ಕೇವಲ 7,000 ರೂಗಿಂತ ಕಡಿಮೆ ಬೆಲೆಯಲ್ಲಿ ಭಾರಿ ಫೀಚರ್‌ಗಳೊಂದಿಗೆ ಈ ಅದ್ದೂರಿಯ ಸ್ಮಾರ್ಟ್ಫೋನ್ಗಳು ಲಭ್ಯ

ಕೇವಲ 7,000 ರೂಗಿಂತ ಕಡಿಮೆ ಬೆಲೆಯಲ್ಲಿ ಭಾರಿ ಫೀಚರ್‌ಗಳೊಂದಿಗೆ ಈ ಅದ್ದೂರಿಯ ಸ್ಮಾರ್ಟ್ಫೋನ್ಗಳು ಲಭ್ಯ
HIGHLIGHTS

ಇವು ಕೇವಲ 7,000 ರೂಗಿಂತ ಕಡಿಮೆ ಬೆಲೆಯಲ್ಲಿ ಭಾರಿ ಫೀಚರ್‌ಗಳೊಂದಿಗೆ ಬರುತ್ತದೆ.

ಈ ಫೋನ್ 13MP + 13MP ಮೆಗಾಪಿಕ್ಸೆಲ್ ಹಿಂಭಾಗ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯ.

Redmi 9A

ಈ Redmi 9A ಸ್ಮಾರ್ಟ್‌ಫೋನ್ ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದರ 2GB RAM + 32GB ಸ್ಟೋರೇಜ್ ಮಾದರಿಯ ಬೆಲೆ 6,799 ರೂಗಳಾಗಿದ್ದು ಇದರ 3GB RAM + 32GB ಸ್ಟೋರೇಜ್ ಮಾದರಿಯ ಬೆಲೆ 7,499 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಮಿಡ್ನೈಟ್ ಬ್ಲ್ಯಾಕ್, ನೇಚರ್ ಗ್ರೀನ್ ಮತ್ತು ಸೀ ಬ್ಲೂ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 5000mAh ಸ್ಟ್ರಾಂಗ್ ಬ್ಯಾಟರಿ ಈ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಫೋಟೋಗ್ರಾಫಿಗಾಗಿ 13MP ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 5MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ, ಫೋನ್‌ನ ಮುಂಭಾಗದ ಕ್ಯಾಮೆರಾ ಸಹ ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.

Redmi 6A

ಈ ಹೊಸ Redmi 6A ಇದು ಬಜೆಟ್ ವಿಭಾಗದಲ್ಲಿ Xiaomi ಕಂಪನಿಯ ಉತ್ತಮವಾದ ಹ್ಯಾಂಡ್‌ಸೆಟ್ ಆಗಿದೆ. ಇದು ಅದರ ಬೆಲೆಯಲ್ಲಿ ಸಮಂಜಸವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. Redmi 6A ಬ್ಯಾಟರಿ ದೊಡ್ಡ ಬಾಳಿಕೆ ಹೊಂದಿದೆ ಮತ್ತು HD ವಿಡಿಯೋ ಲೂಪ್ ಪರೀಕ್ಷೆಯಲ್ಲಿ ಫೋನ್ 13 ಗಂಟೆಗಳ 22 ನಿಮಿಷಗಳ ಕಾಲ ನಡೆಯಿತು. Xiaomi ಕಂಪನಿಯ ಈ ಫೋನ್‌ ಎರಡು ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ – 2GB RAM + 16GB ಸ್ಟೋರೇಜ್ ಮತ್ತು 2GB RAM + 32GB ಸ್ಟೋರೇಜ್ ಈ ಎರಡೂ ರೂಪಾಂತರಗಳು 7,000 ರೂಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.

Realme C2

ಈ ರಿಯಲ್ ಮಿಯ Realme C2 ಸ್ಮಾರ್ಟ್ಫೋನ್ ಬೆಲೆ 5,999 ರೂಗಳಿಂದ ಪ್ರಾರಂಭವಾಗುತ್ತದೆ. 2GB RAM + 16GB ಸ್ಟೋರೇಜ್ ರೂಪಾಂತರಗಳನ್ನು ಈ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಫೋನ್‌ನ 2GB RAM + 32GB ಸ್ಟೋರೇಜ್ ರೂಪಾಂತರದ ಬೆಲೆ 6,999 ರೂಗಳಾಗಿದ್ದು ಇದರ 3GB RAM + 32GB ಸ್ಟೋರೇಜ್ ಮಾದರಿಯನ್ನು 7,999 ರೂಗಳಿಗೆ ಮಾರಾಟ ಮಾಡಲಾಗಿದೆ. ಫೋನ್ ಡೈಮಂಡ್ ಬ್ಲೂ ಮತ್ತು ಡೈಮಂಡ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. Realme C2 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರೈಮರಿ 13 ಮೆಗಾಪಿಕ್ಸೆಲ್‌ ಸೆನ್ಸರ್ ಜೊತೆಗೆ ಲಭ್ಯ.

Samsung Galaxy M01 Core

ಈ Galaxy M01 Core ಸ್ಮಾರ್ಟ್‌ಫೋನ್ ಅನ್ನು ಭಾರತದ ಅತ್ಯಂತ ಉತ್ತಮ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಮಾಡಲಾಗಿದೆ. Samsung Galaxy M01 Core ಸ್ಮಾರ್ಟ್‌ಫೋನ್‌ನ 1GB RAM + 16GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 5,499 ರೂಗಳಾಗಿವೆ. ಇದರ 2GB RAM + 32GB ಸ್ಟೋರೇಜ್ ರೂಪಾಂತರದ ಬೆಲೆ 6,499 ರೂಗಳಾಗಿವೆ. ಈ ಫೋನ್ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಫೋನ್ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 3000mAH ನ ಶಕ್ತಿಯುತ ಬ್ಯಾಟರಿಯನ್ನು ಪಡೆದಿದೆ.

Tecno Spark Go 2020

ಈ ಸ್ಮಾರ್ಟ್ಫೋನ್ ಬೆಲೆಯನ್ನು 6,499 ರೂಗಳೆಂದು ನಿಗದಿಪಡಿಸಲಾಗಿದೆ. ಈ ಬೆಲೆ 2GB RAM + 32GB ಸ್ಟೋರೇಜ್ ರೂಪಾಂತರಗಳನ್ನು ಹೊಂದಿದೆ. ಮೆಮೊರಿ ಕಾರ್ಡ್‌ನಿಂದ ನೀವು 256GB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಈ ಫೋನ್ 13 + 13 ಮೆಗಾಪಿಕ್ಸೆಲ್ ಹಿಂಭಾಗ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯವಿರುತ್ತದೆ. ಈ ಫೋನ್ 6.52 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಇದರ ರೆಸಲ್ಯೂಶನ್ 1600 x 720 ಪಿಕ್ಸೆಲ್‌ಗಳು. ಈ ಸ್ಮಾರ್ಟ್‌ಫೋನ್ 1.8GHz ಮೀಡಿಯಾ ಟೆಕ್ ಹೆಲಿಯೊ A20 ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo