ದೇಶ ಮತ್ತು ವಿಶ್ವದ್ಯಾದಂತ ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಬದಲಾಗಿವೆ ಅಲ್ವೇ. ಇಂದಿನ ಸ್ಮಾರ್ಟ್‌ಫೋನ್‌ಗಳು ಬಹಳ ಸುಧಾರಿತ ಮತ್ತು ಹೈಟೆಕ್ ಆಗಿ ಮಾರ್ಪಟ್ಟಿವೆ. ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಬಳಕೆದಾರರು ಅದರ ವೈಶಿಷ್ಟ್ಯಗಳಿಗೆ ವಿಶೇಷವಾದ ಗಮನ ನೀಡುತ್ತಾರೆ. ಉತ್ತಮವಾದ ಬ್ಯಾಟರಿ ಹೊಂದಿರುವಾಗ ಜೊತೆ ಜೊತೆಗೆ ಉತ್ತಮ ವೈಶಿಷ್ಟ್ಯಗಳು ಮತ್ತು ಪವರ್ಫುಲ್ ಸ್ಪೆಸಿಫಿಕೇಷನ್ಗಳನ್ನು ಹೊಂದಿರುವ ಫೋನ್‌ಗಳು ಉತ್ತಮವಾಗುತ್ತವೆ. ಅದಕ್ಕಾಗಿಯೇ ಇಂದು ನಾವು ಭಾರತದಲ್ಲಿ ಬಿಡುಗಡೆಯಾಗಿರುವ ಅಂತಹ ಎರಡು ಸ್ಮಾರ್ಟ್ ಫೋನ್‌ಗಳ ಬಗ್ಗೆ ಇಲ್ಲಿ ನೋಡೋಣ. ಈ ಫೋನ್ಗಳು 6000mAh ಬ್ಯಾಟರಿಯೊಂದಿಗೆ ಸ್ಪೆಸಿಫಿಕೇಷನ್ಗಳನ್ನು ಹೊಂದಿವೆ.
ಈ ಹೊಸ Samsung Galaxy M30s ಸ್ಮಾರ್ಟ್‌ಫೋನ್ ಭಾರತದಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ 6000mAh ಹೊಂದಿರುವ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದೆ. ಈ ಫೋನ್ 1080×2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.4 ಇಂಚಿನ ಸೂಪರ್ ಅಮೋಲೆಡ್ ಇನ್ಫಿನಿಟಿ ಯು ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ 6000mAh ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯ ಹೊಸ Exynos 9611 ಪ್ರೊಸೆಸರ್ ನೀಡಲಾಗಿದೆ. ಇದರಲ್ಲಿ 4/6GB ಯ LPDDR4X RAM ಮತ್ತು 64/128GB ಯ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಫೋಟೋಗ್ರಾಫಿಗಾಗಿ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಮತ್ತು 5MP ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರನ್ನು ಹೊಂದಿದೆ. ಈ ಫೋನ್‌ನಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್'ಲ್ಲಿ ₹14,980 ರೂಗಳಲ್ಲಿ ಲಭ್ಯವಿದೆ.
ಈ ಫೋನ್ ಗೇಮರ್ಗಳಿಗಾಗಿ ಲಭ್ಯವಿರುವ ಅಸೂಸ್ ಕಂಪನಿ ಅತ್ಯುತ್ತಮ ಫೋನ್ Asus ROG Phone II ಆಗಿದೆ. ಈ ಫೋನ್ 1080×2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.59 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ ಹೈಪರ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು ಫೋನ್‌ನಲ್ಲಿ ಟೈಪ್-ಸಿ ಪೋರ್ಟ್ ಲಭ್ಯವಿದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್ ನೀಡಲಾಗಿದ್ದು ಇದರಲ್ಲಿ 8/12GB ಯ RAM ಮತ್ತು 128/512GB ಯ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಸುಮಾರು 512GB ಇಂಟರ್ನಲ್ ಸ್ಟೋರೇಜ್ ವಿಸ್ತರಿಸಬವುದುದಾದ ಸಾಮರ್ಥ್ಯ ಹೊಂದಿದೆ. ಫೋಟೋಗ್ರಾಫಿಗಾಗಿ ಫೋನ್ 48MP ಮೆಗಾಪಿಕ್ಸೆಲ್ 13MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ ಸೆಲ್ಫಿಗಾಗಿ 24MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್'ಲ್ಲಿ ₹37,999 ರೂಗಳಲ್ಲಿ ಲಭ್ಯವಿದೆ.
ಈ Tecno Spark Power ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ 720×1548 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.35 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಕೇವಲ 4GB ಯ RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೊ ಪಿ 22 ಪ್ರೊಸೆಸರ್ ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ 13MP + 8MP + 2MP AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಈ ಫೋನ್ ಸೆಲ್ಫಿಗಾಗಿ 13MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್'ಲ್ಲಿ ₹8,499 ರೂಗಳಲ್ಲಿ ಲಭ್ಯವಿದೆ.