ಭಾರತದಲ್ಲಿ ಇವೇ ನೋಡಿ ಸದ್ಯಕ್ಕೆ ಬೆಸ್ಟ್ ಫೋಟೋ / ವಿಡಿಯೋ ಪಡೆಯಲು ಲಭ್ಯವಿಯುವ ಸ್ಮಾರ್ಟ್ಫೋನ್ಗಳು

Updated on 04-Apr-2023
HIGHLIGHTS

ಒಂದೊಳ್ಳೆ ಫೋಟೋಗ್ರಫಿ ಅನುಭವಗಳು ಈ ಹಿಂದೆ ಅತ್ಯಂತ ದುಬಾರಿ ಡಿವೈಸ್‌ಗಳಿಗೆ ಮಾತ್ರ ಸೀಮಿತವಾಗಿದ್ದವು

ಸ್ಮಾರ್ಟ್ಫೋನ್ ತಯಾರಕರು ತಮ್ಮ ಮಿಡ್ ರೇಂಜ್ ಡಿವೈಸ್‌ಗಳಲ್ಲಿ ಅತ್ಯುತ್ತಮ ಸೆನ್ಸರ್ ಅನ್ನು ನೀಡುತ್ತೀದ್ದಾರೆ.

ಇದರಿಂದಾಗಿ 30,000 ಕ್ಕಿಂತ ಕಡಿಮೆ ಬೆಲೆಯ ಉನ್ನತ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಕ್ಯಾಮೆರಾ ನಮ್ಮ ಸ್ಟೇಟಸ್ ಆಗಿವೆ. ಏಕೆಂದರೆ ಸೋಶಿಯಲ್ ಮೀಡಿಯಾ ಅಥವಾ ನಿಮ್ಮ ಸುತ್ತಲಿರುವ ಸೊಗಸು ಮತ್ತು ಉತ್ತಮ ಮೆಮೋರಿಗಳನ್ನು ಸೆರೆ ಹಿಡಿಯಲು ನಿಮಗೆ  DSLR ನೀಡುವಂತಹ ಅತ್ಯುತ್ತಮ ಶಾರ್ಪ್ ಮತ್ತು ಕ್ಲಾರಿಟಿಯೊಂದಿಗೆ ಹೈ ಕ್ವಾಲಿಟಿಯ ಇಮೇಜ್ ಮತ್ತು ವಿಡಿಯೋಗಳನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಮೂಲಕವೇ ಪಡೆಯಬಹುದು. ಇಂದು ನಿಮ್ಮ ಕೈಗೆಟಕುವ ಬೆಲೆಗೆ ಸೇರಿದಂತೆ ಉತ್ತಮ ಸ್ಪರ್ಧೆಯ ಕಾರಣದಿಂದಾಗಿ ಸ್ಮಾರ್ಟ್ಫೋನ್ ತಯಾರಕರು ತಮ್ಮ ಮಿಡ್ ರೇಂಜ್ ಡಿವೈಸ್‌ಗಳಲ್ಲಿ ಅತ್ಯುತ್ತಮ ಸೆನ್ಸರ್ ಅನ್ನು ನೀಡುತ್ತೀದ್ದಾರೆ. ಇದರಿಂದಾಗಿ ನಿಮಗೆ ಅತ್ಯುತ್ತಮವಾದ ಫೋಟೋ ಅಥವಾ ವಿಡಿಯೋಗಳ ಅನುಭವವನ್ನು ನೀಡುವುದಾಗಿ ಕಂಪನಿಗಳು ಭರವಸೆಯನ್ನು ನೀಡುತ್ತದೆ.

Samsung Galaxy S20 FE 5G

ಈ ಸ್ಮಾರ್ಟ್‌ಫೋನ್‌ ಅದ್ಭುತವಾದ ಶಾಟ್‌ಗಳನ್ನು ಸೆರೆಹಿಡಿಯಲು ಪ್ರೊ-ಗ್ರೇಡ್ ಆಪ್ಟಿಕಲ್ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಇದು 12MP ಅಲ್ಟ್ರಾವೈಡ್ ಲೆನ್ಸ್ + 12MP ವೈಡ್ ಆಂಗಲ್ ಲೆನ್ಸ್  ಮತ್ತು ವಿವಿಧ ಫೋಟೋಗ್ರಫಿ ಅನುಭವಕ್ಕಾಗಿ 8MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಪ್ರೊ-ಗ್ರೇಡ್ ರಿಯರ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ. ಫೋನ್ ಅದ್ಭುತವಾದ ಸೆಲ್ಫಿ ಶಾಟ್‌ಗಳಿಗಾಗಿ 32P ಹೈ-ರೆಸಲ್ಯೂಶನ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದಲ್ಲದೆ ನೈಟ್ ಮೋಡ್ 30x ಸ್ಪೇಸ್ ಜೂಮ್ ಮತ್ತು ಸಿಂಗಲ್ ಟೇಕ್ ಮೋಡ್‌ಗಳಂತಹ 15-ಸೆಕೆಂಡ್ ಕ್ಯಾಪ್ಚರ್ ಮೋಡ್‌ಗಳನ್ನು ಸಹ ಈ ಫೋನ್‌ ನಲ್ಲಿ ಲಭ್ಯವಿದೆ.

Samsung Galaxy M33 5G

ಸ್ಮಾರ್ಟ್‌ಫೋನ್‌ 50MP ಮುಖ್ಯ ಕ್ಯಾಮೆರಾ, 5MP ಅಲ್ಟ್ರಾ-ವೈಡ್ ಲೆನ್ಸ್, 2MP ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಮುಂಭಾಗದ 8MP ಕ್ಯಾಮೆರಾವನ್ನು ಸಹ ಈ ಫೋನ್‌ನಲ್ಲಿ ಸೇರಿಸಲಾಗಿದೆ. ಡಿಸ್ಟ್ರಕ್ಷನ್-ಫ್ರೀ ಮತ್ತು ಲೊ-ನೋಯ್ಸ್ ಫೋಟೋಗಳಿಗಾಗಿ ಸ್ಯಾಮ್‌ಸಂಗ್ ಆಬ್ಜೆಕ್ಟ್ ಎರೇಸರ್ ಮತ್ತು ತಾತ್ಕಾಲಿಕ ನೋಯ್ಸ್ ರೆಡ್ಯೂಕ್ಷನ್ ಫಿಲ್ಟರ್‌ಗಳನ್ನು ಸಹ ಒಳಗೊಂಡಿದೆ.

OnePlus Nord 2T 5G

ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತು. ಫೋನ್ ತನ್ನ ಮುಂಚೂಣಿಯಲ್ಲಿರುವ OnePlus Nord 2 ನಂತೆಯೇ ಎಲ್ಲಾ ಫೀಚರ್‌ಗಳನ್ನು ಹೊಂದಿದೆ. ಇದನ್ನು ಉನ್ನತ ಮಧ್ಯಮ ಶ್ರೇಣಿಯ ಕ್ಯಾಮೆರಾ ಫೋನ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಈ ಫೋನ್‌ ಸೋನಿ IMX766 (OIS)ಪ್ರಾಥಮಿಕ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದು ವೈಡ್-ಆಂಗಲ್ ದೃಶ್ಯಗಳನ್ನು ರೆಕಾರ್ಡ್ ಮಾಡಲು ಮತ್ತು 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಸಹ ಒಳಗೊಂಡಿದ್ದು ಹೆಚ್ಚಿನ ರೆಸಲ್ಯೂಶನ್ ಸೆಲ್ಫಿಗಳಿಗಾಗಿ ನೀವು 32MP Sony IMX615 ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ.

OPPO Reno7 5G

ಈ ಸ್ಮಾರ್ಟ್‌ಫೋನ್‌ ಫೋಟೋಗ್ರಫಿ ಅವಶ್ಯಕತೆಗಳಿಗಾಗಿ ನೀವು ಪರಿಗಣಿಸಬಹುದಾದ ಮತ್ತೊಂದು ಉತ್ತಮ ಸ್ಮಾರ್ಟ್‌ಫೋನ್ ಆಗಿದೆ. ಇದರಲ್ಲಿ 32MP ಮುಂಭಾಗದ ಕ್ಯಾಮೆರಾ ಮತ್ತು 64MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಈ ಫೋನ್ ನಲ್ಲಿ DSLR ನಿಂದ ಹೋಲುವ ಪೋಟ್ರೇಟ್ ಫೋಟೋಗಳನ್ನು ತೆಗೆದುಕೊಳ್ಳಬಹುದು. ಇದರ ಜೊತೆಗೆ ಈ Oppo ಕ್ಯಾಮೆರಾ ಫೋನ್ ಇತರ Oppo ಕ್ಯಾಮೆರಾ ಫೋನ್‌ಗಳಂತೆಯೇ ಉತ್ತಮವಾದ ಪೋರ್ಟ್ರೇಟ್ ಮೋಡ್, ಬೊಕೆ ಫ್ಲೇರ್ ಪೋರ್ಟ್ರೇಟ್ ವೀಡಿಯೊ ಮೋಡ್, AI ಹೈಲೈಟ್ ವೀಡಿಯೊ, AI ಕಲರ್ ಪೋರ್ಟ್ರೇಟ್ ವೀಡಿಯೊ, ಡ್ಯುಯಲ್-ವ್ಯೂ ವೀಡಿಯೊ ಮತ್ತು ಹೆಚ್ಚಿನದನ್ನು ಹೊಂದಿದೆ. ಅಲ್ಲದೆ Reno7 5G 108MP ಕ್ಯಾಪ್ಚರ್ ಸೆಟ್ಟಿಂಗ್ ಅನ್ನು ಸಹ ಒಳಗೊಂಡಿದೆ.

iQOO Neo 7 5G

ಐಕ್ಯೂ ಸ್ಮಾರ್ಟ್‌ಫೋನ್‌ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಪ್ರೀಮಿಯಂ ವೆಚ್ಚವಿಲ್ಲದೆ ಅದ್ಭುತ ಫೋಟೋಗ್ರಫಿ ಮತ್ತು ವೀಡಿಯೊಗ್ರಫಿ ಸಾಮರ್ಥ್ಯಗಳನ್ನು ನೀಡುತ್ತದೆ. ಹೆಚ್ಚಿನ ರೆಸಲ್ಯೂಶನ್ 64MP OIS ಪ್ರಾಥಮಿಕ ಕ್ಯಾಮೆರಾವನ್ನು  ಹೊಂದಿದ್ದು ಇದು ಯಾವುದೇ ಬ್ಲರ್ ಇಲ್ಲದೆ ಅದ್ಭುತವಾದ ಫೋಟೋಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಫೋನ್‌ನಲ್ಲಿ ನಿರ್ಮಿಸಲಾದ OIS ಮತ್ತು EIS ಸಹಾಯದಿಂದ ರಾತ್ರಿ ವೇಳೆಯು ಉತ್ತಮ ಫೋಟೋಗಳನ್ನು ತೆಗೆದುಕೊಳ್ಳುಲು ಈ ಫೋನ್ RAWHDR 3.0 ಅಲ್ಗಾರಿದಮ್ ಅನ್ನು ಬಳಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :