Asus Zenfone Max M1 ಮತ್ತು Zenfone Lite L1 ಭಾರತದಲ್ಲಿ ಬಿಡುಗಡೆಯಾಗಿವೆ ಅವುಗಳ ಬೆಲೆ, ಲಭ್ಯತೆ ಮತ್ತು ಸ್ಪೆಸಿಫಿಕೇಷನ್ ಇಲ್ಲಿದೆ.
Asus Zenfone Max M1 ನಿಮಗೆ 4000mAh ಬ್ಯಾಟರಿಯೊಂದಿಗೆ ಬಂದರೆ Zenfone Lite L1 ಸಹ 3000mAh ಬ್ಯಾಟರಿ ಹೊಂದಿದೆ.
ಅಸೂಸ್ ಈಗ ಎರಡು ಹೊಸ ಸ್ಮಾರ್ಟ್ಫೋನ್ಗಳಾದ Asus Zenfone Max M1 ಮತ್ತು Zenfone Lite L1 ಫೋನ್ಗಳನ್ನು ಹೊರ ತಂದಿದೆ. Asus Zenfone Max M1 ನಿಮಗೆ 4000mAh ಬ್ಯಾಟರಿಯೊಂದಿಗೆ ಬಂದರೆ Zenfone Lite L1 ಸಹ 3000mAh ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್ಫೋನ್ಗಳೆರಡೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಚಿಪ್ಸೆಟ್ನಿಂದ ಚಾಲಿತವಾಗಿದ್ದು ಈ ಬೆಲೆ ಶ್ರೇಣಿಯಲ್ಲಿ ನಾವು ಇದರಂತೆ ಬೇರೆ ಫೋನ್ಗಳನ್ನು ಸಹ ನೋಡಿದ್ದೇವೆ.
ಈ Zenfone Max M1 ಇದರಲ್ಲಿ 5.45 ಇಂಚಿನ ಎಚ್ಡಿ + ಡಿಸ್ಪ್ಲೇಯನ್ನು 2.5 ಡಿ ಕರ್ವ್ ಗಾಜಿನೊಂದಿಗೆ ಹೊಂದಿದೆ ಮತ್ತು 82% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಇದರ ಹುಡ್ ಅಡಿಯಲ್ಲಿ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಚಿಪ್ಸೆಟ್ ಅನ್ನು ಹೊಂದಿದೆ. ಇದು 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಸೇರಿಕೊಂಡಿರುತ್ತದೆ. ಇದರಲ್ಲಿ 256GB ವರೆಗಿನ ಸ್ಟೋರೇಜ್ ವಿಸ್ತರಣೆಗಾಗಿ ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್ನೊಂದಿಗೆ 4000mAh ಬ್ಯಾಟರಿ ಒಳಗೊಂಡಿದೆ.
ಇದರ ಕ್ಯಾಮೆರಾಗಳಂತೆ Zenfone Max M1 ನಿಮಗೆ f/ 2.0 ಅಪರ್ಚರ್, 4 ಪಿ ಲೆನ್ಸ್, 1.12ಮ್, ಪಿಡಿಎಎಫ್ ಮತ್ತು ಎಲ್ಇಡಿ ಫ್ಲಾಶ್ಗಳೊಂದಿಗೆ ಹಿಂಭಾಗದಲ್ಲಿ 13MP ಶೂಟರ್ ಹೊಂದಿದೆ. ಆಸಸ್ ಅದರ ಪಿಕ್ಸೆಲ್ ಮಾಸ್ಟರ್ ಕ್ಯಾಮೆರಾ ಅಪ್ಲಿಕೇಶನನ್ನು ಸೇರಿದೆ. ಇದು ಆಟೋ, ಬ್ಯೂಟಿ, ಪ್ರೊ, ಪನೋರಮಾ, ಟೈಮ್ ಲ್ಯಾಪ್ಸ್, ಪೋಟ್ರೇಟ್ ಮತ್ತು HDR ಯಂತಹ ಕ್ಯಾಮೆರಾ ವಿಧಾನಗಳನ್ನು ಹೊಂದಿದೆ. ಮುಂಭಾಗದ ಭಾಗದಲ್ಲಿ ಫೋನ್ 8MP ಫ್ರಂಟ್-ಫೇಸಿಂಗ್ ಕ್ಯಾಮರಾವನ್ನು f/ 2.2 ಅಪರ್ಚರ್ ಮತ್ತು LED ಫ್ಲಾಶ್ಗಳೊಂದಿಗೆ ಹೊಂದಿದೆ.
Asus Zenfone Lite L1 1 5.45-ಇಂಚಿನ ಎಚ್ಡಿ + ಡಿಸ್ಪ್ಲೇನೊಂದಿಗೆ ಸಹ ಸಾಗಿಸುತ್ತದೆ, ಆದರೆ ಇದು 2.5 ಡಿ ವಕ್ರ ಗಾಜಿನನ್ನು ಹೊಂದಿರುವುದಿಲ್ಲ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಚಿಪ್ಸೆಟ್ನಿಂದ ಕೂಡಿದೆ ಇದು 2GB ರಾಮ್ ಮತ್ತು 16GB ಇಂಟರ್ನಲ್ ಸ್ಟೋರೇಜ್ ಜೋಡಿಸಲ್ಪಟ್ಟಿದೆ. ನೀವು ಮೀಸಲಿಟ್ಟ ಮೈಕ್ರೊ SD ಕಾರ್ಡ್ ಸ್ಲಾಟ್ನ ಸಹಾಯದಿಂದ ಸ್ಟೋರೇಜ್ ವಿಸ್ತರಿಸಬಹುದು. Zenfone Lite L1 ನಲ್ಲಿ ಕ್ಯಾಮೆರಾಗಳು ಹಿಂಭಾಗದಲ್ಲಿ 13MP ಶೂಟರ್ ಅನ್ನು ಒಳಗೊಂಡಿರುತ್ತದೆ. ಇದು Zenfone Max M1 ರಂತೆ ಇರುತ್ತದೆ ಆದರೆ ಮುಂಭಾಗದಲ್ಲಿ ಇದು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Zenfone Max M1 ನಲ್ಲಿ 2GB ಯ RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ಕೇವಲ 5,999 ಹೊಂದಿದ್ದು 3GB ಯ RAM ಮತ್ತು 32GB ಸ್ಟೋರೇಜ್ 8,999 ರೂಗಳಲ್ಲಿದೆ. ಆದರೆ ಫೆಸ್ಟಿವಲ್ ಸೀಸನಲ್ಲಿ 7,499 ರೂಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಮತ್ತು Asus Zenfone Lite L1 ಬೆಲೆ 6,999 ರೂ. ಆದರೆ ಹಬ್ಬದ ಋತುವಿನಲ್ಲಿ ಇದನ್ನು 5,999 ರೂ.ಗೆ ತೆಗೆದುಕೊಳ್ಳಬಹುದು. ಈ ಎರಡೂ ಫೋನ್ಗಳು ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile