ಭಾರತದಲ್ಲಿ 30,000 ರೂಗಳೊಳಗೆ ಹಣಕ್ಕೆ ತಕ್ಕ ಫೀಚರ್ಗಳನ್ನು ಹೊಂದಿರುವ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳು – 2019
ಈ ಬೆಲೆಯ ರೇಂಜಲ್ಲಿ ಬರುವ 5 ಹೆಚ್ಚು ಆಕರ್ಷಣೀಯ ಮತ್ತು ಉನ್ನತ ಮಟ್ಟದ ಸ್ಮಾರ್ಟ್ಫೋನ್ಗಳನ್ನು ಪಟ್ಟಿ ಮಾಡಿದ್ದೇವೆ.
ವರ್ಷಗಳು ಕಳೆಯುತ್ತಿದ್ದಂತೆ ಸ್ಮಾರ್ಟ್ಫೋನ್ಗಳು ಸಹ ಹೆಚ್ಚು ಪವರ್ಫುಲ್ ಆಗುತ್ತಿವೆ. ಈಗ ನೀವು ದುಬಾರಿ ಹಣ ಸುರಿದು ಫಾಸ್ಟ್ ಮತ್ತು ಪವರ್ಫುಲ್ ಸ್ಮಾರ್ಟ್ಫೋನ್ಗಳನ್ನು ಕೊಳ್ಳುವ ಕಾಲ ಹೋಯ್ತು. ಈಗ ನಿಮ್ಮ ಬಳಿ ಕೇವಲ 30,000 ರೂಪಾಯಿಗಳೊಳಗಿನ ಬಜೆಟ್ ಇದ್ದರೆ ಸಾಕು ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳನ್ನು ಪಡೆದುಕೊಳ್ಳಬವುದು. ಆದ್ದರಿಂದ ಇಲ್ಲಿ ಡಿಜಿಟ್ ಕನ್ನಡ ನಿಮಗೆ ಈ ಬೆಲೆಯ ರೇಂಜಲ್ಲಿ ಬರುವ 5 ಹೆಚ್ಚು ಆಕರ್ಷಣೀಯ ಮತ್ತು ಉನ್ನತ ಮಟ್ಟದ ಸ್ಮಾರ್ಟ್ಫೋನ್ಗಳನ್ನು ಪಟ್ಟಿ ಮಾಡಿದ್ದೇವೆ.
Honor Play
ಭಾರತದಲ್ಲಿ ಹಾನರ್ ಕಂಪನಿಯ ಈ ಸ್ಮಾರ್ಟ್ಫೋನ್ ಅಮೆಜಾನ್ ನಲ್ಲಿ ಕೇವಲ 20,000 ರೂಪಾಯಿಗಳೊಳಗೆ ಬರುತ್ತದೆ. ನೀವೊಬ್ಬ ಗೇಮರ್ ಆಗಿದ್ದರೆ ಇದು ನಿಮಗಾಗಿದೆ. ಇದರಲ್ಲಿ ಫ್ಲಾಗ್ ಷಿಪ್ ಪ್ರೊಸೆಸರೊಂದಿಗೆ ಹುವಾವೇಯ GPU Turbವಿನೋದಿಗೆ ಅದ್ದೂರಿಯ ಗೇಮಿಂಗ್ ಅನುಭವ ನೀಡುತ್ತದೆ. ಇದರಲ್ಲಿ 16+2MP ಬ್ಯಾಕ್ ಮತ್ತು 16MP AI ಸೇಲ್ಫಿ ಕ್ಯಾಮೆರಾದೊಂದಿಗೆ 6.3 ಇಂಚಿನ FHD+ ಡಿಸ್ಪ್ಲೇ ಹಾಗು 3750mAh ಬ್ಯಾಟರಿಯನ್ನು ದೊರೆಯುತ್ತದೆ.
Nokia 7 Plus
ಕಳೆದ ವರ್ಷದ ಕೊನೆಯಲ್ಲಿ HDM ಗ್ಲೋಬಲ್ ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಈ ಫೋನನ್ನು ತಂದಿದೆ. ಇದು ನಿಮಗೆ 12+ 13MP ಸೆನ್ಸರ್ ZEISS ಆಪ್ಟಿಕ್ಗಳೊಂದಿಗೆ ಅದ್ದೂರಿಯ ಚಿತ್ರಗಳನ್ನು ಸೆರೆ ಹಿಡಿಯಲು ಸಹಕರಿಸುತ್ತದೆ. ಇದು ಫ್ಲಿಪ್ಕಾರ್ಟ್ ನಲ್ಲಿ 29,999 ರೂಪಾಯಿಗಳಲ್ಲಿ ಬರುತ್ತದೆ. ಇದು ನಿಮಗೆ 3800mAh ಬ್ಯಾಟರಿ ಮತ್ತು 6 ಇಂಚಿನ IPS LCD full HD+ ಡಿಸ್ಪ್ಲೇಯೊಂದಿಗೆ ಬರುತ್ತದೆ.
Nokia 8.1
ಈ ಪಟ್ಟಿಯ ಮತ್ತೊಂದು ಫೋನ್ ಅಂದ್ರೆ Nokia 8.1. ಇದರಲ್ಲಿ ನಿಮಗೆ ಅಮೇಜಿಂಗ್ ಡಿಸ್ಪ್ಲೇ ಮತ್ತು ಕ್ಯಾಮೆರಾವನ್ನು ಪಡೆಯುತ್ತೀರಿ. ಇದರಲ್ಲೂ ಸಹ HDM ಗ್ಲೋಬಲ್ ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನ್ನು ನೀಡಿದ್ದು 12MP + 13MP ಬ್ಯಾಕ್ ಮತ್ತು 20MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದು ಬಳಸುವವರ ಕೈಯಲ್ಲಿ ಡಿಸೆಂಟ್ ಮ್ಯಾಟ್ ಕ್ಲಾಸಿ ಲುಕ್ ನೀಡುತ್ತದೆ.
Poco F1
ಇದು ಈಗಾಗಲೇ Xiaomi ಕಂಪನಿಯ ಸಬ್ ಬ್ರಾಂಡ್ ಪೊಕೋವಿನ ಪವರ್ಫುಲ್ ಚಿಪ್ಸೆಟ್ ಹೊಂದಿರುವ ಫೋನ್ ಇದಾಗಿದೆ. ಇದರಿಂದಾಗಿ ನೀವು ಅದ್ದೂರಿಯ ಪರ್ಫಾರ್ಮೆನ್ಸ್ ಮತ್ತು ಸ್ನ್ಯಾಪ್ಡ್ರಾಗನ್ 845 ಪ್ರೊಸೆಸರನ್ನು ಪಡೆಯುವಿರಿ. ಜೋತೆಗೆ ಇದರಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ಗಾಗಿ ಇದರ ಹಾರ್ಡ್ವೇರಲ್ಲಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಇದು ನಿಮಗೆ ಫ್ಲಿಪ್ಕಾರ್ಟ್ ನಲ್ಲಿ 19,999 ರೂಪಾಯಿಗಳಲ್ಲಿ ಲಭ್ಯ.
Asus Zenfone 5Z
ಇದು ಅಸೂಸ್ ಕಂಪನಿಯ ಇತ್ತೀಚಿನ ಫ್ಲಾಗ್ ಷಿಪ್ ಸ್ಮಾರ್ಟ್ಫೋನ್ ಆಗಿದ್ದುಇದು iPhone X ನಂತೆ ಕಾಣುತ್ತದೆ. ಆದರೆ ಆಂಡ್ರಾಯ್ಡ್ ಫೋನ್ಗಳಲ್ಲಿನ ಉತ್ತಮ ಸ್ಪೆಸಿಫಿಕೇಷನ್ ಹೊಂದಿರುವ ಇದು ಕ್ಲಾಸಿ ಡಿಸೈನ್ ಮತ್ತು ಈ ಬೆಲೆಯಲ್ಲಿ Wide angle lens ನೀಡುವ ಮೊದಲ ಸ್ಮಾರ್ಟ್ಫೋನ್ ಆಗಿದೆ. 6.2 Full HD+ ಡಿಸ್ಪ್ಲೇ ಮತ್ತು ಸ್ನ್ಯಾಪ್ಡ್ರಾಗನ್ 845 ಪ್ರೊಸೆಸರೊಂದಿಗೆ 3300mAh ಬ್ಯಾಟರಿ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile