CMF Phone (1): ಮುಂಬರಲಿರುವ ನಥಿಂಗ್‌ ಫೋನ್ ಬಿಡುಗಡೆಗೂ ಮುಂಚೆ ಬೆಲೆ ಮತ್ತು ಫೀಚರ್ಗಳು ಬಹಿರಂಗ!

CMF Phone (1): ಮುಂಬರಲಿರುವ ನಥಿಂಗ್‌ ಫೋನ್ ಬಿಡುಗಡೆಗೂ ಮುಂಚೆ ಬೆಲೆ ಮತ್ತು ಫೀಚರ್ಗಳು ಬಹಿರಂಗ!
HIGHLIGHTS

ಮುಂಬರಲಿರುವ CMF Phone (1) ಈಗ ಬಿಡುಗಡೆಗೂ ಮುಂಚೆಯೇ ಇದರ ಬಾಕ್ಸ್ ಮೇಲಿರುವ ಬೆಲೆ ಮತ್ತು ಫೀಚರ್ಗಳನ್ನು ಬಹಿರಂಗಪಡಿಸಿದೆ.

ಸ್ಮಾರ್ಟ್ಫೋನ್ ಬಗ್ಗೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಊಹಪೋಹಗಳಿಗೆ ಪೂರ್ಣ ವಿರಾಮವನ್ನು ನೀಡಲು ಟಿಪ್‌ಸ್ಟಾರ್‌ Technerd ಮುಂದಾಗಿದ್ದಾರೆ.

ಮುಂಬರಲಿರುವ CMF Phone (1) ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಮಾತ್ರ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಈಗಾಗಲೇ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಥಿಂಗ್‌ನ ಮುಂಬರಲಿರುವ CMF Phone (1) ಈಗ ಬಿಡುಗಡೆಗೂ ಮುಂಚೆಯೇ ಇದರ ಬಾಕ್ಸ್ ಮೇಲಿರುವ ಬೆಲೆ ಮತ್ತು ಫೀಚರ್ಗಳನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಬಗ್ಗೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಊಹಪೋಹಗಳಿಗೆ ಪೂರ್ಣ ವಿರಾಮವನ್ನು ನೀಡಲು ಟಿಪ್‌ಸ್ಟಾರ್‌ Technerd ಮುಂದಾಗಿದ್ದಾರೆ. ಈ ಮುಂಬರಲಿರುವ ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಮಾತ್ರ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ CMF Phone (1) ಬಗ್ಗೆ ಈವರೆಗೆ ತಿಳಿದಿರುವ ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

CMF Phone (1) ನಿರೀಕ್ಷಿತ ಬೆಲೆ ಮತ್ತು ಲಭ್ಯತೆ:

ಈ ಮುಂಬರಲಿರುವ ನಥಿಂಗ್‌ನ CMF Phone (1) ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ತುಂಬ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಸ್ಮಾರ್ಟ್ಫೋನ್ ಪ್ರಸ್ತುತ 2 ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಲಿದ್ದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಸುಮಾರು 18,999 ರೂಗಳಿಗೆ ನಿಗದಿಪಡಿಸಿರುವುದಾಗಿ ನಿರೀಕ್ಷಿಸಲಾಗಿದೆ. ಮತ್ತೊಂದನ್ನು 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಸುಮಾರು 19,999 ರೂಗಳಿಗೆ ನಿಗದಿಪಡಿಸಿರುವುದಾಗಿ ನಿರೀಕ್ಷಿಸಲಾಗಿದೆ.

ಅಲ್ಲದೆ ಹೆಚ್ಚುವರಿಯಾಗಿ 2GB ವರ್ಚುಲ್ RAM ಅನ್ನು ಸಹ ವಿಸ್ತರಿಸಲು ಅವಕಾಶ ನೀಡುವುದಾಗಿ ಹೇಳಲಾಗುತ್ತಿದೆ. ಈ ಸ್ಮಾರ್ಟ್ಫೋನ್ ನೇರವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟವಾಗುವುದಾಗಿ ಖಚಿತಪಡಿಸಿದೆ. ಅಲ್ಲದೆ ಈ CMF Phone (1) ಸ್ಮಾರ್ಟ್ಫೋನ್ ನಾಲ್ಕು ಕೇಸರಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗುತ್ತಿದೆ. ಫೋನ್ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಅನ್ನು ಬದಲಿಸುವ ಆಯ್ಕೆಯೊಂದಿಗೆ ಲೆದರ್ ಬ್ಯಾಕ್ ಫಿನಿಶ್ ಹೊಂದಿರುವಂತೆ ತೋರುತ್ತಿದೆ.

Also Read: Vodafone Idea ಸದ್ದಿಲ್ಲದೆ ಉಚಿತ OTT ಮತ್ತು 5GB ಡೇಟಾದ ಬಂಡಲ್ ಪ್ಯಾಕ್‌ ಯೋಜನೆಯನ್ನು ಪರಿಚಯಿಸಿದೆ

CMF ಸ್ಮಾರ್ಟ್ಫೋನ್ (1) ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು:

ಈ ಮುಂಬರಲಿರುವ CMF Phone (1) ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ FHD+ OLED ಡಿಸ್ಪ್ಲೇಯನ್ನು ಹೊಂದಿರಬಹುದು ಎಂದು ಸೋರಿಕೆಗಳು ಹೇಳುತ್ತವೆ. ಇದು ಮೊದಲ CMF ಫೋನ್ ಆಗಿದ್ದು 50MP ಪ್ರೈಮರಿ ಕ್ಯಾಮೆರಾ ಮತ್ತು ಸೆಕೆಂಡರಿ ಕ್ಯಾಮೆರಾವನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ನಾವು 16MP ಶೂಟರ್ ಅನ್ನು ಪಡೆಯಬಹುದು.

CMF Phone (1) box price and specs revealed ahead of India launch 2024
CMF Phone (1) box price and specs revealed ahead of India launch 2024

CMF Phone (1) ಸ್ಮಾರ್ಟ್ಫೋನ್ MediaTek Dimensity 7300 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈಗಾಗಲೇ ಮೇಲೆ ತಿಳಿಸಿರುವಂತೆ ಸ್ಮಾರ್ಟ್ಫೋನ್ 6GB ಮತ್ತು 8GB RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದ್ದು ಇದರ ಸ್ಟೋರೇಜ್ ವಿಸ್ತರಣೆಗಾಗಿ ಮೈಕ್ರೋ SD ಕಾರ್ಡ್ ಸ್ಲಾಟ್ ಸಹ ಇರುತ್ತದೆ. ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ ಕಸ್ಟಮ್ ಸ್ಕಿನ್ ಅನ್ನು ಬಾಕ್ಸ್‌ನ ಹೊರಗೆ ಬೂಟ್ ಮಾಡುವ ಸಾಧ್ಯತೆಗಳಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo