ಭಾರತದಲ್ಲಿ ಕೇವಲ 15000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೇಮಿಂಗ್ ಸ್ಮಾರ್ಟ್ಫೋನ್ಗಳು – 2019

ಭಾರತದಲ್ಲಿ ಕೇವಲ 15000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೇಮಿಂಗ್ ಸ್ಮಾರ್ಟ್ಫೋನ್ಗಳು – 2019
HIGHLIGHTS

ಇತ್ತೀಚಿನ ದಿನಗಳಲ್ಲಿ15000 ರೂಗಳೊಳಗಿನ ಬಜೆಟ್ ಫೋನ್ಗಳು `ಸುಂದರತೆ ಸ್ಮೂತ್ ಮತ್ತು ಆಕರ್ಷಕ ಗೇಮಿಂಗ್ ಸೌಲಭ್ಯವನ್ನು ಹೊಂದಿವೆ.

ಗೇಮಿಂಗ್ ಒಂದು ಸ್ಮಾರ್ಟ್ಫೋನ್ ಅನುಭವದ ಅವಿಭಾಜ್ಯ ಅಂಗವಾಗಿದೆ. ನಾವು ಅದರ ಬಗ್ಗೆ ಯೋಚಿಸಿದರೆ ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ಉತ್ತಮ ಗೇಮಿಂಗ್ ಮುಳುಗದೆಯೇ ನಮ್ಮ ಅಥವಾ ಮನೆಯಲ್ಲಿರುವವರ ದಿನ ನಿಜವಾಗಿಯೂ ಕಳೆಯುವುದು ಸಾಧ್ಯವೇ ಇಲ್ಲ. ಇದೇ ಸಮಯದೊಂದಿಗೆ ಇಂದಿನ ಕಂಪನಿಗಳು ತಮ್ಮ ಪ್ರಾಡಕ್ಟ್ಗಳಲ್ಲಿ GPU ಮತ್ತು ಬ್ಯಾಟರಿ ಬ್ಯಾಕ್ಅಪ್ಗೆ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿವೆ. ಇತ್ತೀಚಿನ ದಿನಗಳಲ್ಲಿ15000 ರೂಗಳೊಳಗಿನ ಬಜೆಟ್ ಫೋನ್ಗಳು `ಸುಂದರತೆ ಸ್ಮೂತ್ ಮತ್ತು ಆಕರ್ಷಕ ಗೇಮಿಂಗ್ ಸೌಲಭ್ಯವನ್ನು ಹೊಂದಿವೆ. ನೀವೋಬ್ಬ ಗೇಮಿಂಗ್ ಉತ್ಸಾಹಿಯಾಗಿದ್ದು 15000 ರೂಗಳೊಳಗೆ ಗೇಮಿಂಗ್ಗಾಗಿ ಉನ್ನತ ಮೊಬೈಲ್ ಫೋನನ್ನು ಖರೀದಿಸಲು ಬಯಸುತ್ತೀದ್ದಾರೆ ಈ ಪಟ್ಟಿ ನಿಮಗಾಗಿದೆ. 

5. Redmi Note 6 Pro
 ಈ ಪಟ್ಟಿಯ ಐದನೇ ಸ್ಥಾನದಲ್ಲಿದೆ Xiaomi ಕಂಪನಿ ಈ ಬೆಸ್ಟ್ Redmi Note 6 Pro ಸ್ಮಾರ್ಟ್ಫೋನ್. ಇದ್ರಲ್ಲಿ ನಿಮಗೆ ಪವರ್ಫುಲ್ ಪ್ರೊಸೆಸರ್ ಸಿಗೋದಿಲ್ಲವಾದರೂ ಇದನ್ನು ಹೆವಿ ಗ್ರಾಫಿಕ್ಸ್ ಗೇಮ್ಗಳಾದ PubG ಯಂತಹ ಗೇಮ್ಗಳನ್ನು ಆರಾಮಾಗಿ ಆಡಬವುದು. ಕಂಪನಿ ಇದರಲ್ಲಿ ಸ್ನ್ಯಾಪ್ಡ್ರಾಗನ್ 636 ಮತ್ತು 6GB ಯ RAM ನೊಂದಿಗೆ 4000mAh ಬ್ಯಾಟರಿಯನ್ನು ನೀಡಿದೆ. 

4. Moto One Power 
ನಾಲ್ಕನೇಯ ಸ್ಥಾನದಲ್ಲಿದೆ Moto One Power. ಇದು Android One ಸರ್ಟಿಫೈಡ್ ಫೋನಾಗಿದ್ದು ಭಾರಿ ಮಾತ್ರದ ಅಂದ್ರೆ 5000mAh ಬ್ಯಾಟರಿಯನ್ನು ಫಾಸ್ಟ್ ಚಾರ್ಜ್ನೊಂದಿಗೆ ಈ ಸ್ಮಾರ್ಟ್ಫೋನ್ ಬರುತ್ತದೆ. ಇದರಲ್ಲೂ ಸಹ ಸ್ನ್ಯಾಪ್ಡ್ರಾಗನ್ 636 ಪ್ರೊಸೆಸರನ್ನು ನೀಡಿದ್ದು ಒಂದು ವೇಳೆ ನೀವೊಂದು ಬೆಸ್ಟ್ ಬಜೆಟ್ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಇದನ್ನು ಹಾರಿಸಿಕೊಳ್ಳಬವುದು.

3. Realme 2 Pro
ಈ ಪಟ್ಟಿಯ ಮೂರನೇ ಸ್ಥಾನದಲ್ಲಿದೆ Realme 2 Pro. 15000 ರೂಗಳೊಳಗೆ ನೀವು ಪಡೆಯಬವುದಾದ ಪವರ್ಫುಲ್ ಸ್ಮಾರ್ಟ್ಫೋನ್ ಇದಾಗಿದೆ. 
ಒಂದು ರೀತಿಯಲ್ಲಿ ಈ ಸ್ಮಾರ್ಟ್ಫೋನನ್ನು ಗೇಮಿಂಗ್ಗಾಗಿಯೇ ಮಾಡಲ್ಪಟ್ಟಿದೆ. ಏಕೆಂದರೆ ಇದರಲ್ಲಿ ಸ್ನ್ಯಾಪ್ಡ್ರಾಗನ್ 660 ಪ್ರೊಸೆಸರನ್ನು ನೀಡಿದ್ದು ಅದ್ದೂರಿಯ ಗ್ರಾಫಿಕ್ ಸಪೋರ್ಟ್ ಮಾಡುತ್ತದೆ. ಈ ಫೋನ್ ಗೇಮಿಂಗ್ ಮೋಡ್ ಅನ್ನು ಹೊಂದಿದ್ದು ಉತ್ತಮ ಗೇಮಿಂಗ್ಗಾಗಿ ಸಹಾಯ ಮಾಡುವ ಅಗತ್ಯತೆಗಳನ್ನು ಹೆಚ್ಚಿಸುತ್ತದೆ. 

2. Asus Zenfone Max Pro M2
ಇದರ ಎರಡನೇಯ ಸ್ಥಾನದಲ್ಲಿದೆ Asus Zenfone Max Pro M2. ಇದು ಸಹ Realme 2 Pro ಹಾರ್ಡ್ವೇರ್ ಹೊಂದಿರುವಂತೆಯೇ ಸ್ಟಾಕ್ ಆಂಡ್ರಾಯ್ಡ್ ಜೊತೆಯಲ್ಲಿ ಬರುತ್ತದೆ. ಈ ಫೋನಾಗಿದ್ದು ಭಾರಿ ಮಾತ್ರದ ಅಂದ್ರೆ 5000mAh ಬ್ಯಾಟರಿಯನ್ನು ಹೊಂದಿದೆ. ಈ ರೇಂಜಲ್ಲಿ ಬರುವ ಫೋನ್ಗಳಲ್ಲಿ ಹೊಳೆಯುವ ಬಾಹ್ಯಕ್ಕಾಗಿ ಇದರ ವಿನ್ಯಾಸ ಅದ್ಭುತವಾಗಿ ಪಡೆದುಕೊಂಡಿದೆ.

1. Honor 8X  
ಈ ಪಟ್ಟಿಯ ಮೊದಲ ಸ್ಥಾನದಲ್ಲಿದೆ Honor 8X. ಇದು 15000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೇಮಿಂಗ್ ಸ್ಮಾರ್ಟ್ಫೋನ್ ಆಗಿದೆ. ಈ ಫೋನ್ 6.26 ಇಂಚಿನ ಬಾರ್ಡರ್ ಲೆಸ್ ಫುಲ್ ವ್ಯೂ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು Kirin 710 ಪವರ್ಫುಲ್ ಚಿಪ್ಸೆಟೊಂದಿಗೆ GPU Turbo 2.0 ಬೆಂಬಲದೊಂದಿಗೆ 3750mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು ನಿಮಗೆ ಊಹಿಸಲಾಗದ ಗೇಮಿಂಗ್ ಅನುಭವದೊಂದಿಗೆ ಹೈ ಫ್ರೇಮ್ ರೇಟನ್ನು PubG Mobile ಮತ್ತು Asphalt 9 ನಂತಹ ಗೇಮ್ಗಳಲ್ಲಿ ಪಡೆಯಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo