ಭಾರತದಲ್ಲಿ ಲಭ್ಯವಿರುವ 15,000 ಒಳಗಿನ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳು – 2020

ಭಾರತದಲ್ಲಿ ಲಭ್ಯವಿರುವ 15,000 ಒಳಗಿನ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳು – 2020
HIGHLIGHTS

ಇವು ಮಲ್ಟಿ ಕ್ಯಾಮೆರಾ ಸೆಟಪ್, ದೊಡ್ಡ ಬ್ಯಾಟರಿ ಮತ್ತು ಫಾಸ್ಟ್ ಪ್ರೊಸೆಸರ್ ಜೊತೆಗೆ ಹೈ ರಿಫ್ರೆಶ್ ಡಿಸ್ಪ್ಲೇ ರೇಟ್ ಸಹ ನೀಡುತ್ತಿವೆ

ಈ ರೆಂಜಿನ ಸ್ಮಾರ್ಟ್ಫೋನ್ಗಳು ಸಾಕಾಗುವಷ್ಟು ಉತ್ತಮವಾದ ಹಾರ್ಡ್ವೇರ್ಗಳ ಮೂಲಕ ಗೇಮಿಂಗ್ ಅಥವಾ ಬ್ರೌಸಿಂಗ್ ಮಾಡಲು ಬಳಕೆದಾರರಿಗೆ ಸ್ಮೂತ್ ಮತ್ತು ಗ್ರೇಟ್ ಫೀಲ್ ಅನುಭವ ನೀಡುತ್ತಿವೆ.

ಭಾರತದಲ್ಲಿ ಬಜೆಟ್ ಸ್ಮಾರ್ಟ್ಫೋನ್ಗಳು ಯಾವಾಗ್ಲೂ ಜನಪ್ರಿಯತೆಯೊಂದಿಗೆ ಹೆಜ್ಜೆ ಹಾಕ್ತಾನೆ ಇರುತ್ವೇ. ಅದರಲ್ಲೂ 15,000 ಒಳಗಿನ ಸ್ಮಾರ್ಟ್ಫೋನ್ಗಳು ಅತಿ ಹೆಚ್ಚು ಜನರು ಚೆಕ್ ಮಾಡ್ತಿರ್ತಾರೆ. ಏಕೆಂದರೆ ಈ ರೆಂಜಿನ ಸ್ಮಾರ್ಟ್ಫೋನ್ಗಳು ಸಾಕಾಗುವಷ್ಟು ಉತ್ತಮವಾದ ಹಾರ್ಡ್ವೇರ್ಗಳ ಮೂಲಕ ಗೇಮಿಂಗ್ ಅಥವಾ ಬ್ರೌಸಿಂಗ್ ಮಾಡಲು ಬಳಕೆದಾರರಿಗೆ ಸ್ಮೂತ್ ಮತ್ತು ಗ್ರೇಟ್ ಫೀಲ್ ಅನುಭವ ನೀಡುತ್ತಿವೆ. 2020 ರಲ್ಲಿ ಬಿಡುಗಡೆಯಾದ ಕೆಲವು ಬಜೆಟ್ ಸ್ಮಾರ್ಟ್ಫೋನ್ಗಳು ಫ್ಲಾಗ್'ಶಿಪ್ ಸ್ಮಾರ್ಟ್ಫೋನ್ಗಳ ಫೀಚರ್ಗಳನ್ನು ಒಳಗೊಂಡಿವೆ. ಅಂದ್ರೆ ಮಲ್ಟಿ ಕ್ಯಾಮೆರಾ ಸೆಟಪ್, ದೊಡ್ಡ ಬ್ಯಾಟರಿ ಮತ್ತು ಫಾಸ್ಟ್ ಪ್ರೊಸೆಸರ್ ಜೊತೆಗೆ ಹೈ ರಿಫ್ರೆಶ್ ಡಿಸ್ಪ್ಲೇ ರೇಟ್ ಸಹ ನೀಡುತ್ತಿವೆ. ಹಾಗಾದ್ರೆ 2020 ರಲ್ಲಿ ಬಿಡುಗಡೆಯಾದ 15,000 ಒಳಗಿನ ಬಜೆಟ್ ಸ್ಮಾರ್ಟ್ಫೋನ್ಗಳನೊಮ್ಮೆ ನೋಡೋಣ. ಗಮನದಲ್ಲಿಡಿ ಈ ಎಲ್ಲ ಫೋನ್ಗಳು GST ಹೆಚ್ಚುವರಿಯಾದ ನಂತರವು 15,000 ರೂಗಳೊಳಗೆ ಬರುವ ಫೋನ್ಗಳಾಗಿವೆ.

ಈ ಪಟ್ಟಿಯ ಐದನೇ ಸ್ಥಾನದಲ್ಲಿ Samsunsg Galaxy M30s ಬರುತ್ತದೆ. ಏಕೆಂದರೆ ನಿಮಗೊಂದು ದೊಡ್ಡ ಮತ್ತು ಧೀರ್ಘಕಾಲದವರೆಗಿನ ಬ್ಯಾಟರಿ ಲೈಫ್ ಮತ್ತು ಗ್ರೇಟ್ ಡಿಸ್ಪ್ಲೇ ಬೇಕಿದ್ದರೆ ಇದು ನಿಮಗಾಗಿರುವ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ 6000mAh ಬ್ಯಾಟರಿ, ಉತ್ತಮವಾದ 48MP ಟ್ರಿಪಲ್ ಕ್ಯಾಮೆರಾ ಮತ್ತು 6.4 ಇಂಚಿನ ಸೂಪರ್ ಅಮೋಲೆಡ್ ಇನ್ಫಿನಿಟಿ ಯೂ ಡಿಸ್ಪ್ಲೇ ಫೀಚರ್ಗಳು ಇದರ ಹೈಲೈಟ್ ಆಗಿವೆ. ಇದರಲ್ಲಿ Exynos 9611 ಚಿಪ್ ನೀಡಲಾಗಿದ್ದು ಈ ಸ್ಮಾರ್ಟ್ಫೋನ್ ‎4GB RAM /‎64GB‎ ಸ್ಟೋರೇಜ್ ವೇರಿಯಂಟ್ ₹14,999 ರೂಗಳಲ್ಲಿ ಲಭ್ಯವಿದೆ.

ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ Realme 5 Pro ಬರುತ್ತದೆ. ಏಕೆಂದರೆ ಇದು ಪ್ರೀಮಿಯಂ ಡಿಸೈನ್ ಜೊತೆಗೆ ಗುಡ್ ಲುಕಿಂಗ್ ಫೋನ್ ಇದಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ Snapdragon 712 SoC ನಿಂದ ನಡೆಯುವ ಇದು ದಿನನಿತ್ಯದ ಕಾರ್ಯಗಳಿಗಾಗಿ ಸಾಕಷ್ಟು ಕಾರ್ಯಕ್ಷಮತೆಯನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಈ ಫೋನ್‌ನ 4035mAh ಬ್ಯಾಟರಿಯನ್ನು ಹೊಂದಿದ್ದು ಇದರ ಬಾಕ್ಸ್ ಜೊತೆಯಲ್ಲೆ 20W ಚಾರ್ಜರ್‌ನೊಂದಿಗೆ ಬರುತ್ತದೆ. ಇದು ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು ಅದರ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ನೀಡುತ್ತದೆ. ಒಟ್ಟಾರೆಯಾಗಿ ಡಿಸೆಂಟ್ ಪ್ಯಾಕೆಜ್ ಫೋನ್ ಇದಾಗಿದೆ.

ಈ ಪಟ್ಟಿಯ ಮೂರನೇ ಸ್ಥಾನದಲ್ಲಿ Poco  F1 ಬರುತ್ತದೆ. ನಮಗೇಲ್ಲಾ ತಿಳಿದಿರುವ ಹಾಗೆ ಇದೊಂದು ಹಳೆಯ ಮೋಡಲ್ ಆಗಿದೆಯಾದರು ಈವರೆಗೆ Snapdragon 845 ಚಿಪ್ ಜೊತೆಗೆ ಸ್ಮಾರ್ಟ್ಫೋನ್ ವಲಯದಲ್ಲಿ ತಲೆ ಎತ್ತಿ ನಿಂತಿದೆ. ಈ ಬೆಲೆಯಲ್ಲಿ ಬಿಲ್ಡ್ ಡಿಸೈನ್ ಬಿಟ್ಟು ಇದನ್ನು ಸೈಡ್ ಹೊಡೆಯೋಕೆ ಬೇರೆ ಯಾವುದೇ ಫೋನ್ಗಳು ಬಂದಿಲ್ಲ. 4000mAh ಬ್ಯಾಟರಿಯೊಂದಿಗೆ 3.0 ಕ್ವಿಕ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಇದು 6 ಮತ್ತು 8GB LPDDR4X RAM ಸಪೋರ್ಟ್ ಮಾಡುತ್ತದೆ. ಡುಯಲ್ ರೇರ್ ಮತ್ತು 20MP ಸೆಲ್ಫಿ ಕ್ಯಾಮೆರಾದೊಂದಿಗೆ ಸ್ಮಾರ್ಟ್ಫೋನ್ ವಲಯದಲ್ಲಿ ಗೇಮರ್ಗಳಿಗೆ ಈಗಲೂ 15,000 ರೂಗಳೊಳಗೆ ಇದೊಂದು ಅದ್ದೂರಿಯ ಸ್ಮಾರ್ಟ್ಫೋನ್ ಎನ್ನೋದರಲ್ಲಿ ಎರಡು ಮಾತಿಲ್ಲ.

ಈ ಪಟ್ಟಿಯ ಎರಡನೇ ಸ್ಥಾನದಲ್ಲಿ Realme 6 ಬರುತ್ತದೆ. ಏಕೆಂದರೆ ಇದು Redmi Note 8 Pro ಸ್ಮಾರ್ಟ್ಫೋನಲ್ಲಿರುವ ಎಲ್ಲವನ್ನು ಇದು ಒಳಗೊಂಡಿದೆ. 6.53 ಇಂಚಿನ Full HD+ 90Hz ಅಲ್ಟ್ರಾ ಸ್ಮೂತ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು ಸಹ MediaTek Helio G90T ಪ್ರೊಸೆಸರ್ ಜೊತೆ ರನ್ ಮಾಡುತ್ತದೆ. 64MP ಕ್ವಾಡ್ ಕ್ಯಾಮೆರಾ ಸೆಟಪ್ ಜೊತೆಗೆ ಫ್ರಂಟಲ್ಲಿ 20MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದಷ್ಟೇ ಅಲ್ಲದೆ 4300mAh ಬ್ಯಾಟರಿಯೊಂದಿಗೆ 30w ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವ ಟೆಕ್ನಾಲಜಿ ಹೊಂದಿದೆ.

ಈ ಪಟ್ಟಿಯ ಮೊದಲ ಸ್ಥಾನದ ಫೋನನ್ನು ನೀವೀಗಾಗಲೇ ಊಹಿಸಿರಬವುದು. ಹೌದು ಸದ್ಯದ ಮಾರುಕಟ್ಟೆಯಲ್ಲಿ Xiaomi Redmi Note 9 Pro ಭಾರತದಲ್ಲಿ ಲಭ್ಯವಿರುವ 15,000 ಒಳಗಿನ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಯಾಕಪ್ಪ ಅಂದ್ರೆ ಈ ಫೋನ್ ಈ ಬಜೆಟಲ್ಲಿ ಬರುವ ಎಲ್ಲಾ ಸ್ಮಾರ್ಟ್ಫೋನ್ಗಳನ್ನು ಪಕ್ಕಕ್ಕೀಡುತ್ತದೆ. ಇದು ಪ್ರತಿಯೊಂದು ವಿಭಾಗದಲ್ಲೂ ತನ್ನನು ವಿಜೇತನಾಗಿ ಮಾಡ್ಕೊಂಡಿದೆ. ಇದು Snapdragon 720G ಚಿಪ್ ಪ್ರೊಸೆಸರ್ ಜೊತೆಗೆ ನಡೆಯುತ್ತದೆ. 6.67 ಇಂಚಿನ FHD+ HDR ಡಿಸ್ಪ್ಲೇಯನ್ನು ಒಳಗೊಂಡಿದೆ. ಅಲ್ಲದೆ 48MP ಕ್ವಾಡ್ ಕ್ಯಾಮೆರಾ ಅಲ್ಟ್ರಾ ವೈಡ್,  ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಸಪೋರ್ಟ್ ಮಾಡುತ್ತದೆ. ಅದಷ್ಟೇ ಅಲ್ಲದೆ 5020mAh ಬ್ಯಾಟರಿಯಾಂನಿ ಮತ್ತಷ್ಟು ಬೂಸ್ಟ್ ಮಾಡಲು 18w ಫಾಸ್ಟ್ ಚಾರ್ಜ್ ಟೆಕ್ನಾಲಜಿಯ ಅಡಾಪ್ಟರ್ ಬಾಕ್ಸ್ ಒಳಗೆ ಲಭ್ಯವಿದೆ. ಈ ಮೂಲಕ ಒಟ್ಟಾರೆಯಾಗಿ 15,000 ಒಳಗಿನ ಆಲ್ ರೌಂಡರ್ ಪ್ಲೇಯರ್ ಆಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo