CAMON 30 Premier 5G ಭಾರತದಲ್ಲಿ ಬಿಡುಗಡೆ! 50MP ಸೆಲ್ಫಿ ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳೇನು?
ಭಾರತದಲ್ಲಿ Tecno CAMON 30 ಮತ್ತು CAMON 30 Premier 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿವೆ.
CAMON 30 Premier 5G ಸ್ಮಾರ್ಟ್ಫೋನ್ 12GB RAM ಮತ್ತು 50MP ಸೆಲ್ಫಿ ಕ್ಯಾಮೆರಾದೊಂದಿಗೆ ಲಾಂಚ್ ಆಗಿದೆ.
ನಿಮಗೊತ್ತಾ ಈ ಟೆಕ್ನೋ (Tecno) ಸ್ಮಾರ್ಟ್ಫೋನ್ ಬ್ರಾಂಡ್ ಜಗತ್ತಿನ 70 ದೇಶಗಳಲ್ಲಿ ತಮ್ಮ ಸ್ಮಾರ್ಟ್ಫೋನ್ ಮಾರಾಟ ಮಾಡುತ್ತಿದೆ.
ಭಾರತದಲ್ಲಿ ಈಗ ತನ್ನ ಲೇಟೆಸ್ಟ್ Tecno CAMON 30 ಮತ್ತು CAMON 30 Premier 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ನಿಮಗೆ 12GB RAM ಮತ್ತು 50MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಒಂದು ವೇಳೆ ನೀವು ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಬೆಲೆಯೊಂದಿಗೆ ಡಿಸ್ಪ್ಲೇ, ಕ್ಯಾಮೆರಾ, ಹಾರ್ಡ್ವೇರ್, ಬ್ಯಾಟರಿಯೊಂದಿಗೆ ಇದರ ಲಭ್ಯತೆ ಮತ್ತು ಬೆಸ್ಟ್ ಡೀಲ್ ಆಫರ್ ಬಗ್ಗೆ ಬಗ್ಗೆ ಸಂಪೂರ್ಣವಾಗಿ ತಿಳಿಯುವುದು ಬಹು ಮುಖ್ಯವಾಗಿದೆ.
ನಿಮಗೊತ್ತಾ ಈ ಟೆಕ್ನೋ (Tecno) ಸ್ಮಾರ್ಟ್ಫೋನ್ ಬ್ರಾಂಡ್ ಜಗತ್ತಿನ 70 ದೇಶಗಳಲ್ಲಿ ತಮ್ಮ ಸ್ಮಾರ್ಟ್ಫೋನ್ ಮಾರಾಟ ಮಾಡುತ್ತಿದ್ದು ಭಾರತದ 6ನೇ ಅತಿದೊಡ್ಡ ಸ್ಮಾರ್ಟ್ಫೋನ್ ಬ್ರಾಂಡ್ ಆಗಿದೆ. ಆದ್ದರಿಂದ ಈ ಲೇಖನದಲ್ಲಿ ನಾನು ನಿಮಗೆ ಕೇವಲ CAMON 30 Premier 5G ಸ್ಮಾರ್ಟ್ಫೋನ್ ಬಗ್ಗೆ ಮಾತ್ರ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಿದ್ದೇನೆ.
CAMON 30 Premier 5G ಬೆಲೆ ಮತ್ತು ಲಭ್ಯತೆ
ಎಲ್ಲಕ್ಕಿಂತ ಅತಿ ಮುಖ್ಯವಾದ ಆಂಶೆವೆಂದರೆ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಇದರ ಲಭ್ಯತೆಯಾಗಿದೆ. CAMON 30 Premier 5G ಪ್ರಸ್ತುತ ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 12GB RAM ಮತ್ತು 512GB ಸ್ಟೋರೇಜ್ ಸುಮಾರು 39,999 ರುಗಳಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಪ್ರತಿ ವಲಯದಲ್ಲಿ ನಿಮಗೆ ಅತ್ಯುತ್ತಮವಾದ ಆಯ್ಕೆಯಾಗಿ ಕಾಣಿಸುತ್ತದೆ. ಇದರ ಮಾರಾಟ 23ನೇ ಮೇ 2024 ರಿಂದ ಆರಂಭವಾಗಲಿದ್ದು ಬಿಡುಗಡೆಯ ಕೊಡುಗೆಯಾಗಿ ನಿಮಗೆ ನಿಮಗೆ ಬರೋಬ್ಬರಿ 3000 ರೂಗಳ ತ್ವರಿತ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ರಿಯಾಯಿತಿಯೊಂದಿಗೆ ಕೇವಲ 36,999 ರೂಗಳಿಗೆ ಖರೀದಿಸಬಹುದು.
CAMON 30 Premier ಡಿಸ್ಪ್ಲೇ ಡೀಟೇಲ್ಸ್
ಮೊದಲಿಗೆ ಈ ಲೇಟೆಸ್ಟ್ CAMON 30 Premier 5G ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ 6.77 ಇಂಚಿನ 1.5K AMOLED LTPO ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1400 nits ಗರಿಷ್ಠ ಹೊಳಪನ್ನು ಹೊಂದಿದೆ. ಇದು ವೆಟ್ ಫಿಂಗರ್ ಟಚ್‌ಸ್ಕ್ರೀನ್ ಕಾರ್ಯಾಚರಣೆಯನ್ನು ಸಹ ಹೊಂದಿದ್ದು ಇದು ಬಳಕೆದಾರರು ತಮ್ಮ ಫೋನ್ ಅನ್ನು ಒದ್ದೆಯಾದ ಬೆರಳುಗಳೊಂದಿಗೆ ಬಳಸಲು ಅನುಮತಿಸುತ್ತದೆ.
CAMON 30 Premier 5G ಕ್ಯಾಮೆರಾ ವಿವರಗಳೇನು?
ಇದರ ಕ್ಯಾಮೆರಾ ವಿಭಾಗದಲ್ಲಿ ಈ ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸೋನಿ IMX 890 ಸೆನ್ಸರ್‌ನೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರೊಂದಿಗೆ 3x ಆಪ್ಟಿಕಲ್ ಜೂಮ್‌ನೊಂದಿಗೆ ಮತ್ತೊಂದು 50MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಮತ್ತು ಕೊನೆಯದಾಗಿ 50MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸೆನ್ಸರ್ ಲೆನ್ಸ್‌ನೊಂದಿಗೆ ಕ್ವಾಡ್ ಫ್ಲ್ಯಾಷ್ ಘಟಕದೊಂದಿಗೆ ಇರುತ್ತವೆ. ಫೋನ್‌ನ ಮುಂಭಾಗದ ಕ್ಯಾಮೆರಾವು ಕಣ್ಣುಗಳ ಆಟೋಫೋಕಸ್ ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಹೊಂದಿದೆ.
CAMON 30 Premier 5G ಹಾರ್ಡ್ವೇರ್ ಹೇಗಿದೆ?
ಈ ಲೇಟೆಸ್ಟ್ CAMON 30 Premier 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ವಿಭಾಗದ ಬಗ್ಗೆ ಮಾತನಾಡುವುದಾದರೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಚಿಪ್‌ಸೆಟ್ ಅನ್ನು 512GB ಸ್ಟೋರೇಜ್ ಜೊತೆಗೆ 12GB RAM ನೊಂದಿಗೆ ಜೋಡಿಸಲಾಗಿದೆ. ಅಲ್ಲದೆ ಈ ಫೋನ್ HiOS 14 ನೊಂದಿಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಮುಂಬರಲಿರುವ 3 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳ ಜೊತೆಗೆ ಎರಡು ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಸಹ ಪಡೆಯುತ್ತದೆ.
CAMON 30 Premier ಬ್ಯಾಟರಿ ಮತ್ತು ಸೆನ್ಸರ್ ಮಾಹಿತಿ
ಕೊನೆಯದಾಗಿ ಈ ಸ್ಮಾರ್ಟ್ಫೋನ್ 70W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದು IR ಬ್ಲಾಸ್ಟರ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಧೂಳು ಮತ್ತು ಡಸ್ಟ್ ಅನ್ನು ಪ್ರೊಟೆಕ್ಟ್ ಮಾಡಲು IP54 ರೇಟಿಂಗ್, ಬ್ಲೂಟೂತ್ 5.3, NFC, ಸ್ಟಿರಿಯೊ ಡ್ಯುಯಲ್ ಸ್ಪೀಕರ್, ಡಾಲ್ಬಿ ಅಟ್ಮಾಸ್ ಮೂಲಕ ನಿಮ್ಮ ಆಡಿಯೋ ಅನುಭವಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಸಹ ಒಳಗೊಂಡಿದೆ. ಈ ಫೋನ್ ಅನ್ನು ನೀವು ಸಿಲ್ವರ್ ಸ್ನೋ ಮತ್ತು ಬ್ಲ್ಯಾಕ್ ಲಾವಾ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile