5G ಸ್ಮಾರ್ಟ್ಫೋನ್ ಖರೀದಿಸಲು ಮುಂದಾಗಬೇಡಿ ಇನ್ನು 5G ನೆಟ್ವರ್ಕ್ ಇಲ್ಲ

Updated on 27-Feb-2020
HIGHLIGHTS

ಭಾರತದ ಅಗ್ರ ಐದು ಸ್ಮಾರ್ಟ್‌ಫೋನ್ ಮಾರಾಟಗಾರರಲ್ಲಿ OPPO, Vivo ಮತ್ತು Realme ಕಂಪನಿಗಳು ಸಹ ಸ್ಥಾನ ಪಡೆದಿರುವುದಾಗಿ ಖಚಿತಪಡಿಸಿದೆ.

ವಿಶ್ವದಲ್ಲಿ ಈಗಾಗಲೇ 5G ಟೆಕ್ನಾಲಜಿ ಹಲವಾರು ದೇಶಗಳಲ್ಲಿ ಲಭ್ಯವಿದೆ. ಭಾರತದಲ್ಲಿ 2020 ರ ವತ್ತಿಗೆ 5G ಟೆಕ್ನಾಲಜಿ ತಲುಪುವ ಹೆಚ್ಚುಯನ್ನು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಇನ್ನು ಭಾರತದಲ್ಲಿ 5G ನೆಟ್ವರ್ಕ್ ಸಿದ್ಧವಾಗಿಲ್ಲವಾದರೂ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿ ಈಗಾಗಲೇ ಮೊದಲ ಎರಡು 5G ಫೋನ್‌ಗಳನ್ನು ಕಳೆದ ವಾರ ಬಿಡುಗಡೆ ಮಾಡಿದೆ. ಅಂದ್ರೆ ಈ 5G ಸ್ಮಾರ್ಟ್ಫೋನ್ ಖರೀದಿಸಿದರೆ ನಿಮಗೆ ನಿಜವಾಗಿಯೂ ಸಿಗೋದಾದರೂ ಏನು? ಇದರಿಂದ ನಿಮಗೆ ಆಗುವ ಲಾಭವಾದರೂ ಏನು? ಭಾರತದಲ್ಲಿ ಇನ್ನು 5G ನೆಟ್ವರ್ಕ್ ಇಲ್ಲವಾದರೂ ಸಹ 5G ಸ್ಮಾರ್ಟ್ಫೋನ್ಗಳನ್ನು ಖರೀದಿಸಬೇಕೇ ಬೇಡವೇ ಒಮ್ಮೆ ಸಂಪೂರ್ಣ ಮಾಹಿತಿ ನೋಡೋಣ.

ಭಾರತದಲ್ಲಿ ಕಳೆದ ವಾರ 5G ರೆಡಿ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆತನ್ನದಾಗಿಸಿಕೊಂಡಿದೆ . ಇದರ ಮೊದಲ ಕಂಪನಿ ಅಂದ್ರೆ ರಿಯಲ್ ಮೀ ಮತ್ತು ಐಕ್ಯೂ ಬ್ರ್ಯಾಂಡ್ಗಳು. ಈ ಕಂಪನಿಯ ಸ್ಮಾರ್ಟ್ಫೋನ್ಗಳನ್ನು ನೋಡುವುದಾದರೆ Realme X50 Pro 5G ಮತ್ತು iQOO 3 5G ಸ್ಮಾರ್ಟ್ಫೋನ್ಗಳು. ಇವು ಇದರ ಕ್ರಮವಾಗಿ ಇವುಗಳ ಬೆಲೆ ₹37,999 ರೂಗಳು ಮತ್ತು ₹36,999 ರೂಗಳಿಂದ ಪ್ರಾರಂಭವಾಗುತ್ತವೆ. ಅಲ್ಲದೆ ಸ್ಮಾರ್ಟ್ಫೋನ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ ಮುಂದೆ ಪ್ರಸ್ತುತ ಭಾರತದ ಅಗ್ರ ಐದು ಸ್ಮಾರ್ಟ್‌ಫೋನ್ ಮಾರಾಟಗಾರರಲ್ಲಿ OPPO, Vivo ಮತ್ತು Realme ಕಂಪನಿಗಳು ಸಹ ಸ್ಥಾನ ಪಡೆದಿರುವುದಾಗಿ ಖಚಿತಪಡಿಸಿದೆ.

ಭಾರತದಲ್ಲಿ 5G ನೆಟ್‌ವರ್ಕ್‌ಗಳನ್ನು ಹೊಂದಿಲ್ಲ ಮತ್ತು ಮುಂದಿನ ವರ್ಷದ ಮೊದಲು ಅವುಗಳನ್ನು ಹೊಂದಿಲ್ಲ. ಕೇಂದ್ರ ಟೆಲಿಕಾಂ ಸಚಿವರಾದ ರವಿಶಂಕರ್ ಪ್ರಸಾದ್ ಸೆಪ್ಟೆಂಬರ್‌ನಲ್ಲಿ 5G ಸ್ಪೆಕ್ಟ್ರಮ್ ಹರಾಜನ್ನು ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸಲು ಯೋಜಿಸಿದ್ದರು ಎಂದು ಹೇಳಿದ್ದರು. ಟೆಲಿಕಾಂ ಸೇವಾ ಪೂರೈಕೆದಾರರು ಸ್ಪೆಕ್ಟ್ರಮ್ ಖರೀದಿಸಲು ಸಿದ್ಧರಾಗಿದ್ದಾರೆಂದು ನಾವು ಭಾವಿಸಿದರೂ ಮತ್ತು ಅಂತಿಮ ಪರೀಕ್ಷೆಗಳಿಗೆ ಇನ್ನೂ ಕೆಲವು ತಿಂಗಳುಗಳನ್ನು ಕಳೆಯುತ್ತೇವೆ. 

ಈಗ ಗ್ರಾಹಕರ ಮೇಲೆ 5G ನೆಟ್‌ವರ್ಕ್‌ಗಳ ಪ್ರಯೋಜನಗಳು ಹೆಚ್ಚು ಪರೋಕ್ಷ ಪ್ರಯೋಜನಗಳಲ್ಲ. 5G ನೆಟ್‌ವರ್ಕ್ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಂಪರ್ಕಿತ ಕಾರುಗಳಂತಹ ಇಂಟರ್ನೆಟ್ ಆಫ್ ಥಿಂಗ್ಸ್ (IOT) ಸಾಧನಗಳಿಗೆ ಉತ್ತಮ ಕಾರ್ಯಾಚರಣೆಯನ್ನು ಅನುಮತಿಸುತ್ತದೆ. ಡೇಟಾವನ್ನು ವಿಶ್ವಾಸಾರ್ಹವಾಗಿ ಮತ್ತು ವೇಗವಾಗಿ ರವಾನಿಸಲು ಅಗತ್ಯವಿರುವ ಯಾವುದಾದರೂ 5G ಯಿಂದ ಪ್ರಯೋಜನ ಪಡೆಯುತ್ತದೆ. ನಾವು 2G ಯಿಂದ 3G ಗೆ ಅಥವಾ 3G ಯಿಂದ 4G ಗೆ ಸ್ಥಳಾಂತರಗೊಂಡಾಗ ನಿಮ್ಮ ಕನೆಕ್ಷನ್ ವೇಗದಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುವುದಿಲ್ಲ. 5G ಒಟ್ಟಾರೆ ಸ್ಮಾರ್ಟ್ ಮೂಲಸೌಕರ್ಯಗಾಲ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ ಪುನಃ ಅದೇ ರಾಗ ಅದೇ ಹಾಡಿನಂತೆ 5G ಸ್ಮಾರ್ಟ್ಫೋನ್ ಖರೀದಿಸಲು ಮುಂದಾಗಬೇಡಿ ಏಕೆಂದರೆ ಭಾರತದಲ್ಲಿ ಇನ್ನು 5G ನೆಟ್ವರ್ಕ್ ಇಲ್ಲ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :