Zero1 Awards 2019: ಅತ್ಯುತ್ತಮವಾದ ಬಜೆಟ್ ಸ್ಮಾರ್ಟ್ಫೋನ್ಗಳು

Zero1 Awards 2019: ಅತ್ಯುತ್ತಮವಾದ ಬಜೆಟ್ ಸ್ಮಾರ್ಟ್ಫೋನ್ಗಳು

ಕಳೆದ ವರ್ಷದವರೆಗೆ ಒಂದು ಉತ್ತಮವಾದ ಬಜೆಟ್ ಫೋನ್‌ ಬಗ್ಗೆ ಯೋಚಿಸುವುದು ಹೆಚ್ಚು ಗೊಂದಲಗಳಿಗೆ ಕಾರಣವಾಗುತ್ತಿತ್ತು ಆ ವಿಭಾಗದಲ್ಲಿ ಎಲ್ಲವೂ ಟ್ರೇಡ್ ಆಗಿಯೇ ಬರುತ್ತಿತ್ತು. ದೊಡ್ಡ ಬ್ಯಾಟರಿ ಇದ್ರೆ ಉತ್ತಮ ಕ್ಯಾಮೆರಾ ಇರುವುದಿಲ್ಲ. ಉತ್ತಮ ವಿನ್ಯಾಸ ಇದ್ರೆ ಪರ್ಫಾರ್ಮೆನ್ಸ್ ಕೊರತೆ ಇರುತ್ತಿತ್ತು. ಆದರೆ 2019 ರ ಬಜೆಟ್ ಫೋನ್‌ಗಳು ಇವೇಲ್ಲವನ್ನು ಬದಲಾಯಿಸಿದೆ. ಒಂದು ಅತ್ಯುತ್ತಮವಾದ ಫೋನ್ ಎಲ್ಲ ರೌಂಡರ್‌ಗಳನ್ನು ತನ್ನಲ್ಲಿಟ್ಟು ಕೆಲವರೊಂದಿಗೆ ವಿವರಿಸಲು ಉತ್ತಮ ಮಾರ್ಗವಾಗಿದೆ.  ಸಹಜವಾಗಿ ಬಜೆಟ್ನಲ್ಲಿ 48MP ಕ್ಯಾಮೆರಾಗಳು ಮತ್ತು ಅಮೋಲೆಡ್ ಡಿಸ್ಪ್ಲೇಗಳು ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ವಿಭಾಗ ಮೊದಲ ಬಾರಿಗೆ ನೋಡಿರಬವುದು. ಇವೆಲ್ಲವೂ 2019 ರ ಬಜೆಟ್ ಫೋನ್‌ಗಳೊಂದಿಗೆ ಸಾಕಷ್ಟು ಪ್ರಭಾವಿತವನ್ನಾಗಿ ಮಾಡಿದೆ. ಈ ಫೋನ್‌ಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಇದರ CPU ಮತ್ತು GPU ಪರ್ಫಾರ್ಮೆನ್ಸ್  ಬ್ಯಾಟರಿ ಬಾಳಿಕೆ ಮತ್ತು ಕ್ಯಾಮೆರಾ ಇನ್ನಿತರೇ ಧೀರ್ಘ ಅಂಶಗಳಿಂದ Realme 5 ಸ್ಮಾರ್ಟ್ಫೋನ್ 2019 ರ ಅತ್ಯುತ್ತಮ ಬಜೆಟ್ ಸ್ಮಾರ್ಟ್ಫೋನ್ ಆಗಿದೆ. 

Winner
Realme 5
Price: Rs 8,999

https://www.mobilebdt.com/img/thumb/realme-5-5d5be0b40c06d.jpg

ಈ Realme 5 ಸ್ಮಾರ್ಟ್ಫೋನ್ ಅದ್ದೂರಿಯಾದ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದ್ದು ಇದರೊಳಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ಅನ್ನು 11nm ಪ್ರೋಸೆಸ್ ಟೆಕ್ನಾಲಜಿಯೊಂದಿಗೆ ತಯಾರಿಸಲಾಗಿದೆ. ಅದರ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾಗಳ ಸೆಟಪ್ ಅಂದ್ರೆ 12MP ಮೆಗಾಪಿಕ್ಸೆಲ್ 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಮೂರನೇ ಮತ್ತು ನಾಲ್ಕನೇಯದಾಗಿ ಡೆಪ್ತ್ ಮತ್ತು ಮ್ಯಾಕ್ರೋ ಮೋಡ್‌ಗಾಗಿ 2MP ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದರ ಮುಂದೆ AI ಬ್ಯೂಟಿ ಮೋಡ್‌ನೊಂದಿಗೆ 13MP ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಪಡೆಯುತ್ತೀರಿ. ಈ ಸ್ಮಾರ್ಟ್ಫೋನ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಇದರಲ್ಲಿ ನೀಡಿರುವ 10W ಫಾಸ್ಟ್ ಚಾರ್ಜಿಂಗ್‌ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಆದರೆ ಒಟ್ಟಾರೆಯಾಗಿ ಹೇಳುವುದಾದರೆ ಈ Realme 5 ಬಜೆಟ್ ವಿಭಾಗದಲ್ಲಿ ಅತ್ಯುತ್ತಮ ಸರ್ವಾಂಗೀಣ ಪ್ರದರ್ಶನವನ್ನು ನೀಡುತ್ತದೆ. 

Runners Up
Motorola One Macro
Price: Rs 9,999

https://www.gizmochina.com/wp-content/uploads/2019/10/Motorola-Moto-One-Macro-540x540.png

ನೀವೊಂದು ಬಜೆಟ್ ಫೋನ್ಗಾಗಿ ಹುಡುಕುತ್ತಿರುವ ಹೆಚ್ಚಿನ ಬಳಕೆದಾರರು ಇದ್ರ ಇಂಟರ್ಫೇಸ್ ಹೇಗೆ ಎಂಬುದರ ಬಗ್ಗೆ ಅಸಡ್ಡೆತೆಯನ್ನು ತೋರುವುದಿಲ್ಲ. ಈ ಫೋನ್ ಪ್ಯೂರ್ ಆಂಡ್ರಾಯ್ಡ್ ಆದ್ಯತೆ ನೀಡುವವರಿಗಾಗಿದೆ. 13MP + 2MP + 2MP ರಾರ್ ರೇರ್ ಕ್ಯಾಮೆರಾ ಕನಿಷ್ಠ ಎರಡು ವರ್ಷಗಳವರೆಗೆ ನಿಯಮಿತ ಸೆಕ್ಯೂರಿಟಿ  ಮತ್ತು ಆವೃತ್ತಿ ನವೀಕರಣಗಳ ಭರವಸೆಯೊಂದಿಗೆ ಇಂಟರ್ಫೇಸ್ ಬರುತ್ತದೆ. ಇದರ ಮ್ಯಾಕ್ರೋ CPU ಮತ್ತು GPU ಕಾರ್ಯಗಳನ್ನು ನಿರ್ವಹಿಸುವಲ್ಲಿ ಉತ್ತಮವಾಗಿದೆ. ವಿಶೇಷವಾಗಿ ಇದರಲ್ಲಿನ MediaTek Helio P70 ಪ್ರೊಸೆಸರ್ ಮತ್ತು ಇದರಲ್ಲಿನ ಆಪ್ಟಿಮೈಸೇಷನ್‌ಗಳು ಅದರಲ್ಲೂ ವಿಶೇಷವಾಗಿ ಗೇಮಿಂಗ್ ಅಂತೂ ಅದ್ದೂರಿಯಾಗಿದೆ. ಅಷ್ಟೇಯಲ್ಲದೆ ಇದರಲ್ಲಿ ಸೋಶಿಯಲ್ ಮೀಡಿಯಾ ಬ್ರೌಸ್ ಮಾಡುವುದಾಗಿರಬವುದು ಅಥವಾ ಮ್ಯೂಸಿಕ್ ಕೇಳುವುದು ಮುಂತಾದ ದೈನಂದಿನ ಕಾರ್ಯಗಳ ಜೊತೆ ಹೆಚ್ಚಿನದನ್ನು ಮಾಡಬವುದು. ಈ ಸ್ಮಾರ್ಟ್ಫೋನಲ್ಲಿ ಪ್ರತೇಯಕವಾದ ಮ್ಯಾಕ್ರೋ ಕ್ಯಾಮೆರನ್ನು ಹೆಚ್ಚು ಕ್ಲೋಸರ್ ಶಾಟ್ಗಳಿಗಾಗಿ ನೀಡಲಾಗಿದೆ. ಇದರಲ್ಲಿ 4000mAh ಬ್ಯಾಟರಿಯನ್ನು ಅವಧಿಯನ್ನು ಸಹ ನೀಡಿರುವುದು ಕುತೂಹಲಕಾರಿಯಾಗಿದೆ. ಅದರಲ್ಲಿ ಗೇಮಿಂಗ್ ಮಾಡುವಾಗ ಬ್ಯಾಟರಿ ಬಾಳಿಕೆ ನಿಧಾನವಾಗಿ ಇಳಿಯುವುದನ್ನು ನಾವು ಗಮನಿಸಿದ್ದೇವೆ. ಅಲ್ಲದೆ ಇಲ್ಲಿ ಇತರರಿಗೆ ಹೋಲಿಸಿದರೆ Netflix ನಿಂದ ಸ್ಟ್ರೀಮಿಂಗ್ ಮಾಡುವಾಗಲೂ ಸಹ ಉತ್ತಮ ಪವರ್ ದಕ್ಷತೆಯನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಈ ಬೆಲೆಯಲ್ಲಿ ಈ ಫೀಚರ್ಗಳನ್ನು ಒಳಗೊಂಡು ಉತ್ತಮ ಖರೀದಿಯ ಶಿಫಾರಸನ್ನು ಹೊಂದಿದೆ.

Best Buy
Realme 5
Price: Rs 8,999

https://www.mobilebdt.com/img/thumb/realme-5-5d5be0b40c06d.jpg

ಈ ಬಜೆಟ್ ವಿಭಾಗದಲ್ಲಿ ನಮ್ಮ ಎಲ್ಲ ಸ್ಪರ್ಧಿಗಳ ಬೆಲೆಗಳು ಹೆಚ್ಚಾಗಿ ಒಂದೇ ಆಗಿರುವುದರಿಂದ ಈ ಝೀರೋ 1 ವಿಜೇತ Realme 5 ಒಂದು  ಅತ್ಯುತ್ತಮ ಖರೀದಿಯಾಗಿದೆ. ಮತ್ತು ಒಳ್ಳೆಯ ಕಾರಣಕ್ಕಾಗಿ ನಾವು ಮೊದಲೇ ಹೇಳಿದಂತೆ Realme 5 ಸ್ಮಾರ್ಟ್ಫೋನ್ ಉತ್ತಮವಾದ ಪರ್ಫಾರ್ಮೆನ್ಸ್ ನೀಡುತ್ತದೆ. ಅಷ್ಟೇಯಲ್ಲದೆ ಕ್ಯಾಮೆರಾದಲ್ಲಿಯೂ ಸಹ ಉತ್ತಮ ನಮ್ಯತೆಯನ್ನು ನೀಡುತ್ತದೆ. ಬಜೆಟ್ ವಿಭಾಗದಲ್ಲಿ ಧೀರ್ಘಕಾಲೀನ ಬ್ಯಾಟರಿ  ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ ಏಕೆಂದರೆ ಇದರಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದ್ದು ಅದಕ್ಕಾಗಿಯೇ ಕೆಲವು ಪ್ರತಿ ಸ್ಪರ್ಧಿಗಳಾದ Redmi Note 8, Samsung Galaxy M30 ಮತ್ತು Vivo U10 ಇದರ ಹಿಂದೆ ನಿಂತಿವೆ. ನೀವೊಂದು ಸ್ಮಾರ್ಟ್ಫೋನ್ 10,000 ರೂಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಪಡೆಯಬೇಕಾದರೆ ಅದು ಈ Realme 5 ಆಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo