರಿಯೊಂದಿಗೆ ಬರುವುದಾಗಿ ತಿಳಿಸಿದ್ದಾರೆ. POCO M6 Plus 5G ಸ್ಮಾರ್ಟ್ಫೋನ್ ಯೋಗ್ಯವಾದ ಡಿಸ್ಪ್ಲೇ, ಡಿಸೆಂಟ್ ಕ್ಯಾಮರಾ ಮತ್ತು ದೊಡ್ಡ ಬ್ಯಾಟರಿಯಿಂದ ಬೆಂಬಲಿತವಾದ ಫಾಸ್ಟ್ ಕಾರ್ಯಕ್ಷಮತೆಯನ್ನು ಹೊಂದಿದೆ.

POCO M6 Plus 5G ಡಿಸ್ಪ್ಲೇಯ ಮಾಹಿತಿ

ಈ POCO M6 Plus 5G ಸ್ಮಾರ್ಟ್ಫೋನ್ ವಿಶಾಲವಾದ 6.79 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು ನಯವಾದ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗಾಗಿ 120Hz ಹೆಚ್ಚಿನ ರಿಫ್ರೆಶ್ ದರವನ್ನು ಹೊಂದಿದೆ. POCO M6 Plus 5G ಡಿಸ್ಪ್ಲೇ 1080 x 2460 ಪಿಕ್ಸೆಲ್ಗಳ ರೆಸಲ್ಯೂಶನ್ ನೀಡುತ್ತದೆ. ಯೋಗ್ಯವಾದ ಸ್ಪಷ್ಟತೆ ಮತ್ತು ಬಣ್ಣ ಪುನರುತ್ಪಾದನೆಯನ್ನು ಖಚಿತಪಡಿಸುತ್ತದೆ. POCO M6 Plus 5G ಸ್ಮಾರ್ಟ್ಫೋನ್ ಅನ್ನು ಆಸಕ್ತರು Misty Lavender, Ice Silver ಮತ್ತು Graphite Black ಬಣ್ಣಗಳಲ್ಲಿ ಬಿಡುಗಡೆಗೊಳಿಸಲಿದ್ದಾರೆ.

Exclusive: POCO M6 Plus 5G smartphone in India, specs and price revealed before launch

POCO M6 Plus 5G ಕ್ಯಾಮೆರಾದ ವಿವರಗಳು

ಈ POCO M6 Plus 5G ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತಂದುವುದಾದರೆ ಇದರ ಪ್ರೈಮರಿ 108MP ಕ್ಯಾಮೆರಾ AI ಡುಯಲ್ ಲೆನ್ಸ್ f/1.75 ಅಪರ್ಚರ್ನೊಂದಿಗೆ ಇದು 3x Sensor Zoom ಅನ್ನು ಸಪೋರ್ಟ್ ಮಾಡುತ್ತದೆ. ಇದು ವಿವರವಾದ ಚಿತ್ರಗಳನ್ನು ಸೆರೆಹಿಡಿಯಲು ಇದರಲ್ಲಿ ಕಂಪನಿ Samsung ISOCELL HM6 Large Sensor ಸಾಮರ್ಥ್ಯದೊಂದಿಗೆ ವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವಾಗಿ 2MP ಸೆನ್ಸರ್ ಅನ್ನು ಮ್ಯಾಕ್ರೋ ಲೆನ್ಸ್ ಆಗಿ ಅಳವಡಿಸಲಾಗಿದೆ. ಕೊನೆಯದಾಗಿ POCO M6 Plus 5G ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ 13MP ಲೆನ್ಸ್ f/2.45 ಅಪರ್ಚರ್ನೊಂದಿಗೆ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Also Read: ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ ಮತ್ತು ಕರೆ ನೀಡುವ ಈ BSNL ಪ್ಲಾನ್ ಬೆಲೆ ಎಷ್ಟು?

POCO M6 Plus 5G ಹಾರ್ಡ್ವೇರ್

ಇದರ ಹುಡ್ ಅಡಿಯಲ್ಲಿ POCO M6 Plus 5G ಸ್ಮಾರ್ಟ್ಫೋನ್ Qualcomm Snapdragon 4 Gen 2 AE ಚಿಪ್‌ಸೆಟ್‌ನಿಂದ 4nm ಟೆಕ್ನಾಲಜಿಯೊಂದಿಗೆ GPU A613 ಚಾಲಿತವಾಗಿದೆ. ಇದು ದೈನಂದಿನ ಕಾರ್ಯಗಳು ಮತ್ತು ಗೇಮಿಂಗ್‌ಗೆ ಸುಗಮ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. ಇದು 6GB ಮತ್ತು 8GB RAM ಆಯ್ಕೆಗಳೊಂದಿಗೆ 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ POCO M6 Plus 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ.

Exclusive: POCO M6 Plus 5G smartphone in India, specs and price revealed before launch

POCO M6 Plus 5G ಬ್ಯಾಟರಿ ಮತ್ತು ಸೆನ್ಸರ್

ಈ ಸ್ಮಾರ್ಟ್ಫೋನ್ ಚಾಲಿತವಾಗಿರಿಸುವುದು ಗಣನೀಯ 5030mAh ಬ್ಯಾಟರಿಯಾಗಿದ್ದು ಸಂಪೂರ್ಣ ದಿನದ ಬಳಕೆಗಾಗಿ ಸಾಕಷ್ಟು ರಸವನ್ನು ನೀಡುತ್ತದೆ. ಇದಲ್ಲದೆ ಇದು ತ್ವರಿತ ಟಾಪ್-ಅಪ್‌ಗಳಿಗಾಗಿ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮಗೆ Accelerometer, Proximity sensor ಮತ್ತು Ambient light sensor ಒಳಗೊಂಡಿದೆ. ಭದ್ರತೆಗಾಗಿ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. POCO M6 Plus 5G ಹೆಚ್ಚುವರಿ ವೈಶಿಷ್ಟ್ಯಗಳು 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಅನ್ನು ಒಳಗೊಂಡಿವೆ. POCO M6 Plus 5G ಬಜೆಟ್ ಆಧಾರಿತ ಖರೀದಿದಾರರಿಗೆ ಹೆಚ್ಚು ಯೋಚಿಸದೆ ಆಯ್ಕೆ ಮಾಡಿಕೊಳ್ಳಲು ಪವರ್ಫುಲ್ ಪ್ಯಾಕೇಜ್ ಅನ್ನು ಪ್ರಸ್ತುತಪಡಿಸುತ್ತಿದೆ.

Exclusive: POCO M6 Plus 5G smartphone in India, specs and price revealed before launch

POCO M6 Plus 5G ಬೆಲೆ ಮತ್ತು ಲಭ್ಯತೆ ಮಾಹಿತಿ

POCO M6 Plus 5G ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು ಪ್ರಸ್ತುತ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದ್ದು ಮೊದಲನೆಯದು 6GB RAM ಮತ್ತು 128GB ಸ್ಟೋರೇಜ್ ಅನ್ನು ಕೇವಲ 11,999 ರೂಗಳಿಗೆ ಬಿಡುಗಡೆಗೊಳಿಸಿದರೆ ಇದರ 8GB RAM ಮತ್ತು 128GB ಸ್ಟೋರೇಜ್ ಅನ್ನು ಕೇವಲ 13,999 ರೂಗಳಿಗೆ ಬಿಡುಗಡೆಗೊಳಿಸುವುದಾಗಿ POCO ಕಂಪನಿಯ ಕಂಟ್ರಿ ಹೆಡ್ ಹಿಮಾಂಶು ಟಂಡನ್ (Himanshu Tandon – POCO India) ಹೇಳಿದ್ದಾರೆ. ಸ್ಮಾರ್ಟ್ಫೋನ್ ಮಾರಾಟದ ಬಗ್ಗೆ ಇನ್ನು ಯಾವುದೇ ಮಾಹಿತಿ ನೀಡಿಲ್ಲವಾದರೂ ಫ್ಲಿಪ್ಕಾರ್ಟ್ ಮೂಲಕ ಖರೀದಿಸಲು ಲಭ್ಯವಾಗಲಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :