2020 ರಲ್ಲಿ ನೀವು ಈವರೆಗೆ ಬಿಡುಗಡೆಯಾಗಿರುವ ಫೋನಗಳಲ್ಲಿ 10,000 ಇಟ್ಕೊಂಡು ಯಾವ ಫೋನ್ ಖರೀದಿಸಬೇಕು ಅನ್ನೋ ಗೊಂದಲದಲ್ಲಿದ್ದರೆ ನಾನು ನಿಮಗೆ ಹೆಚ್ಚು ಕಡಿಮೆ ನಿಮಗೆ ಮನಸ್ಸಿಗೆ ಮೆಚ್ಚುವ ಆಯ್ಕೆಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ. ನಾನು ಇಲ್ಲಿ ಈ ಫೋನ್ಗಳು ಯಾವ ಯಾವ ವಲಯದಲ್ಲಿ ಎಷ್ಟು ಬೆಸ್ಟ್ ಅನ್ನುವ ಅಂಶಗಳನ್ನು ಮಾತ್ರ ಗುರುತಿಸಿ ಹೇಳ್ತಿನಿ ಯಾಕೆ ಈ ಫೋನ್ಗಳನ್ನ ನೀವು ಖರಿಸಬೇಕು ಅಂಥ ನೀವೇ ನಿರ್ಧಾರ ಮಾಡಬವುದು. ಆದ್ದರಿಂದ ತಪ್ಪದೆ ಲೇಖನವನ್ನು ಪೂರ್ತಿಯಾಗಿ ನೋಡಿ ನಂತರ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ ತಿಳಿಸಿ.
ಈ ಪಟ್ಟಿಯ ಐದನೇ ಸ್ಥಾನದಲ್ಲಿ ಬರುತ್ತೆ Redmi Note 7s ಇದರಲ್ಲಿದೆ 48MP + 5MP AI ಡ್ಯೂಯಲ್ ಕ್ಯಾಮೆರಾ 1.6μm 4-in-1 ಸೂಪರ್ ಪಿಕ್ಸೆಲ್ Sumsung GM1 ಸೆನ್ಸರ್ ಜೊತೆಗೆ ಬರುವ ಈ ಫೋನ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿರುವವರಿಗೆ ನಿರಾಸೆ ಮಾಡೊಲ್ಲ. ಟೈಪ್ ಸಿ ಪೋರ್ಟ್ ಜೊತೆಗೆ 4000mAh ಡಿಸೆಂಟ್ ಬ್ಯಾಟರಿ ಲೈಫ್ ನೀಡುತ್ತೆ. 6.3 ಇಂಚಿನ FHD+ ದೊಡ್ಡ ಡಿಸ್ಪ್ಲೇ ಹೊಂದಿದೆ. ಇದರಲ್ಲಿ Snapdragon 660 ಪ್ರೊಸೆಸರ್ 2.2GHz ಕ್ಲಾಕ್ ಸ್ಪೀಡ್ ನೀಡಲಾಗಿದೆ ಅಂದ್ರೆ ಗೇಮರ್ಗಳಿಗೂ ಇದೊಂದು ಬೆಸ್ಟ್ ಗೇಮಿಂಗ್ ಅಡ್ಡವಾಗಿದೆ. ಈ ಸ್ಮಾರ್ಟ್ಫೋನ್ ಬೆಲೆ ಕೇವಲ ₹8,999 ರೂಗಳು ಮಾತ್ರ.
ಇದರ ನಂತರ ನಾಲ್ಕೇನೆ ಸ್ಥಾನದಲ್ಲಿ Motorola One Macro ಬರುತ್ತೆ ಇಂದಿಗೂ ಮೋಟೊರೋಲ ಫ್ಯಾನ್ಗಳು ಸಾಕಷ್ಟು ಜನರಿದ್ದಾರೆ ಅವರಲ್ಲಿ ನೀವೊಬ್ಬರಾಗಿದ್ದರೆ ಇದನ್ನು ನೀವು ನೋಡಲೇಬೇಕು. ಯಾರ್ಯಾರಿಗೆ ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಬೇಕೋ ಅಂಥವರಿಗಾಗಿ ಸದ್ಯಕ್ಕೆ Motorola One Macro ಬೆಸ್ಟ್. 6.2 ಮ್ಯಾಕ್ಸ್ ವಿಷನ್ HD+ ಡಿಸ್ಪ್ಲೇ ಹೊಂದಿರುವ ಒಳ್ಳೆ ವಿಷಯವಾದರೂ ಮೀಡಿಯಾ ಟೆಕ್ ಹೆಲಿಯೋ P70 ಪ್ರೊಸೆಸರ್ ಜೊತೆಗೆ 2.0GHz ಕ್ಲಾಕ್ ಸ್ಪೀಡ್ ನೀಡುತ್ತೆ ಅಂದ್ರೆ ಗೇಮರ್ಗಳಿಗೆ ಹೆಚ್ಚಿನ ನಿರೀಕ್ಷೆಗಳಿಗೆ ಅವಕಾಶವಿಲ್ಲ. ಈ ಫೋನ್ ಫೋಟೋಗ್ರಾಫಿಯಲ್ಲಿ ಅದರಲ್ಲೂ ಮ್ಯಾಕ್ರೋ ಶಾಟ್ಗಳನ್ನು ಪಡೆಯುವವರಿಗೆ ಗ್ರೇಟ್ ಚಾಯ್ಸ್ ಅನ್ನೋದರಲ್ಲಿ ಎರಡು ಮಾತಿಲ್ಲ. ಕ್ಯಾಮೆರಾ ವಿಭಾಗದಲ್ಲಿ ಸದ್ಯಕ್ಕೆ ಬೆಸ್ಟ್ ಇನ್ ಕ್ಲಾಸ್ ಆಗಿದ್ದು ವಿಶೇಷವಾಗಿ 2MP ಮ್ಯಾಕ್ರೋ ವಿಷನ್ ಕ್ಯಾಮೆರಾ ಲೆನ್ಸ್ ನೀಡಲಾಗಿದೆ. ಸಾಮಾನ್ಯ ಕ್ಯಾಮೆರಗಳಿಗೆ ಹೋಲಿಸಿದರೆ ಇದರಲ್ಲಿ 5x ಹತ್ತಿರದಿಂದ ಶಾಟ್ಗಳನ್ನು ಕ್ಲಿಯರಾಗಿ ಪಡೆಯಬವುದು. ಈ ಶಾಟ್ಗಳನ್ನು ಇನ್ನಷ್ಟು ಉತ್ತಮಗೊಳಿಸಲು ಲೇಸರ್ ಆಟೋಫೋಕಸ್ ಜೊತೆಗೆ ToF ಸಹ ಇದರಲ್ಲಿ ನೀಡಲಾಗಿದೆ. ಇದರ ಬೆಲೆ ಕೇವಲ ₹9,999 ರೂಗಳು ಮಾತ್ರ.
ಮೂರನೇಯದಾಗಿ ಈ ವರ್ಷ ಬಿಡುಗಡೆಯಾದ ರಿಯಲ್ಮೀಯ Realme 5i ಸ್ಮಾರ್ಟ್ಫೋನ್ ಇದರ ಬೆಲೆ ಕೇವಲ 8,999 ರೂಗಳು. ಯಾಕಿ ಈ ಫೋನ್ ಮೂರನೇ ಸ್ಥಾನಕ್ಕೆ ಬರುತ್ತೆ ಅಂದ್ರೆ ಮೊದಲಿಗೆ ಇದರ 6.53 ಇಂಚಿನ HD+ ದೊಡ್ಡ ಡಿಸ್ಪ್ಲೇ ಮತ್ತು ಸಿಸ್ಟಮ್ ವೈಡ್ ಡಾರ್ಕ್ ಮೂಡ್ ಇದರಿಂದ ನಿಮ್ಮ ಫೋನಿನ 5000mAh ಬ್ಯಾಟರಿ ಲೈಫ್ ಹೆಚ್ಚು ಉಳಿತಾಯ ಕಾಣುತ್ತದೆ. ಎರಡನೇಯದಾಗಿ Snapdragon 665 ಪ್ರೊಸೆಸರ್ 2.0GHz ಕ್ಲಾಕ್ ಸ್ಪೀಡ್ ಜೊತೆಗೆ ಈ ಫೋನ್ LPDDR4x RAM ಸಪೋರ್ಟ್ ಮಾಡುತ್ತದೆ. ಇದರಿಂದ ಫೋನಿನ ಪರ್ಫಾಮೆನ್ಸ್ ಉತ್ತಮವಾಗಿರುತ್ತೆ. ಇದರಲ್ಲಿ 12MP + 8MP + 2MP + 2M ಡಿಸೆಂಟ್ ಕ್ವಾಡ್ ಕ್ಯಾಮೆರಾ ಒಳಗೊಂಡಿದೆ. ಈ Realme 5i ಸ್ಮಾರ್ಟ್ಫೋನ್ ರಿವರ್ಸ್ ಚರ್ಗಿನ್ಗ್ ಸಪೋರ್ಟ್ ಮಾಡುತ್ತದೆ.
ಎರಡನೇ ಸ್ಥಾನಕ್ಕೆ ಬರುತ್ತೆ Redmi Note 8 ನೀವು ಅನ್ಕೊಬವುದು Redmi Note 8 ಸದ್ಯಕ್ಕೆ 10000 ಬರುವ ಬೆಸ್ಟ್ ಫೋನ್ ಅಂಥ. ಆದರೆ ಇದಕ್ಕಿಂತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ನಂಬರ್ 1 ಫೋನಲ್ಲಿದೆ. Redmi Note 8 Snapdragon 665 ಪ್ರೊಸೆಸರ್ 2.0GHz ಕ್ಲಾಕ್ ಸ್ಪೀಡ್ ಅಡ್ರಿನೊ 610 ಜೊತೆಗೆ LPDDR4x RAM ಸಪೋರ್ಟ್ ಮಾಡುತ್ತದೆ. ಅಂದ್ರೆ ಗೇಮರ್ಗಳಿಗೆ ಡಿಸೆಂಟ್ ಫೋನ್ ಅನ್ನಬವುದು ಅಷ್ಟೇ. ಈ ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಅಂದ್ರೆ 48MP + 8MP + 2MP + 2MP ಡಿಸೆಂಟ್ ಕ್ಯಾಮೆರಾ ಹೊಂದಿದೆ. ಇದು ಎರಡನೇ ಸ್ಥಾನಕ್ಕೆ ಬರಲು ಕಾರಣ ಅಂದ್ರೆ 4000mAh ಬ್ಯಾಟರಿ ಜೊತೆಗೆ 18w ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. 6.3 ಇಂಚಿನ ಫುಲ್ ಹೈ ಡೆಫಿನಿಷನ್ ಡಿಸ್ಪ್ಲೇ TUV Rheinland ಹೊಂದಿದೆ. P2i ಸಪೋರ್ಟ್ ಮಾಡುತ್ತದೆ. ಕೊನೆಯದಾಗಿ ಫೋನಿನ ಹಿಂದೆ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಇದರ ಬೆಲೆ ಕೇವಲ ₹9,999 ರೂಗಳು ಮಾತ್ರ.
ಕೊನೆಯದಾಗಿ ಮೊದಲ ಸ್ಥಾನಕ್ಕೆ ಬರುತ್ತೆ ರಿಯಲ್ಮಿಯ Realme 3 Pro. ಈಗ ನಾನು ನಿಮಗೆ ನೇರವಾಗಿ ಈ ಫೋನ್ 10,000 ರೂಗಳಲ್ಲಿ ಯಾಕೆ ಬೆಸ್ಟ್ ಅನ್ನೋ ಅಂಶಗಳನ್ನು ಹೇಳ್ತಿನಿ. ಇದರ ಮೊದಲಿನ ನಾಲ್ಕು ಫೋನ್ಗಳು 6 Gen ಪ್ರೊಸೆಸರ್ ಹೊಂದಿದ್ದರೆ ಇದೇ ಪ್ರೈಸ್ ರೇಂಜಲ್ಲಿ ಬರುವ ಈ Realme 3 Pro 7 Gen ಪ್ರೊಸೆಸರ್ ನೀಡುತ್ತೆ ಅಂದ್ರೆ Snapdragon 710 ಪ್ರೊಸೆಸರ್ 2.0GHz ಕ್ಲಾಕ್ ಸ್ಪೀಡ್ ಜೊತೆಗೆ LPDDR4x RAM ಒಳಗೊಂಡಿದೆ. PUBG, Rules Of Survival, Asphalt 9 ನಂತಹ ಹೈ ಗ್ರಾಫಿಕ್ ಗೇಮ್ಗಳನ್ನು ಸ್ಮೋತಾಗಿ ಆಡಲು ಅನುಮತಿಸುತ್ತದೆ. ನಿಮಗೆ 10000 ರೂಗಳೊಳಗೆ ಅತ್ಯುತ್ತಮವಾದ ಕ್ಯಾಮೆರಾ ಫೋನ್ ಬೇಕಿದ್ದರೆ Realme 3 Pro ಬೆಸ್ಟ್ ಆಯ್ಕೆಯಾಗಿದೆ. ಏಕೆಂದರೆ Realme 3 Pro ಫೋನಲ್ಲಿ Sony IMX 519 ಸೆನ್ಸರ್ ನೀಡಲಾಗಿದೆ. ಸಾಮನ್ಯವಾಗಿ ಇದನ್ನು 15-20 ಸಾವಿರ ಶ್ರೇಣಿಯ ಫೋನಗಳಲ್ಲಿ ನೀಡಲಾಗುತ್ತೆ. ಅಲ್ಲದೆ ಫ್ರಂಟಲ್ಲಿ 25MP ಸೆನ್ಸರ್ ನೀಡಲಾಗಿದೆ. ಕೊನೆಯಾದಾಗಿ 4045mAh ಬ್ಯಾಟರಿ 5V 4A ಜೊತೆಗೆ ಬರುತ್ತದೆ. ಒಟ್ಟಾರೆಯಾಗಿ ಈ ಸ್ಮಾರ್ಟ್ಫೋನ ಸೈಡ್ ಹೊಡೆಯೋಕೆ ಸದ್ಯಕ್ಕೆ ಯಾವುದೇ ಫೋನ್ ಈ ಬಜೆಟಲ್ಲಿ ಲಭ್ಯವಿಲ್ಲ.