ಚೀನಿ ಸ್ಮಾರ್ಟ್ಫೋನ್ ಕಂಪನಿ Xiaomi ಇಂದು Black Shark 2 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. Black Shark 2 ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ನಿಂದ ಚಾಲಿತ ಗೇಮಿಂಗ್ ಸ್ಮಾರ್ಟ್ಫೋನ್ ಆಗಿದೆ. ಈ ಸ್ಮಾರ್ಟ್ಫೋನ್ ಅನ್ನು ಅದರ ಪ್ರೊಸೆಸರ್ ಹೆಚ್ಚು ಚಟುವಟಿಕೆಗಳನ್ನು ಒಟ್ಟಿಗೆ ಮಾಡುವಾಗ ಬಿಸಿಯಾಗದಂತೆ ಇರಿಸಿಕೊಳ್ಳಲು ದ್ರವ ತಂಪಾಗಿಸುವ ವ್ಯವಸ್ಥೆಯನ್ನು ಅಂದ್ರೆ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಅನ್ನು ಬಳಸಲಾಗಿದೆ. ಈ ಸ್ಮಾರ್ಟ್ಫೋನಲ್ಲಿ 'Ludicrous Mode' ಅನ್ನು ಸಹ ಒಳಗೊಂಡಿದೆ. ಅದು 100% ಸಿಪಿಯು ಪವರನ್ನು ಮುಖ್ಯವಾಗಿ ಗೇಮಿಂಗ್ಗಾಗಿ ಅನುಮತಿಸುತ್ತದೆ. ಇದು 4ನೇ ಜೂನ್ 2019 ರಿಂದ ಭಾರತದಲ್ಲಿ ಫ್ಲಿಪ್ಕಾರ್ಟ್ನಲ್ಲಿ ಇದರ ಆರಂಭಿಕ ರೂಪಾಂತರ 6GB / 128GB ಸ್ಟೋರೇಜ್ ಇದರ ಬೆಲೆ 39,999 ರೂಗಳಲ್ಲಿ ಲಭ್ಯವಾದರೆ ಇದರ ಮತ್ತೋಂದು ರೂಪಾಂತರ 12GB / 256GB ಸ್ಟೋರೇಜ್ 49,999 ರೂಗಳಲ್ಲಿ ಲಭ್ಯವಿದೆ.
ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ನಿರ್ವಹಿಸುತ್ತದೆ. ಮತ್ತು ಇದರಲ್ಲಿನ ಪ್ರೊಸೆಸರ್ ಲಿಕ್ವಿಡ್ ತಂಪಾಗಿಸುವ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ.ಇದು 43ms ಲೇಟೆನ್ಸಿ ಜೊತೆ ಕಡಿಮೆ ಲೇಟೆನ್ಸಿ ಟಚ್ಸ್ಕ್ರೀನ್ ಹೊಂದಿದೆ. ಇದು ಹೊಸ ಮತ್ತು ಅದ್ದೂರಿಯ ವೈಶಿಷ್ಟ್ಯಗಳ ಮಾಸ್ಟರ್ ಟಚ್ ಹೊಂದಿದೆ. ಇದು ಐಫೋನ್ಗಳಲ್ಲಿ ಕಂಡುಬರುವ 3D ಟಚ್ನಂತಹ ಪ್ರದರ್ಶನಕ್ಕಾಗಿ ಪ್ರೆಷರ್ ಸೂಕ್ಷ್ಮ ತಂತ್ರಜ್ಞಾನವಾನ್ನಿ ಒಳಗೊಂಡಿದೆ. ನಿಂಟೆಂಡೊನ ಜಾಯ್ ಕಾನ್ ಕಂಟ್ರೋಲ್ ಸ್ಫೂರ್ತಿಗೊಳ್ಳುವ ಜೋಡಿ ನಿಯಂತ್ರಕಗಳೂ ಸೇರಿದಂತೆ ಕೆಲವು ಗೇಮಿಂಗ್ ಬಿಡಿಭಾಗಗಳನ್ನು ಇದು ಬೆಂಬಲಿಸುತ್ತದೆ.
ಈ Black Shark 2ಸ್ಮಾರ್ಟ್ಫೋನ್ 6.39 ಇಂಚಿನ ಪೂರ್ಣ HD+ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 12MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ಗಳೊಂದಿಗೆ ಡ್ಯುಯಲ್ ಬ್ಯಾಕ್ ಕ್ಯಾಮೆರಾ ಸೆಟಪ್ 2x ಆಪ್ಟಿಕಲ್ ಝೂಮ್ ಅನ್ನು ಹೊಂದಿದೆ. ಅಲ್ಲದೆ 20MP ಮೆಗಾಪಿಕ್ಸೆಲ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಒಳಗಿನ ಸ್ಟೋರೇಜ್ UFS 2.1 ಸ್ಟೋರೇಜ್ ಮಾನದಂಡವನ್ನು ಬಳಸುತ್ತದೆ. ಇದು USF 3.0 ಕ್ಕಿಂತ OnePlus 7 Pro ಫೋನಿಗಿಂತ ಸ್ವಲ್ಪ ನಿಧಾನವಾಗಿದೆ. ಇದರಲ್ಲಿ ಚಾರ್ಜಿಂಗ್ಗಾಗಿ USB ಟೈಪ್ ಸಿ ಪೋರ್ಟ್ ಮತ್ತು ಎರಡು ನ್ಯಾನೋ ಸಿಮ್ ಸ್ಲಾಟ್ಗಳನ್ನು ಹೊಂದಿದೆ.