ಶೀಘ್ರದಲ್ಲೇ ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ BharOS ಬಿಡುಗಡೆಗೆ ಸಜ್ಜು! ಆಪಲ್ ಮತ್ತು ಆಂಡ್ರಾಯ್ಡ್ ಗತಿ ಏನು?
ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ BharOS ಬಿಡುಗಡೆಗೆ ಸಜ್ಜಾಗಿದೆ.
ಈ BharOS ನಂತಹ ಯಾವುದೇ ವ್ಯವಸ್ಥೆಯ ಯಶಸ್ಸನ್ನು ಜನರು ವಿರೋಧಿಸುತ್ತಾರೆಯೇ ಅಥವಾ ಎಲ್ಲರು ಇದನ್ನು ಬಳಸಲು ಮುಂದೆ ಬರುತ್ತಾರೆಯೇ ಎನ್ನುವುದನ್ನು ನಾವು ಕಾದು ನೋಡಬೇಕಿದೆ.
ಸದ್ಯಕ್ಕೆ IIT ಮದ್ರಾಸ್‌ನಿಂದ ರಚಿಸಲ್ಪಟ್ಟ ಈ ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ BharOS ಪ್ರಪಂಚದಾದ್ಯಂತ ಸಾಕಷ್ಟು ಗಮನವನ್ನು ಸೆಳೆದಿದೆ.
BharOS News: ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ BharOS ಬಿಡುಗಡೆಗೆ ಸಜ್ಜಾಗಿದೆ. ಈ BharOS ನಂತಹ ಯಾವುದೇ ವ್ಯವಸ್ಥೆಯ ಯಶಸ್ಸನ್ನು ಜನರು ವಿರೋಧಿಸುತ್ತಾರೆಯೇ ಅಥವಾ ಎಲ್ಲರು ಇದನ್ನು ಬಳಸಲು ಮುಂದೆ ಬರುತ್ತಾರೆಯೇ ಎನ್ನುವುದನ್ನು ನಾವು ಕಾದು ನೋಡಬೇಕಿದೆ. ಸದ್ಯಕ್ಕೆ IIT ಮದ್ರಾಸ್‌ನಿಂದ ರಚಿಸಲ್ಪಟ್ಟ ಈ ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ BharOS ಪ್ರಪಂಚದಾದ್ಯಂತ ಸಾಕಷ್ಟು ಗಮನವನ್ನು ಸೆಳೆದಿದೆ. ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇದರ ಸಾಫ್ಟ್‌ವೇರ್ ಅನ್ನು ಪರೀಕ್ಷಿಸಿ ಮತ್ತು ಭರೋಸ್ ಅನ್ನು ಕುರಿತು ತಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
BharOS ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್
ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವೆ ಅಶ್ವಿನಿ ವೈಷ್ಣವ್ ರವರ ಪ್ರಕಾರ ಸವಾಲು ಇಲ್ಲಿಂದ ಶುರುವಾಗುತ್ತದೆ. ಸ್ಥಳೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸುವಲ್ಲಿ ನಾವು ವಿಶ್ವಾಸ ಹೊಂದಿರಬೇಕು ಏಕೆಂದರೆ ಪ್ರಪಂಚದಾದ್ಯಂತ ತೊಂದರೆಗಳು ಉದ್ಭವಿಸುತ್ತವೆ. ಪ್ರಬಲ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಪೂರೈಕೆದಾರರಾದ Apple ಮತ್ತು Google ನ ಬಗ್ಗೆ ಬಹುಶಃ ಸುಳಿವು ನೀಡಬಹುದು ಎಂದು ಅವರು "ಜನರು ಈ ರೀತಿಯ ಯಾವುದೇ ಸಿಸ್ಟಮ್ ಯಶಸ್ವಿಯಾಗಲು ಬಯಸುವುದಿಲ್ಲ" ಎಂದು ಹೇಳಿದರು.
BharOS ಯಾವ ಫೋನ್ಗಳಲ್ಲಿ ಕಾಣಬಹುದು?
ಅತ್ಯಂತ ಜಾಗರೂಕರಾಗಿರಬೇಕು ಬಹಳ ಜಾಗೃತವಾಗಿರಬೇಕು ಮತ್ತು ನಿರಂತರವಾಗಿರಬೇಕು" ಎಂದು ಸಚಿವೆ ಅಶ್ವಿನಿ ವೈಷ್ಣವ್ ರವರು ಹೇಳುತ್ತಾರೆ. ಇದನ್ನು ಯಶಸ್ವಿಯಾಗಿಸಲು ನಾವು ನಿರಂತರವಾಗಿ ಕೆಲಸ ಮಾಡಬೇಕು ಮತ್ತು ಅದಕ್ಕಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಂಡಿರಬೇಕು. ಹೆಸರಿಗೆ "ಎ" ಅನ್ನುವುದನ್ನು ಸೇರಿಸುವುದರಿಂದ ಅದು ಭರೋಸಾ ಆಗುತ್ತದೆ. ಅಂದರೆ ಇದು ಹಿಂದಿಯಲ್ಲಿ "ನಂಬಿಕೆ" ಎಂದು ಸೂಚಿಸುತ್ತಾರೆ. AINS ಪ್ರಕಟಿಸಿದ ಫೋಟೋ ಪ್ರಕಾರ IT ಸಚಿವರು BharOS ಅನ್ನು Pixel 6a ಅಥವಾ Pixel 7 ನಲ್ಲಿ ಟೆನ್ಸರ್ ಪ್ರೊಸೆಸರ್ ಮೂಲಕ ಪರೀಕ್ಷೆ ಮಾಡುತ್ತಿರುವಂತೆ ತೋರುತ್ತಿದೆ.
ಇದರ ಬಗ್ಗೆ ಅಷ್ಟಾಗಿ ಅರಿವಿಲ್ಲದವರಿಗೆ BharOS ಒಂದು AOSP(ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್) ಮೂಲಕ ನಿರ್ಮಿಸಲಾದ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. Google ನ Android ಮತ್ತು iOS ಗಿಂತ ಹೆಚ್ಚು ಸುರಕ್ಷಿತ ಮತ್ತು ಖಾಸಗಿ ಎಂದು ನಂಬಲಾಗಿದೆ. BharOS ನಲ್ಲಿ ಯಾವುದೇ ಫಸ್ಟ್-ಪಾರ್ಟಿ ಅಪ್ಲಿಕೇಶನ್‌ಗಳಿಲ್ಲ.ಇದು ಖಾಸಗಿ ಅಪ್ಲಿಕೇಶನ್ ಸ್ಟೋರ್‌ಗಳನ್ನು ಬೆಂಬಲಿಸುತ್ತದೆ.ಬಳಕೆದಾರರಿಗೆ ಅವರು ಬಯಸುವ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಬಳಸಲು ಅನುಮತಿಸುತ್ತದೆ.
ಭಾರತದ 100 ಲಕ್ಷಕ್ಕಿಂತಲೂ ಹೆಚ್ಚು ಫೋನ್ಗಳಲ್ಲಿ BharOS
ಭಾರತದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು ಭರೋಸ್‌ನಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಭವಿಷ್ಯದಲ್ಲಿ BharOS-ಚಾಲಿತ ಫೋನ್‌ಗಳನ್ನು ಪರಿಚಯಿಸಲು ಐಐಟಿ ಮದ್ರಾಸ್ ಒಇಎಂಗಳೊಂದಿಗೆ ಮಾತುಕತೆ ನಡೆಸುತ್ತಿದೆ. BharOS ತಂಡವು ಪ್ರಸ್ತುತ ಆರಂಭಿಕ ಪರೀಕ್ಷಾ ಹಂತದಲ್ಲಿರುವುದರಿಂದ ಅದನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮಾಡಲು ಮತ್ತಷ್ಟು ಪರೀಕ್ಷಿಸುವ ಮೂಲಕ ಅಭಿವೃದ್ಧಿಪಡಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile