6GB ರಾಮ್ ಜೊತೆಗೆ ಬರುವ ಅತ್ಯುತ್ತಮ ಫೋನ್ಗಳು – 2019

6GB ರಾಮ್ ಜೊತೆಗೆ ಬರುವ ಅತ್ಯುತ್ತಮ ಫೋನ್ಗಳು – 2019
HIGHLIGHTS

ಕೆಲವು 2019 ರಲ್ಲಿ ಪ್ರಾರಂಭವಾದ ಲೇಟೆಸ್ಟ್ ಮತ್ತು ಸ್ಮಾರ್ಟ್ ಅಂಶಗಳನ್ನು ಒಳಗೊಂಡಿದ್ದರೆ ಕೆಲವು ತಿಂಗಳಲ್ಲಿ ಬಿಡುಗಡೆಯಾಗಿವೆ

ಭಾರತದಲ್ಲಿ ಪ್ರಸ್ತುತ 6GB ರಾಮ್ನೊಂದಿಗೆ ಇಂದಿನ ಮಾರುಕಟ್ಟೆಯಲ್ಲಿ ಖರೀದಿಸಲು ಹಲವರು ಸ್ಮಾರ್ಟ್ಫೋನ್ಗಳಿವೆ. 4GB ಮೇಲ್ಪಟ್ಟ ರಾಮ್ ಸ್ಟೋರೇಜ್ ಫೋನ್ಗಳು ಮಿಡ್ ರೇಂಜ್ ಅಥವಾ ಫ್ಲಾಗ್ಶಿಪ್ ಫೋನ್ಗಳ ವಿಭಾಗದಲ್ಲಿ ಬರುತ್ತವೆ. ಮತ್ತು ನೀವು ಅಂಥಹ ರಾಮ್ನೊಂದಿಗೆ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ನೀವು ಈ ಕೆಳಗಿನ ಕೆಲ ಮುಖ್ಯ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ನಾವು ಈ ಪಟ್ಟಿಯಲ್ಲಿ ಈ ವರ್ಷ ಬಿಡುಗಡೆಯಾಗಿರುವ ಕೆಲವು ಅದ್ದೂರಿಯ ಸ್ಮಾರ್ಟ್ ಫೋನ್ಗಳನ್ನು ಸೇರಿಸಿದ್ದೇವೆ. ಇದರಲ್ಲಿ ಸ್ಯಾಮ್ಸಂಗ್, ವಿವೋ, ಹುವಾವೇ, ಒಪ್ಪೋ ಮತ್ತು ಒನ್ಪ್ಲಸ್ ಫೋನ್ಗಳಂತ ಭಾರಿ ಬ್ರಾಂಡೆಡ್ ಫೋನ್ಗಳು ಸೇರಿವೆ. ಈ ಪಟ್ಟಿಯು ಹಲವಾರು ಇತ್ತೀಚಿನ ಅದ್ದೂರಿಯ ಫೋನ್ಗಳನ್ನು ಒಳಗೊಂಡಿದೆ. ಇದರೊಂದಿಗೆ ಕೆಲವು 2019 ರಲ್ಲಿ ಪ್ರಾರಂಭವಾದ ಲೇಟೆಸ್ಟ್ ಮತ್ತು ಸ್ಮಾರ್ಟ್ ಅಂಶಗಳನ್ನು ಒಳಗೊಂಡಿದ್ದರೆ ಕೆಲವು ತಿಂಗಳಲ್ಲಿ ಬಿಡುಗಡೆಯಾಗಿರುವ ಅಡ್ವಾನ್ಸ್ ಸಾಧನಗಳು ಲಭ್ಯವಿವೆ.

Samsung Galaxy S10 Plus 

ಇದರಲ್ಲಿ ನಿಮಗೆ ಸೊಗಸಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ ಬಾಗಿದ 6.4 ಇಂಚಿನ ಕ್ವಾಡ್ ಎಚ್ಡಿ + ಸೂಪರ್ AMOLED ಡಿಸ್ಪ್ಲೇಯೊಂದಿಗೆ 1440 x 3040 ಪಿಕ್ಸೆಲ್ಸ್ ರೆಸೊಲ್ಯೂಷನ್ ಮತ್ತು 526 ಪಿಪಿಐ ಪಿಕ್ಸೆಲ್ ಡೆನ್ಸಿಟಿ ಹೊಂದಿದೆ. ಇದು ಸಾಟಿಯಿಲ್ಲದ ಶಾಟ್ಗಳನ್ನು ನೀಡುತ್ತದೆ. ಇದರ ಡಿಸ್ಪ್ಲೇ ಅಸ್ಪೆಟ್ ರೇಷು 19: 9 ಮತ್ತು ಸ್ಕ್ರೀನ್ ಮೇಲೆ ಗೊರಿಲ್ಲಾ ಗ್ಲಾಸ್ v6 ನಿಂದ ರಕ್ಷಿಸಲ್ಪಟ್ಟಿದೆ. ಇದರ ಕ್ಯಾಮರಾ ಇಲಾಖೆಯಲ್ಲಿ ಮಾತನಾಡಬೇಕೆಂದರೆ ನಿಮಗೆ 12MP + 12MP + 16MP ಟ್ರಿಪಲ್ ಹಿಂಭಾಗದ ಮಸೂರಗಳನ್ನು ಪಡೆಯುತ್ತದೆ. ಒಂದು ವೇಳೆ ನಿಮಗೆ ಫೋಟೋಗ್ರಾಫಿ ಮತ್ತು ವೀಡಿಯೊಗ್ರಫಿಗಾಗಿ ಕಾಳಜಿ ಮತ್ತು ಆಸಕ್ತಿ ಹೊಂದಿದ್ದಾರೆ ಇದು ನಿಮಗಾಗಿದೆ. ಇದಲ್ಲದೆ ಇದು 10MP ಮತ್ತು 8MP ಶೂಟರ್ಗಳ ಡ್ಯುಯಲ್ ಫ್ರಂಟ್ ಕ್ಯಾಮೆರಾ ಸೆಟಪ್ ಇದೆ. ಕ್ಯಾಮೆರಾಗಳು ಅಸಾಧಾರಣವಾಗಿ ಡಿಎಸ್ಎಲ್ಆರ್ ಮಟ್ಟದ ಫೋಟೋಗಳನ್ನು ಶೂಟ್ ಮಾಡಲು ಸಹಕರಿಸುತ್ತದೆ.

Samsung Galaxy S10

ಈ ಸ್ಯಾಮ್ಸಂಗ್ ಗ್ಯಾಲಕ್ಸಿ S10 ನಲ್ಲಿ ಅದ್ದೂರಿಯ AMOLED ಡಿಸ್ಪ್ಲೇಯನ್ನುಯನ್ನು ಪಡೆಯುತ್ತೀರಿ. ಕಂಪನಿಯು ಇದರಲ್ಲಿ ಇನ್ಫಿನಿಟಿ OLED  ಪ್ರದರ್ಶನದೊಂದಿಗೆ ಅದನ್ನು ಪ್ರಾರಂಭಿಸಿದೆ. ಸ್ಯಾಮ್ಸಂಗ್ನ ಪ್ರಮುಖ ಪ್ರೀಮಿಯಂ ಸ್ಮಾರ್ಟ್ಫೋನ್ಗಳಿಗಾಗಿ ಈ ಡಿಸ್ಪ್ಲೇಯನ್ನು  ವಿನ್ಯಾಸಗೊಳಿಸಲಾಗಿದೆ ಅನ್ನುವುದನ್ನು ಗಮನಿಸಬವುದು. ಇದಲ್ಲದೆ ಇದರ ಮತ್ತೊಂದು ವಿಶೇಷ ವಿಷಯವೆಂದರೆ ಇದು HDR10 + ಬೆಂಬಲದೊಂದಿಗೆ ಬರುವಂತಹ ವಿಶ್ವದ ಮೊದಲ ಪ್ರದರ್ಶನವಾಗಿದೆ. ಇದು 6GB ರಾಮ್ ಜೊತೆ ಜೋಡಿಸಲಾದ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದರೆ ನಿಮಗೆ 3400mAh ಬ್ಯಾಟರಿಯನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S10 ಹಿಂಬದಿಯ ಕ್ಯಾಮರಾಗೆ ಸಂಬಂಧಿಸಿದಂತೆ 12MP + 12MP + 16MP ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10MP ನೀಡಲಾಗಿದೆ.  

OnePlus 7 Pro

ಈ ಸ್ಮಾರ್ಟ್ಫೋನ್ ಫುಲ್ HD+ ರೆಸಲ್ಯೂಷನ್ ಮತ್ತು ಇನ್ ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ನೊಂದಿಗೆ 6.41 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು  ಹೊಂದಿದೆ. ಇದರಲ್ಲಿ ಫಾಸ್ಟ್ 90Hz ರಿಫ್ರೆಶ್ ದರವನ್ನು ಪಡೆಯುವುದರೊಂದಿಗೆ ಸ್ನಾಪ್ಡ್ರಾಗನ್ 855 ಆಕ್ಟಾ-ಕೋರ್ ಪ್ರೊಸೆಸರ್ ಕ್ರಮವಾಗಿ 128GB ಮತ್ತು 256GB ಸ್ಟೋರೇಜ್ ಜೊತೆಗೆ 6GB ಮತ್ತು 8GB RAM ಆಯ್ಕೆಗಳೊಂದಿಗೆ ಇರುತ್ತದೆ. ಇದರ  ಕ್ಯಾಮರಾ ಇಲಾಖೆಯಲ್ಲಿ 48MP ಮೆಗಾಪಿಕ್ಸೆಲ್ ಸೋನಿ IMX586 ಸೆನ್ಸರ್ ಮತ್ತು 5MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು ಸೆಲ್ಫ್ಗಳನ್ನು ತೆಗೆದುಕೊಳ್ಳಲು 16MP ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಎರಡು ಹಿಂದಿನ ಕ್ಯಾಮೆರಾಗಳನ್ನು ಒಳಗೊಂಡಿದೆ. ನೀವು ನಿಯಮಿತವಾದ 20W ಫಾಸ್ಟ್ ಚಾರ್ಜಿಂಗ್ ಜೊತೆಗೆ 3700mAh ಬ್ಯಾಟರಿಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ಫೋನ್ 6GB + 128GB ಮಾದರಿಗೆ 32,999 ರೂಗಳು ಮತ್ತು 8GB + 256GB ರೂಪಾಂತರಕ್ಕೆ 37,999 ರೂಗಳಲ್ಲಿ ಪಡೆಯಬವುದು.

Samsung Galaxy A70

ಇದು 6.7 ಇಂಚಿನ ಸೂಪರ್ AMOLED ಪ್ರದರ್ಶನವನ್ನು 1080 x 2400 ಸ್ಕ್ರೀನ್ ರೆಸಲ್ಯೂಶನ್ ಮತ್ತು 393ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದು ಅಂಚಿನ ಕಡಿಮೆ ಡಿಸ್ಪ್ಲೇ ಮೇಲೆ ಅದ್ಭುತ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ಹೊಂದಿದೆ. ಇದು ಮತ್ತು ಸ್ಕ್ರಾಚಸ್ ವಿರುದ್ಧ ಅದನ್ನು ನಿರೋಧಿಸುವ ಮೂಲಕ ಡಿಸ್ಪ್ಲೇ ರಕ್ಷಣೆ ನೀಡುತ್ತದೆ. ಫೋಟೋಗ್ರಾಫಿಗಾಗಿ  ಅದ್ಭುತವಾದ ಚಿತ್ರಗಳನ್ನು ಸೆರೆಹಿಡಿಯುವ 32MP + 8MP + 5MP ಲೆನ್ಸ್ಗಳನ್ನು ಹೊಂದಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಈ ಫೋನ್ ಬರುತ್ತದೆ. ಮುಂಭಾಗದಲ್ಲಿ ಇದು 32MP ಲೆನ್ಸ್ಗಳೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಹಂಚಿಕೊಳ್ಳಲು ಇಷ್ಟಪಡುವ ಅತ್ಯುತ್ತಮ ಸೆಲ್ಫ್ಸ್ ಅನ್ನು ಸೆರೆಹಿಡಿಯಬಹುದು.

Oppo Reno

ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 ಪ್ರೊಸೆಸರ್ ಜೊತೆಗೆ 8GB ರಾಮ್ ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಇದು Oppo Reno 10x Zoom ಫೋನಿಗೆ ಹೋಲಿಸಿದರೆ ಫೀಚರ್ಗಳ ಅದಾಹರದ ಮೇರೆಗೆ ಸ್ವಲ್ಪ ಚಿಕ್ಕದಾಗಿದೆ. 6.4 ಇಂಚಿನ ಪೂರ್ಣ ಎಚ್ಡಿ + ಡಿಸ್ಪ್ಲೇ ಮತ್ತು ಅದೇ ಮುಂಭಾಗದ ಕ್ಯಾಮರಾವನ್ನು ಅದರ ಹೆಚ್ಚು ದುಬಾರಿ ಸಹೋದರರಂತೆ ಉಳಿಸುವ ಅದೇ ಶಾರ್ಕ್ ಫಿನ್ ಪಾಪ್ ಔಟ್ ಕಾರ್ಯವಿಧಾನದ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಹಿಂಭಾಗಕ್ಕೆ ಇಮೇಜಿಂಗ್ ಸೆಟಪ್ f / 1.7 ಲೆನ್ಸ್ನೊಂದಿಗೆ 48MP ಮೆಗಾಪಿಕ್ಸೆಲ್ ಸೋನಿ IMX586 ಇಮೇಜ್ ಸೆನ್ಸರ್ ಹೊಂದಿರುತ್ತದೆ. ಮತ್ತು f / 2.4 ಲೆನ್ಸ್ನೊಂದಿಗೆ 5MP ಮೆಗಾಪಿಕ್ಸೆಲ್ ಸೆಕೆಂಡರಿ ಡೆಪ್ತ್ ಸೆನ್ಸರ್ ಕ್ಯಾಮರಾ ಒಳಗೊಂಡಿದೆ. ಇದು VOOC 3.0 ಫಾಸ್ಟ್ ಚಾರ್ಜಿಂಗ್ನೊಂದಿಗೆ 3765mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 9mm ಗಾತ್ರದಲ್ಲಿ ಅಳೆಯುತ್ತದೆ.

Vivo V15 Pro

ವೈವೋ V15 ಪ್ರೊ ಅನ್ನು ದೊಡ್ಡ 6.39-ಇಂಚಿನ ಸೂಪರ್ AMOLED ಪ್ರದರ್ಶನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ಕ್ರೀನ್ 1,080 x 2340 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 403 ಪಿಪಿಐನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ, ವೀಡಿಯೋಗಳನ್ನು ಅಥವಾ ಚಲನಚಿತ್ರಗಳನ್ನು ವೀಕ್ಷಿಸಲು ಉತ್ತಮವಾಗಿದೆ. ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ಮೂಲಕ ಸ್ಕ್ರಾಚಸ್ ಮತ್ತು ಮಾರ್ಕ್ಗಳಿಂದ ಸ್ಕ್ರೀನ್ ರಕ್ಷಿಸಲಾಗಿದೆ. ಆನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೋನಿನ ಫಾಸ್ಟ್ ಒದಗಿಸುತ್ತದೆ. ಮತ್ತು ಯಾವುದೇ ಅನಗತ್ಯ ಅಪ್ಲಿಕೇಶನ್ಗಳ ಪ್ರವೇಶವನ್ನು ತಡೆಯುತ್ತದೆ. 4G VoLTE ಬ್ಯಾಂಡ್ಗಳೊಂದಿಗೆ ವೈ-ಫೈ, ಬ್ಲೂಟೂತ್ ವಿ 5.0, ಎ-ಜಿಪಿಎಸ್, ಗ್ಲೋನಾಸ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಇತರ ಸಂಪರ್ಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಎಲ್ಇಡಿ ಫ್ಲ್ಯಾಷ್ನೊಂದಿಗೆ 48MP, 8MP ಮತ್ತು 5MP ಡೆಪ್ತ್ ಸೆನ್ಸರ್ ಲೆನ್ಸ್ ಒಳಗೊಂಡಿದೆ. ಮುಂಭಾಗದಲ್ಲಿ ಸ್ಕ್ರೀನ್ ಫ್ಲಾಶ್ನೊಂದಿಗೆ 32MP ಕ್ಯಾಮೆರಾವನ್ನು ಸೆಲ್ಫ್ಸ್ ಅನ್ನು ಕಾಳಜಿ ವಹಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo