ಭಾರತದಲ್ಲಿ ಕೇವಲ 10,000 ರೂಗಳೊಳಗೆ ಲಭ್ಯವಿರುವ ಅದ್ದೂರಿಯ ಸ್ಮಾರ್ಟ್ಫೋನ್ಗಳು – 2019

Updated on 11-Mar-2019
HIGHLIGHTS

ಇದರ 3+32GB ವೇರಿಯಂಟ್ ಕೇವಲ 8,990 ರೂಗಳಲ್ಲಿ ಅಮೆಝೋನ್ ಅಲ್ಲಿ ಲಭ್ಯವಿದೆ.

Samsung Galaxy M10 (Ocean Blue, 2+16GB)
ಭಾರತದಲ್ಲಿ ಸ್ಯಾಮ್ಸಂಗ್ ತನ್ನ M ಸರಣಿಯನ್ನು ಹೊರ ತಂದಿದ್ದು ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಮುಂದೆ ನಿಂತಿದೆ. ಈ ಹೊಸ Samsung Galaxy M10 ಸ್ಮಾರ್ಟ್ಫೋನ್ 6.22 ಇಂಚಿನ HD+ ಇನ್ಫಿನಿಟಿ V ಆಕಾರದ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಇದರ 13MP+5MP ಅಲ್ಟ್ರಾ ವೈಡ್ ಆಂಗಲ್ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅಲ್ಲದೆ ಫ್ಯಾವೆ ಅನ್ಲಾಕ್ ಫೀಚರೊಂದಿಗೆ 3400mAh ಬ್ಯಾಟರಿಯನ್ನು ಹೊಂದಿದೆ. ಇದರ 2GB-16GB ವೇರಿಯಂಟ್ ಕೇವಲ 7999 ರೂಗಳಲ್ಲಿ ಅಮೆಝೋನ್ ಅಲ್ಲಿ ಲಭ್ಯವಿದೆ. 

Samsung Galaxy M10 (Ocean Blue, 3+32GB)
ಮೇಲಿನ ಸ್ಮಾರ್ಟ್ಫೋನ್ ಅಂತೆಯೇ ಅದೇ ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಮುಂದೆ ನಿಂತಿದ್ದು ಈ ಹೊಸ Samsung Galaxy M10 ಸ್ಮಾರ್ಟ್ಫೋನ್ 6.22 ಇಂಚಿನ HD+ ಇನ್ಫಿನಿಟಿ V ಆಕಾರದ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಇದರ 13MP+5MP ಅಲ್ಟ್ರಾ ವೈಡ್ ಆಂಗಲ್ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅಲ್ಲದೆ ಫ್ಯಾವೆ ಅನ್ಲಾಕ್ ಫೀಚರೊಂದಿಗೆ 3400mAh ಬ್ಯಾಟರಿಯನ್ನು ಹೊಂದಿದೆ. ಇದರ 3+32GB ವೇರಿಯಂಟ್ ಕೇವಲ 8,990 ರೂಗಳಲ್ಲಿ ಅಮೆಝೋನ್ ಅಲ್ಲಿ ಲಭ್ಯವಿದೆ. 

Redmi 6 Pro (Black, 3GB RAM, 32GB Storage)
ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಕಂಪನಿಯ ಈ ಸ್ಮಾರ್ಟ್ಫೋನ್ Redmi 6 Pro ಬಜೆಟ್ ರೇಂಜಲ್ಲಿ ಉತ್ತಮವಾಗಿದೆ. ಇದರ ಫೀಚರ್ ಮಾಹಿತಿ ಹೇಳಬೇಕೆಂದರೆ 5.84 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಈ ಫೋನ್ ಹೊಂದಿದೆ. ಅಲ್ಲದೆ ಇದರಲ್ಲಿದೆ 12MP + 5MP AI ಡುಯಲ್ ಕ್ಯಾಮೆರಾ ಸೆಟಪ್ ಮತ್ತು ಫ್ರಂಟಲ್ಲಿ 5MP ನೀಡಲಾಗದೆ. ಈ ಸ್ಮಾರ್ಟ್ಫೋನಲ್ಲಿ ನಿಮಗೆ 4000mAH ಬ್ಯಾಟರಿಯನ್ನು ನೀಡಲಾಗಿದೆ. ನೀವು 256GB ವರೆಗೆ ಮೈಕ್ರೋ SD ಕಾರ್ಡ್ ಬಳಸಿ ವಿಸ್ತರಿಸಬವುದು. 

Honor 8C (Blue, 4GB RAM, 32GB Storage)
ಇದು ಹುವಾವೆಯ ಸಬ್ ಬ್ರಾಂಡ್ ಆಗಿರುವ ಹಾನರ್ ಕಂಪನಿಯ Honor 8C ಸ್ಮಾರ್ಟ್ಫೋನ್ ಡಿಸೆಂಟ್ ಲುಕ್ ಮತ್ತು ದೊಡ್ಡ ಸ್ಕ್ರೀನ್ ಮತ್ತು ದೊಡ್ಡ ಬ್ಯಾಟರಿಯನ್ನು ನೀಡುತ್ತದೆ. ಇದು 6.26 ಇಂಚಿನ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ +EMUI 8.2 ಲೈಟ್ v8.1 ಆಪರೇಟಿಂಗ್ ಸಿಸ್ಟಮಿನೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಏಗಾಗೇ ಹೇಳಿರುವಂತೆ ದೊಡ್ಡ ಬ್ಯಾಟರಿ ಅಂದ್ರೆ 4000mAH ಹೊಂದಿದೆ. 

Moto E5 Plus (Fine Gold, 5000mAh battery)
ನೀವೊಬ್ಬ ಗೇಮರ್ ಅಥವಾ ದೊಡ್ಡ ಬ್ಯಾಟರಿ ಪ್ರೇಮಿಯಾಗಿದ್ದು ಕೇವಲ 10,000 ರೂಗಳೊಳಗೆ ಅದ್ದೂರಿ ಫೋನನ್ನು ಹುಡುಕುತ್ತಿದ್ದರೆ ಇದು ನಿಮಗಾಗಿದೆ. 6 ಇಂಚಿನ HD+ ಮ್ಯಾಕ್ಸ್ ವಿಷನ್ IPS LCD ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 430 ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ ನಿಮಗೆ 5000mAH ಬ್ಯಾಟರಿಯನ್ನು ಒಳಗೊಂಡಿದೆ. ಇದರ ಫ್ರಂಟಲ್ಲಿ 5MP ಸೆಲ್ಫಿ ಕ್ಯಾಮೆರಾದೊಂದಿಗೆ LED ಫ್ಲಾಶ್ ಸಹ ಹೊಂದಿದೆ. 

Honor 9N (Sapphire Blue, 32 GB) (3 GB RAM)
ಇದು ಸಹ ಹುವಾವೆಯ ಸಬ್ ಬ್ರಾಂಡ್ ಆಗಿರುವ ಹಾನರ್ ಕಂಪನಿಯ Honor 9N ಸ್ಮಾರ್ಟ್ಫೋನ್ ಬಜೆಟ್ ರೇಂಜಲ್ಲಿ ಬೆಸ್ಟ್ ಕ್ಯಾಮೆರಾದ ಫೋನಾಗಿದೆ. 13MP + 2MP ಡುಯಲ್ ರೇರ್ ಕ್ಯಾಮೆರಾವನ್ನು ಈ ಸ್ಮಾರ್ಟ್ಫೋನ್ ಹೊಂದಿದ್ದು 16MP ಫ್ರಂಟ್ ಕ್ಯಾಮೆರಾ ಹೊಂದಿದೆ. 5.84 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಫೋನ್ 3000mAh ಬ್ಯಾಟರಿಯನ್ನು ಹೊಂದಿದೆ. 

Nokia 3.1 Plus (Blue, 3GB RAM, 32GB Storage)
ಭಾರತದಲ್ಲಿ ನೋಕಿಯಾ ಕಂಪನಿಯ ಸ್ಮಾರ್ಟ್ಫೋನ್ ಕೇವಲ 10,000 ರೂಗಳೊಳಗೆ ಅದ್ದೂರಿ ಫೋನನ್ನು ಹುಡುಕುತ್ತಿದ್ದರೆ ಈ Nokia 3.1 Plus ಸ್ಮಾರ್ಟ್ಫೋನ್ ಒಮ್ಮೆ ನೋಡಲೇಬೇಕು. 6 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ ಅಲ್ಲದೆ 1.5GHz ಮೀಡಿಯಾಟೆಕ್ MT6762 ಓಕ್ಟಾ ಕೋರ್ ಪ್ರೊಸೆಸರೊಂದಿಗೆ ಬರುತ್ತದೆ. ಕೊನೆಯದಾಗಿ 3500mAH ಬ್ಯಾಟರಿಯನ್ನು ಹೊಂದಿದೆ.      
       
Realme C1 (3Gb+32GB){Navy Blue}
ಒಪ್ಪೋ ಕಂಪನಿಯ ಸಬ್ ಬ್ರಾಂಡ್ ಆಗಿರುವ ರಿಯಲ್ಮಿ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಈ Realme C1 ಸ್ಮಾರ್ಟ್ಫೋನ್ ಒಂದಾಗಿದೆ. ಇದರಲ್ಲಿದೆ 6.2 ಇಂಚಿನ HD+ ನಾಚ್ ಡಿಸ್ಪ್ಲೇಯೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. 13MP + 2MP ಡುಯಲ್ ರೇರ್ ಕ್ಯಾಮೆರಾವನ್ನು ಹೊಂದಿದೆ. ಇದರ ಫ್ರಂಟಲ್ಲಿ 5MP ನೀಡಲಾಗಿದೆ. ಇದರಲ್ಲಿ ನಿಮಗೆ 4230mAh ಬ್ಯಾಟರಿ ಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :