digit zero1 awards

ಮುಂಬರಲಿರುವ JioPhone Next ಸ್ಮಾರ್ಟ್ಫೋನ್ ಬಗ್ಗೆ ಬಿಡುಗಡೆಗೂ ಮುಂಚೆ ತಿಳಿಯಲೇಬೇಕಾಗದ ಈ 7 ವಿಶೇಷ ವೈಶಿಷ್ಟ್ಯಗಳು

ಮುಂಬರಲಿರುವ JioPhone Next ಸ್ಮಾರ್ಟ್ಫೋನ್ ಬಗ್ಗೆ ಬಿಡುಗಡೆಗೂ ಮುಂಚೆ ತಿಳಿಯಲೇಬೇಕಾಗದ ಈ 7 ವಿಶೇಷ ವೈಶಿಷ್ಟ್ಯಗಳು
HIGHLIGHTS

ಜಿಯೋಫೋನ್ ನೆಕ್ಸ್ಟ್ (JioPhone Next) ಎಲ್ಲ ಭಾರತೀಯರಿಗೂ ಡಿಜಿಟಲ್ ಸಂಪರ್ಕ ಒದಗಿಸುವ ತನ್ನ ದೃಷ್ಟಿಕೋನವನ್ನು ಪುನಃ ದೃಢೀಕರಿಸಿದ ಜಿಯೋ

ಜಿಯೋಫೋನ್ ನೆಕ್ಸ್ಟ್ (JioPhone Next) ರೂಪಿಸಲು ಗೂಗಲ್ ಹಾಗೂ ಕ್ವಾಲ್‌ಕಾಮ್ ಜೊತೆ ಸಮಾನ ದೂರದೃಷ್ಟಿಯ ಸಹಭಾಗಿತ್ವ ಹೊಂದಿದೆ

ದೀಪಾವಳಿಗೆ ಮುನ್ನ 'ಮೇಕಿಂಗ್ ಆಫ್ ಜಿಯೋಫೋನ್ ನೆಕ್ಸ್ಟ್ (JioPhone Next)' ಕಿರುಚಿತ್ರವನ್ನು ಜಿಯೋ ಬಿಡುಗಡೆಗೊಳಿಸಿದೆ. ಇತ್ತೀಚಿನ ದಿನಗಳ ಬಹುನಿರೀಕ್ಷಿತ ಫೋನ್‌ಗಳಲ್ಲೊಂದಾದ ಜಿಯೋಫೋನ್ ನೆಕ್ಸ್ಟ್ (JioPhone Next) ಅನ್ನು ಬಿಡುಗಡೆ ಮಾಡುತ್ತಿರುವುದರ ಹಿಂದಿನ ದೂರದೃಷ್ಟಿ ಮತ್ತು ಕಲ್ಪನೆಯ ಒಳನೋಟವನ್ನು ಈ ಕಿರುಚಿತ್ರವು ನೀಡುತ್ತದೆ. ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಈ ಹೊಸ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಈಗಾಗಲೇ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನವನ್ನೂ ಸೆಳೆಯುತ್ತಿದೆ. ಇದನ್ನೂ ಓದಿ: ಅಮೆಜಾನ್‌ನಲ್ಲಿ 5000mAh ಬ್ಯಾಟರಿ ಮತ್ತು 48MP ಟ್ರಿಪಲ್ ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌ಗಳು 12,999 ರೂಗಳಲ್ಲಿ ಲಭ್ಯ

5 ವರ್ಷಗಳಷ್ಟು ಕಡಿಮೆ ಅವಧಿಯಲ್ಲಿ ಜಿಯೋ ಭಾರತದಲ್ಲಿ ಮನೆಮಾತಾಗಿದೆ. 430 ದಶಲಕ್ಷ ಬಳಕೆದಾರರೊಂದಿಗೆ ಅದರ ಸೇವೆಗಳು ವಿವಿಧ ಪ್ರದೇಶಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವರ್ಗಗಳಲ್ಲಿ ವಿಸ್ತರಿಸಿವೆ. ಆಂಡ್ರಾಯ್ಡ್‌ನಿಂದ ಸಶಕ್ತವಾದ ಪ್ರಗತಿ ಓಎಸ್ ಭಾರತಕ್ಕಾಗಿ ರೂಪಿಸಲಾದ ಒಂದು ವಿಶ್ವದರ್ಜೆಯ ಆಪರೇಟಿಂಗ್ ಸಿಸ್ಟಂ ಆಗಿದೆ. ಜಿಯೋಫೋನ್ ನೆಕ್ಸ್ಟ್ (JioPhone Next)ನ ವೈವಿಧ್ಯಮಯ ಫೀಚರ್‌ಗಳು ತಂತ್ರಜ್ಞಾನದೊಂದಿಗೆ ಸಂಪೂರ್ಣ ಹೊಸ ರೀತಿಯ ಸಂವಹನವನ್ನು ಸಾಧ್ಯವಾಗಿಸುತ್ತವೆ.

JioPhone Next

ಜಿಯೋಫೋನ್ ನೆಕ್ಸ್ಟ್ (JioPhone Next)ನೊಂದಿಗೆ ಜಿಯೋ ಭಾರತದಲ್ಲಿ ಡಿಜಿಟಲ್ ಸಂಪರ್ಕವನ್ನು ಪ್ರಜಾತಂತ್ರೀಕರಿಸುವ  ದೃಷ್ಟಿಕೋನದ ಕಡೆಗೆ ನಿರ್ಣಾಯಕ ಹೆಜ್ಜೆ ಇಡಲು ಯೋಜಿಸಿದೆ. ಜಿಯೋಫೋನ್ ನೆಕ್ಸ್ಟ್ ಅನ್ನು ಭಾರತದಲ್ಲಿ ಭಾರತಕ್ಕಾಗಿ ಹಾಗೂ ಭಾರತೀಯರಿಂದ ನಿರ್ಮಿಸಲಾಗಿದೆ.ಭಾರತೀಯರೆಲ್ಲರೂ ಡಿಜಿಟಲ್ ತಂತ್ರಜ್ಞಾನಕ್ಕೆ ಸಮಾನ ಅವಕಾಶ ಮತ್ತು ಸಮಾನ ಪ್ರವೇಶವನ್ನು ಪಡೆಯುವುದನ್ನು ಜಿಯೋಫೋನ್ ನೆಕ್ಸ್ಟ್ ಖಚಿತಪಡಿಸುತ್ತದೆ. ಲಕ್ಷಾಂತರ ಭಾರತೀಯರ ಜೀವನವನ್ನು ಬದಲಿಸಲು ಜಿಯೋಫೋನ್ ನೆಕ್ಸ್ಟ್ ಹೇಗೆ ಸನ್ನದ್ಧವಾಗಿದೆ ಎನ್ನುವುದನ್ನು ಈ ಕಿರುಚಿತ್ರ ಪರಿಚಯಿಸುತ್ತದೆ. ಇದನ್ನೂ ಓದಿ: Amazon Extra Happiness Days: ಅಮೆಜಾನ್ನಲ್ಲಿ ಈ Smartphone, Smart TV ಮತ್ತು Laptop ಮೇಲೆ ಬಂಪರ್ ಡಿಸ್ಕೌಂಟ್

JioPhone Next

ಕೈಗೆಟುಕುವ ಬೆಲೆಯಲ್ಲಿ ನೈಜ ತೊಡಕಿಲ್ಲದ ಅನುಭವವನ್ನು ನೀಡುವುದರೊಂದಿಗೆ ಎಲ್ಲರಿಗೂ ಪ್ರಗತಿ ತರುವ ಉದ್ದೇಶದಿಂದ ಜಿಯೊ ಮತ್ತು ಗೂಗಲ್‌ನ ಅತ್ಯುತ್ತಮ ಪ್ರತಿಭೆಗಳು ಇದನ್ನು ರೂಪಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಇನ್ನೊಂದು ಮುಂಚೂಣಿ ಸಂಸ್ಥೆಯಾದ ಕ್ವಾಲ್‌ಕಾಮ್ ಜಿಯೋಫೋನ್ ನೆಕ್ಸ್ಟ್ (JioPhone Next)ನ ಪ್ರಾಸೆಸರ್ ಅನ್ನು ರೂಪಿಸಿದೆ. ಸಾಧನದ ಕಾರ್ಯಕ್ಷಮತೆ ಆಡಿಯೋ ಮತ್ತು ಬ್ಯಾಟರಿಯಲ್ಲಿ ಆಪ್ಟಿಮೈಸೇಶನ್ ಜೊತೆಗೆ ಆಪ್ಟಿಮೈಸ್ಡ್ ಕನೆಕ್ಟಿವಿಟಿ ಮತ್ತು ಲೊಕೇಶನ್ ತಂತ್ರಜ್ಞಾನಗಳನ್ನು ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಕ್ವಾಲ್‌ಕಾಮ್ ಪ್ರಾಸೆಸರ್‌ನ ಒದಗಿಸುತ್ತದೆ.

ಜಿಯೋಫೋನ್ ನೆಕ್ಸ್ಟ್ (JioPhone Next) ಕೆಲವು ವಿಭಿನ್ನ ವೈಶಿಷ್ಟ್ಯಗಳು:

1.ವಾಯ್ಸ್ ಅಸಿಸ್ಟೆಂಟ್: ಬಳಕೆದಾರರು ತಮ್ಮ ಸಾಧನವನ್ನು ನಿರ್ವಹಿಸಲು (ಆಪ್ ತೆರೆಯುವುದು ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು  ಇತ್ಯಾದಿ) ಮತ್ತು ತಮಗೆ ತಿಳಿದಿರುವ ಭಾಷೆಯಲ್ಲಿ ಅಂತರಜಾಲದಿಂದ ಮಾಹಿತಿ/ಕಂಟೆಂಟ್ ಅನ್ನು ಸುಲಭವಾಗಿ ಪಡೆದುಕೊಳ್ಳಲು  ವಾಯ್ಸ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ.

2.ರೀಡ್ ಅಲೌಡ್: ಆಲಿಸುವ (’ಲಿಸನ್') ಸೌಲಭ್ಯವು ಯಾವುದೇ ಪರದೆಯ ಮೇಲಿರುವ ವಿಷಯವನ್ನು ಬಳಕೆದಾರರಿಗೆ ಓದಿ ಹೇಳುತ್ತದೆ. ತಮಗೆ ಅರ್ಥವಾಗುವ ಭಾಷೆಯಲ್ಲಿ ಕೇಳುವ ಮೂಲಕ ಕಂಟೆಂಟ್ ಅನ್ನು ಪಡೆದುಕೊಳ್ಳಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.

3.ಅನುವಾದ: ಅನುವಾದ (’ಟ್ರಾನ್ಸ್‌ಲೇಟ್') ಸೌಲಭ್ಯವು ಯಾವುದೇ ಪರದೆಯನ್ನು ಬಳಕೆದಾರರ ಆಯ್ಕೆಯ ಭಾಷೆಗೆ ಅನುವಾದಿಸಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

4.ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ: ಈ ಸಾಧನದಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಹಬ್ಬಗಳ ಜೊತೆಗೂಡಿ ಚಿತ್ರಗಳ ಅಂದ ಹೆಚ್ಚಿಸಲು ಕ್ಯಾಮೆರಾ ಆಪ್‌ನಲ್ಲಿ ವಿಶಿಷ್ಟವಾದ ಭಾರತೀಯ ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳನ್ನು ನೀಡಲಾಗಿದೆ.

5.ಮುಂಚಿತವಾಗಿ ಲೋಡ್ ಮಾಡಲಾದ ಜಿಯೋ ಮತ್ತು ಗೂಗಲ್ ಆಪ್‌ಗಳು: ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

6.ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಗ್ರೇಡ್: ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಡೇಟ್‌ಗಳೊಂದಿಗೆ ಜಿಯೋಫೋನ್ ನೆಕ್ಸ್ಟ್ ಯಾವಾಗಲೂ ಅಪ್-ಟು-ಡೇಟ್ ಆಗಿರುತ್ತದೆ. ಇತ್ತೀಚಿನ ವೈಶಿಷ್ಟ್ಯಗಳನ್ನು ಸ್ವಯಂಚಾಲಿತವಾಗಿ ಒದಗಿಸಲಾಗುವುದರಿಂದ ಬಳಕೆದಾರರ ಅನುಭವವು ಕಾಲಕ್ರಮೇಣ ಉತ್ತಮಗೊಳ್ಳುತ್ತಲೇ ಇರುತ್ತದೆ. ರೇಜಿಗೆಯಿಲ್ಲದ ಅನುಭವವನ್ನು ಖಾತ್ರಿಪಡಿಸುವುದಕ್ಕಾಗಿ ಭದ್ರತಾ ಅಪ್‌ಡೇಟ್‌ಗಳನ್ನೂ ನೀಡಲಾಗುತ್ತದೆ.

7.ಅದ್ಭುತ ಬ್ಯಾಟರಿ ಲೈಫ್: ಆಂಡ್ರಾಯ್ಡ್‌ನಿಂದ ಚಾಲಿತವಾದ ಹೊಸದಾಗಿ ವಿನ್ಯಾಸಗೊಳಿಸಲಾದ ಪ್ರಗತಿ ಓಎಸ್ ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ಖಚಿತಪಡಿಸುವುದಲ್ಲದೆ ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ನೀಡುತ್ತದೆ. ಇದನ್ನೂ ಓದಿ: Smart TV Deal: ಅತಿ ಕಡಿಮೆ ಬೆಲೆಗೆ ಈ ಬಜೆಟ್ Smart TV ಅಮೆಜಾನ್ ಮಾರಾಟದಲ್ಲಿ ಇಂದೇ ಖರೀದಿಸಬಹುದು

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo