ಭಾರತದಲ್ಲಿ ಅತಿ ಕಡಿಮೆ ಬೆಲೆಯ ಈ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ನೊಂದಿಗೆ 50GB ಡೇಟಾ ಸಹ ಉಚಿತ!

ಭಾರತದಲ್ಲಿ ಅತಿ ಕಡಿಮೆ ಬೆಲೆಯ ಈ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ನೊಂದಿಗೆ 50GB ಡೇಟಾ ಸಹ ಉಚಿತ!
HIGHLIGHTS

POCO M6 5G ಫೋನ್ ಜೊತೆಗೆ ಏರ್‌ಟೆಲ್‌ನಿಂದ ಡೇಟಾದ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಾರೆ.

POCO M6 5G ಬೆಲೆಯ ಬಗ್ಗೆ ಮಾತನಾಡುವುದಾದರೆ ಈಗ ಕೇವಲ 8,799 ರೂಗಳಿಗೆ ಲಭ್ಯವಿದೆ.

POCO M6 5G ಇದನ್ನು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬರುವ ಬೆಸ್ಟ್ 5G ಫೋನ್ ಎಂದು ಕರೆಯಲಾಗುತ್ತದೆ.

ಪೊಕೋ ಸ್ಮಾರ್ಟ್ಫೋನ್ ಬ್ರಾಂಡ್ POCO M6 5G ಕೇವಲ 4 ತಿಂಗಳ ಹಿಂದೆ ಭಾರತದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು ಈ ಸ್ಮಾರ್ಟ್ಫೋನ್ ನಿಮ್ಮ ಕೈಗೆಟಕುವ ಬೆಲೆಗೆ ಬರುವ ಲೇಟೆಸ್ಟ್ ಮತ್ತು ಅತ್ಯುತ್ತಮ 5G ಫೋನ್‌ಗಳ ಭಾಗದಲ್ಲಿದೆ. ಕಂಪನಿಯು ಈ ಫೋನ್ ಅನ್ನು ಮರುಪ್ರಾರಂಭಿಸಿದ್ದು ಈ ಬಾರಿ ಇದನ್ನು ಏರ್‌ಟೆಲ್ (Airtel) ಪಾಲುದಾರಿಕೆಯಲ್ಲಿ ಪರಿಚಯಿಸಲಾಗಿದೆ.

ಇದರರ್ಥ ಈ ಫೋನ್ ಕ್ಯಾರಿಯರ್-ಲಾಕ್ ಆಗಿದೆ. ಆದರೆ ಇದನ್ನು ನೀವು ಅನ್‌ಲಾಕ್ ಮಾಡಲಾದ ರೂಪಾಂತರಗಳಿಗೆ ಹೋಲಿಸಿದರೆ ಇದು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಫೋನ್ ಜೊತೆಗೆ ಏರ್‌ಟೆಲ್‌ನಿಂದ ಡೇಟಾದ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಾರೆ. ಈ ಏರ್‌ಟೆಲ್ (Airtel) ಪಾಲುದಾರಿಕೆಯ ಅಡಿಯಲ್ಲಿ POCO M6 5G ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ನೋಡೋಣ.

Also Read: Jio Payments: ಶೀಘ್ರದಲ್ಲೇ ಜಿಯೋ ಪೇಮೆಂಟ್ ಸೌಂಡ್‌ಬಾಕ್ಸ್ ಬಿಡುಗಡೆಗೆ ಸಜ್ಜು! ಇದರ ವಿಶೇಷತೆಗಳೇನು?

POCO M6 5G 5G ಸ್ಮಾರ್ಟ್‌ಫೋನ್‌ನೊಂದಿಗೆ 50GB ಡೇಟಾ

ಏರ್‌ಟೆಲ್ ನೆಟ್‌ವರ್ಕ್ ಬಳಕೆದಾರರು ತಲಾ 10GB ತಿಂಗಳ ಪ್ರಕಾರ 5 ಮಾಸಿಕ ಕೂಪನ್‌ಗಳನ್ನು ಪಡೆಯುತ್ತಾರೆ. ರಿವಾರ್ಡ್ಸ್ ವಿಭಾಗದ ಅಡಿಯಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಡೇಟಾ ಕೂಪನ್‌ಗಳನ್ನು ರಿಡೀಮ್ ಮಾಡಬಹುದು. ಫೋನ್‌ನ ಕಡಿಮೆ ಬೆಲೆಗೆ ಕಾರಣ ಅದರ ಕ್ಯಾರಿಯರ್-ಲಾಕ್ ಆಗಿರಬಹುದು. ಅಂದರೆ ಈ ಸ್ಮಾರ್ಟ್ಫೋನ್ ಒಳಗೆ ಕೇವಲ ಏರ್‌ಟೆಲ್ ಸಿಮ್ ಹೊರತುಪಡಿಸಿ ಫೋನ್‌ನಲ್ಲಿ ಬೇರೆ ಯಾವುದೇ ಸಿಮ್ ಕಾರ್ಡ್ ಬೆಂಬಲಿಸುವುದಿಲ್ಲ. ಏರ್‌ಟೆಲ್ ಗ್ರಾಹಕರಿಗೆ 50GB ಒಂದು-ಬಾರಿ ಡೇಟಾ ಬೋನಸ್ ನೀಡುತ್ತದೆ. ಈಗಾಗಲೇ ಏರ್‌ಟೆಲ್ ಸಿಮ್ ಕಾರ್ಡ್ ಹೊಂದಿರುವವರು ತಕ್ಷಣ ಫೋನ್ ಬಳಸಲು ಪ್ರಾರಂಭಿಸಬಹುದು ಮತ್ತು ಆಫರ್ ಅನ್ನು ಸಕ್ರಿಯಗೊಳಿಸಬಹುದು.

POCO M6 5G 5G ಸ್ಮಾರ್ಟ್‌ಫೋನ್‌ ಫೀಚರ್ ಮತ್ತು ವಿಶೇಷಣಗಳು

ಈ ಸ್ಮಾರ್ಟ್ಫೋನ್ 6.74 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ ಇದು 1,600 x 720 ಪಿಕ್ಸೆಲ್ಗಳೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇ 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ ಮತ್ತು ಇದು 600 ನಿಟ್‌ಗಳ ಗರಿಷ್ಠ ಹೊಳಪು ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ಪಡೆಯುತ್ತದೆ. ಈ POCO M6 5G 5G ಡಿಸ್‌ಪ್ಲೇಯಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೂ ಲಭ್ಯವಿದೆ. Poco M6 5G ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಜೊತೆಗೆ 8GB LPDDR4X RAM, Mali-G57 MC2 GPU ಮತ್ತು 256GB UFS 2.2 ಸ್ಟೋರೇಜ್ ಹೊಂದಿದೆ. ಇದರ RAM ಅನ್ನು 8GB ವರೆಗೆ ಹೆಚ್ಚಿಸಬಹುದು.

Poco ನ ಈ ಫೋನ್ Android 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾದಂತೆ ಈ ಫೋನ್ 50MP ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಫೋನ್‌ನ ಮುಂಭಾಗದಲ್ಲಿ 5MP ಮೆಗಾಪಿಕ್ಸೆಲ್ ಕ್ಯಾಮೆರಾ ಕೂಡ ಇದೆ. POCO M6 5G 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕೊನೆಯದಾಗಿ POCO M6 5G 5G ಸ್ಮಾರ್ಟ್ಫೋನ್‌ನಲ್ಲಿ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo