ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಬ್ಯಾಟರಿ ಹೊಂದಿರುವ ಹ್ಯಾಂಡ್ಸೆಟ್ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2019 ರಿಂದ ಆರಂಭಿಸಬಹುದು. ಎನರ್ಜೈಸರ್ ಎಂಬ ಮೊಬೈಲ್ ಕಂಪೆನಿ MWC 2019 ರಲ್ಲಿ 18000mAh ಬ್ಯಾಟರಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಅಂತಹ ಒಂದು ದೊಡ್ಡ ಬ್ಯಾಟರಿಯೊಂದಿಗೆ ಬರುವ ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿರುತ್ತದೆ.
ಇದರಲ್ಲಿ ದೊಡ್ಡದಾದ ಬ್ಯಾಟರಿಯ ಜೊತೆಗೆ ಫೋನ್ ಡ್ಯುಯಲ್ ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸುವ ನಿರೀಕ್ಷೆಯಿದೆ. ಇದಲ್ಲದೆ ಈ ಫೋನ್ ಅನ್ನು ಫೋಲ್ಡಬಲ್ ಡಿಸ್ಪ್ಲೇಯೊಂದಿಗೆ ನೀಡಬಹುದು. ಈ ಫೋನ್ನಲ್ಲಿ ಪ್ರಬಲ ಪ್ರೊಸೆಸರ್ ಮತ್ತು RAM ಅನ್ನು ಸಹ ನೀಡಬಹುದು. ಈ ಎನರ್ಜೈಸರ್ ಕಂಪನಿ ಗ್ಲೋಬಲಿ ಒಟ್ಟಾರೆಯಾಗಿ 26 ಹೊಸ ಸ್ಮಾರ್ಟ್ಫೋನ್ಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
ಎನರ್ಜೀಯರ್ ಕಂಪನಿ ಕಳೆದ ವರ್ಷ MWC 2018 ರಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿತು. ಈ ಫೋನ್ಗಳು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 18: 9 ಆಕಾರ ಅನುಪಾತಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ಈ ಮೂರು ಸ್ಮಾರ್ಟ್ಫೋನ್ಗಳು ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಹೊಂದಿದವು.
ಎನರ್ಜೀಯರ್ ಕಂಪನಿಯ Power Max P16K Pro ಆ ಮೂರು ಹ್ಯಾಂಡ್ಸೆಟ್ಗಳಿಂದ ಷೋವನ್ನು ಗೆದ್ದಿತು. ಏಕೆಂದರೆ 16000mAh ತೆಗೆಯಲಾಗದ ಬ್ಯಾಟರಿಗಳನ್ನು ಈ ಫೋನ್ನಲ್ಲಿ ನೀಡಲಾಗಿದೆ. ಅದರ ಇತರ ವಿಶೇಷತೆಗಳೆಂದರೆ ಇದು 5.99 ಇಂಚಿನ ಪೂರ್ಣ HD+ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ P25 ಆಗಿದೆ.